ಶಾಲೆಗೆ ಬಂದ ಕಾಳಿಂಗ, ಗಾಂಜಾ ಹೊಡೆಯುತ್ತಿದ್ದವರ ಬಂಧನ!, ವಾಹನ ಸವಾರರಿಗೆ ಪೊಲೀಸ್ ಪ್ರಕಟಣೆ! TODAY@ NEWS

The king cobra seen in the school. Excise police arrest those who were smuggling ganja!, police issue notice to motorists!

ಶಾಲೆಗೆ ಬಂದ ಕಾಳಿಂಗ, ಗಾಂಜಾ ಹೊಡೆಯುತ್ತಿದ್ದವರ ಬಂಧನ!,  ವಾಹನ ಸವಾರರಿಗೆ ಪೊಲೀಸ್ ಪ್ರಕಟಣೆ! TODAY@ NEWS
king cobra Karnataka

KARNATAKA NEWS/ ONLINE / Malenadu today/ Aug 25, 2023 SHIVAMOGGA NEWS

ಗಾಂಜಾ ವ್ಯಸನಿಗಳ ಬಂಧನ 

ಶಿವಮೊಗ್ಗ ಜಿಲ್ಲೆ ಸಾಗ ಸಾಗರ ತಾಲ್ಲೂಕು ಅಬಕಾರಿ ಅಧಿಕಾರಿಗಳು  ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಇಬ್ಬರು ಗಾಂಜಾ ವ್ಯಸನಿಗಳನ್ನೂ ಬಂಧಿಸಿದ್ಧಾರೆ. ಅನುಮಾನದ ಮೇರೆಗೆ ಇಬ್ಬರನ್ನ ಸೆರೆ ಹಿಡಿದು ವೈದ್ಯಕೀಯ ಪರೀಕ್ಷೆ ನೆಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿದ್ದು,  ಆರೋಪಿಗಳ ವಿರುದ್ಧ ಏನ್. ಡಿ. ಪಿ. ಎಸ್. ಕಾಯ್ದೆ 1985 ರ ಕಲಂ 27 (b) ರಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 


ಶಾಲೆಗೆ ಬಂದ  ಕಾಳಿಂಗ 

ಶೃಂಗೇರಿ ತಾಲೂಕಿನ ಕೆರೆಮನೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 14 ಅಡಿ ಉದ್ದದ ಕಾಳಿಂಗ ಸರ್ಪವೊಂದು ಪ್ರತ್ಯಕ್ಷವಾಗಿತ್ತು.  ತರಗತಿಯೊಳಗಿದ್ದ ಹಾವನ್ನ ಉರಗ ರಕ್ಷಕ ಜೈ ಕುಮಾರ್ ಅವರು  ಹಿಡಿದು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. 


ಶಿವಮೊಗ್ಗ ಸಾರ್ವಜನಿಕರ ಗಮನಕ್ಕೆ

ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ, ಶಿವಮೊಗ್ಗ ನಗರದಲ್ಲಿ ಅಳವಡಿಸಲಾದ SVD, RLVD, ANPR, ASVD & PTZ ಕ್ಯಾಮೆರಾಗಳು ಸ್ವಯಂ ಚಾಲಿತವಾಗಿ Command and Control Center ಗೆ ಕಳುಹಿಸುವ, ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಫೋಟೋ ಮತ್ತು ವಿಡಿಯೋಗಳನ್ನು ಪರಿಶೀಲಿಸಿ ITMS ತಂತ್ರಾಂಶದ ಸಹಾಯದಿಂದ ವಾಹನಗಳ ಮಾಲೀಕರಿಗೆ SMS / ಅಂಚೆ ಮೂಲಕ ನೋಟಿಸ್‌ ಗಳನ್ನು ದಿನಾಂಕಃ 28-08-2023 ರಿಂದ ಕಳುಹಿಸಲಾಗುವುದು,

ಆದರಿಂದ ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಪೊಲೀಸ್​ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  

ಇನ್ನಷ್ಟು ಸುದ್ದಿಗಳು