KIng cobra / ಮಾರುತಿ ವ್ಯಾನ್​ನಲ್ಲಿದ್ದ ಕಾಳಿಂಗ ಸರ್ಪ!/ ಆಗುಂಬೆಯ ಈ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ಆಗ್ತಿದೆ ವೈರಲ್

King cobra in Maruti van!/ This video of Agumbe is going viral on social media

KIng cobra / ಮಾರುತಿ ವ್ಯಾನ್​ನಲ್ಲಿದ್ದ ಕಾಳಿಂಗ ಸರ್ಪ!/ ಆಗುಂಬೆಯ ಈ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ಆಗ್ತಿದೆ ವೈರಲ್
King cobra in Maruti van!/ This video of Agumbe is going viral on social media

KARNATAKA NEWS/ ONLINE / Malenadu today/ May 7, 2023 GOOGLE NEWS 

ಬೆಂಗಳೂರು/ ಇದು ವೈರಲ್ ಯುಗ, ಈಗಿನ ಟ್ರೆಂಡ್​ನಲ್ಲಿ ಯಾವುದೋ ಹಳೆಯ ವಿಡಿಯೋಗಳೆಲ್ಲಾ ಒಂದೇ ಸಲಕ್ಕೆ ಹೊಸ ಹೊಸ ವೀವ್ಸ್  ಪಡೆದುಕೊಳ್ಳಲು ಆರಂಭಿಸುತ್ತದೆ. ಸದ್ಯ ಮಾರುತಿ ವ್ಯಾನ್​ನಲ್ಲಿದ್ದ ಕಾಳಿಂಗವನ್ನು ಹಿಡಿಯುತ್ತಿರುವ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 

MISSING /  ಇವರಿಬ್ಬರನ್ನ ಎಲ್ಲಾದರೂ ಕಂಡೀದ್ದೀರಾ? ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ 

ವಿಡಿಯೋವನ್ನು  ಭಾರತೀಯ ಅರಣ್ಯಸೇವೆಯ ಅಧಿಕಾರಿ ಸುಶಾಂತ್ ನಂದಾ ರವರ ಟ್ವಿಟ್ಟರ್‌ನಲ್ಲಿ ಮೊದಲು ಪೋಸ್ಟ್ ಆಗಿದ್ದು ಆನಂತರ ಎಲ್ಲೆಡೆ ವೈರಲ್​ ಆಗಿದೆ. ವಿಶೇಷ ಅಂದರೆ, ಈ ವಿಡಿಯೋ ದೃಶ್ಯ ಶಿವಮೊಗ್ಗ ಜಿಲ್ಲೆ ಆಗುಂಬೆಯದ್ದಾಗಿದೆ  ಹನ್ನೊಂದು ತಿಂಗಳ ಹಿಂದೆ ಯೂಟ್ಯೂಬ್​ನಲ್ಲಿ ಅಪ್ಲೋಡ್ ಆಗಿದ್ದ ವಿಡಿಯೋವನ್ನ ಐಎಫ್​ಎಸ್ ಅಧಿಕಾರಿ ಮತ್ತೊಮ್ಮೆ ಟ್ವೀಟ್ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ

ಏನಿದೆ ವಿಡಿಯೋದಲ್ಲಿ

15 ಅಡಿ ಉದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿಯುವ  ಎಸ್ ಎಸ್​ ಜಯಕುಮಾರ್​, ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತಿರುವ ವಿಡಿಯೋವನ್ನ ಸುಶಾಂತ್ ನಂದಾ ಹಂಚಿಕೊಂಡಿದ್ದು, ಸದ್ಯ ದೃಶ್ಯ ವೈರಲ್​ ಆಗಿದೆ. 

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ

11 ತಿಂಗಳ ನಂತರ ಮತ್ತೆ ವೈರಲ್​ 

ಹೋದ ವರ್ಷ  ಶಿವಮೊಗ್ಗದ (Shivamogga) ಆಗುಂಬೆ (Agumbe) ಯಲ್ಲಿನ ನಿವಾಸಿಯೊಬ್ಬರ ಮನೆಯಲ್ಲಿ ಕಾಳಿಂಗ ವೊಂದು ಕಾಣಿಸಿಕೊಂಡಿತ್ತು. ಅವರ ಮನೆಯ ಮಾರುತಿ ವ್ಯಾನ್​ನಲ್ಲಿ ಹಾವು ಹರಿದಾಡುತ್ತಿತ್ತು. ಇದನ್ನ ನೋಡಿ ಮನೆಯವರು ಹಾವು ಹಿಡಿಯುವ ತಜ್ಞರಿಗೆ ವಿಷಯ ತಿಳಿಸಿದ್ದಾರೆ. ವಾಹನದಲ್ಲಿ ಕಾಳಿಂಗ ಇದೆ ಎಂಬುದನ್ನ ಕೇಳಿ ಎಸ್​ಎಸ್ ಜಯಕುಮಾರ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಬಂದಿದ್ಧಾರೆ.  ಅಂದಹಾಗೆ, ದೇಶದಲ್ಲಿ ಹಾವುಗಳ ಸಂರಕ್ಷಣೆಯಲ್ಲಿ ತೊಡಗಿರುವ ತಜ್ಞರ ಪೈಕಿ ಜಯಕುಮಾರ್​ ಕೂಡ ಒಬ್ಬರು

ಯೂಟ್ಯೂಬ್​ನಲ್ಲಿದೆ ವಿಡಿಯೋ

ವಿಶೇಷ ಗಮನ ಹರಿಸಿ,  ಕಾಳಿಂಗ ಸರ್ಪ King cobra (Ophiophagus hannah) ವನ್ನು ಹೊರತೆಗೆದು ಹಿಡಿದು ಅದನ್ನ ಚೀಲಕ್ಕೆ ತುಂಬಿಸಿ ನಂತರ ಕಾಡಿಗೆ ಬಿಟ್ಟಿದ್ದಾರೆ. ಆನಂತರ ಈ ದೃಶ್ಯವನ್ನು ಅವರು  ಯೂಟ್ಯೂಬ್​ ಚಾನಲ್​ Living Zoology  ನಲ್ಲಿ ಅಪ್​ಲೋಡ್ ಮಾಡಿದ್ದರು. ಈ ವಿಡಿಯೋ ಇದೀಗ ಸುಶಾಂತ್ ಟ್ವೀಟ್​ನೊಂದಿಗೆ ಮತ್ತೆ ವೈರಲ್​ ಆಗಿದೆ. 

ಕ್ಷಿಪ್ರ ಕಾರ್ಯಾಚರಣೆ/  ಶಿವಮೊಗ್ಗದ ಇಬ್ಬರು ಸೇರಿದಂತೆ ರಾಜ್ಯ ನಾಲ್ವರು ವಿದ್ಯಾರ್ಥಿಗಳು ಮಣಿಪುರದಲ್ಲಿ ಸೇಫ್​ 

ಬೆಂಗಳೂರು/ ದೂರದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಲ್ಲಿ ಸಿಲುಕಿದ್ದ ಶಿವಮೊಗ್ಗ ಇಬ್ಬರು ಸೇರಿದಂತೆ ರಾಜ್ಯದ ನಾಲ್ವರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ  ಕಾರ್ಯಾಚರಣೆ ನಡೆಯುತ್ತಿದೆ. ಅಂದುಕೊಂಡಂತೆ ನಡೆದರೆ, ಇವತ್ತು ರಾತ್ರಿ ನಾಲ್ವರು ವಿದ್ಯಾರ್ಥಿಗಳು ತವರಿಗೆ ವಾಪಸ್ ಬರಲಿದ್ದಾರೆ. 

ರಾಜ್ಯದ  ನಾಲ್ವರು ವಿದ್ಯಾರ್ಥಿಗಳನ್ನು, ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೈಗೊಂಡಿದೆ. ಈ ಪೈಕಿ ಶಿವಮೊಗ್ಗದ  ವಾರ್ತಾ ಮತ್ತು ಪ್ರಚಾರ ಇಲಾಖೆಯ ನೌಕರರಾದ ತಿಪ್ಪೇಸ್ವಾಮಿಯವರ ಪುತ್ರ ಮನೋಜ್ ಹಾಗೂ ತೀರ್ಥಹಳ್ಳಿ ತಾಲ್ಲೂಕು ನಿವಾಸಿ ವಿಶಾಲ್​ ಪ್ರಪುಲ್ಲಚಂದ್ರರವರ ಪುತ್ರಿ ಅಪ್ಸರ ಹಾಗೂ ಚಿಕ್ಕಮಗಳೂರಿನ ಓರ್ವರು ಸೇರಿದಂತೆ ಬಾಗಲಕೋಟೆಯ ವಿದ್ಯಾರ್ಥಿಯೊಬ್ಬರಿದ್ದಾರೆ. ಇವರುಗಳು ಕಾಲೇಜೊಂದರಲ್ಲಿ ಓದುತ್ತಿದ್ದಾರೆ. 

ಇನ್ನೂ ನಾಲ್ವರನ್ನು ಅವರುಗಳ ಹಾಸ್ಟೆಲ್​ನಿಂದ ಪೊಲೀಸ್ ಭದ್ರತೆಯೊಂದಿಗೆ  ಮಣಿಪುರದ ಇಂಫಾಲ ಕ್ಕೆ ಕರೆತರಲಾಗಿದೆ. ಅಲ್ಲಿಂದ ಅಸ್ಸಾಂನ ಗೌಹಾತಿ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಕರೆತರಲಾಗಿದ್ದು, ರಾತ್ರಿ ವೇಳೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media