ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ

Two killed in collision between two cars / ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ದೇವಂಗಿ ಸಮೀಪದ ವಾಟಗಾರು ಬಳಿಯಲ್ಲಿ ನಿನ್ನೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಲ್ಲಿನ ಸೊಪ್ಪುಗುಡ್ಡೆ ನಿವಾಸಿಗಳಿಬ್ಬರು ಸಾವನ್ನಪ್ಪಿದ್ದಾರೆ.

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ

KARNATAKA NEWS/ ONLINE / Malenadu today/ May 7, 2023 GOOGLE NEWS 

ತೀರ್ಥಹಳ್ಳಿ/ ಶಿವಮೊಗ್ಗ:  ಇಲ್ಲಿನ ದೇವಂಗಿ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.  ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸಾವನ್ನಪ್ಪಿದ್ಧಾರೆ. ನಿನ್ನೆ ಭಾನುವಾರ ಈ ಘಟನೆ ಸಂಭವಿಸಿದೆ. 

Narendra modi/  ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

ಘಟನೆಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತೀರ್ಥಹಳ್ಳಿಯ ವಾಟಗಾರು ಸಮೀಪ ಘಟನೆ ಸಂಭವಿಸಿದೆ. 

ಕೊಪ್ಪದಿಂದ ತೀರ್ಥಹಳ್ಳಿಗೆ ಬರುವ ಮಾರ್ಗ ಇದಾಗಿದ್ದು, ಮಾರುತಿ ಸ್ವಿಫ್ಟ್ ಹಾಗೂ ಫಿಗೋ ಕಾರಿನ ನಡುವೆ ಡಿಕ್ಕಿಯಾಗಿದೆ. 

ಹೈವೆಯಲ್ಲಿ ನಿಯಂತ್ರಣ ತಪ್ಪಿದ ಕಾರು/ ಧರೆಗೆ ಗುದ್ದಿ ನುಜ್ಜುಗುಜ್ಜು! 

ಘಟನೆಯಲ್ಲಿ  ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಡಾಕಪ್ಪ ಗೌಡ(70), ಶ್ರೀನಿವಾಸ್ ಗೌಡ ಶಿರೂರು (72) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶ್ರೇಯಸ್ ಸೊಪ್ಪುಗುಡ್ಡೆ ಅವರಿಗೆ ಗಂಭೀರ ಗಾಯವಾಗಿದೆ. ಇನ್ನೊಂದು ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡವರು ವೆನ್ಲಾಕ್ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು  ಚಿಕಿತ್ಸೆ ಪಡೆಯುತ್ತಿದ್ದಾರೆ. 


Narendra modi/  ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್



ಶಿವಮೊಗ್ಗ/ ಪ್ರಧಾನಿ ನರೇಂದ್ರ ಮೋದಿ ಯವರು ಪಾಲ್ಗೊಂಡಿದ್ದ ಆಯನೂರು ಸಮಾವೇಶದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವೊಂದು ದಾಖಲಾಗಿದೆ. 

bhadravati /  ಭದ್ರಾವತಿ ವಿಧಾನಸಭಾ ಕ್ಷೇತ್ರ ! ಯಾರು ನಿರ್ಣಾಯಕ? ಕ್ಷೇತ್ರದಲ್ಲಿ ಹೇಗಿದೆ ಪೈಪೋಟಿ 

ಶಿವಮೊಗ್ಗದ ಕುಂಸಿ ಪೊಲೀಸ್ ಸ್ಟೇಷನ್  ನಲ್ಲಿ ಈ ಸಂಬಂಧ ಕೇಸ್ ಆಗಿದ್ದು, ಚುನಾವಣಾ ಫ್ಲೈಯಿಂಗ್ ಸ್ಕ್ವ್ಯಾಡ್​ ಅಧಿಕಾರಿ ನೀಡಿದ ದೂರಿನನ್ವಯ ಚುನಾವಣಾ ಏಜೆಂಟ್ ವಿರುದ್ಧ  ಎಫ್​ಐಆರ್ ಆಗಿದೆ. 

ನಡೆದಿದ್ದೇನು?

ದಿನಾಂಕ:-06-05-2023 ರಂದು  ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ -111 ವ್ಯಾಪ್ತಿಯಲ್ಲಿ ಬರುವ ಆಯನೂರು ವ್ಯಾಪ್ತಿಯಲ್ಲಿ,    ಬಿಜೆಪಿ ಪಕ್ಷದವರು ಪ್ರಧಾನ ಮಂತ್ರಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟಂತೆ ಕಟೌಟ್‌ ಹಾಗೂ ಪ್ಲಾಗ್ ಗಳನ್ನು ಕಟ್ಟುತ್ತಿದ್ದರು.

narendramodi/  ನರೇಂದ್ರ ಮೋದಿ ನಮಸ್ಕಾರವನ್ನು ಮನೆಮನೆಗೂ ತಲುಪಿಸಿ ಎಂದು ಟಾಸ್ಕ್​ ಕೊಟ್ಟ ಪ್ರಧಾನಿ!  ಮೋದಿ ಮಾತಿನ ಪೂರ್ತಿ ವಿವರ ಇಲ್ಲಿದೆ

 ಆಯನೂರು ಕೋಹಳ್ಳಿ, ಬಸ್‌ ನಿಲ್ದಾಣ, ವಿದ್ಯುತ್ ಕಂಬಗಳು ಅರಣ್ಯ ಇಲಾಖೆ ಸಂಬಂಧಿಸಿದ ಬೋರ್ಡಗಳಿಗೆ ಪಕ್ಷದ ಬಾವುಟಗಳನ್ನು ಕಟ್ಟಿದ್ದಾರೆ. ಅನುಮತಿ ಪಡೆಯದೇ  ಚುನಾವಣಾ ನೀತಿ ಸಂಹಿತೆ ಉಲಂಘಿಸಿಲಾಗಿದೆ ಎಂದು ಈ ಸಂಬಂಧ ದೂರು ನೀಡಲಾಗಿದೆ. 

  KARNATAKA OPEN PLACE DISFIGUREMENT ACT 1951 & 1981 (U/s-3); IPC 1860 (U/s-188)  ಅಡಿಯಲ್ಲಿ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ.  


Bhadravati/ ಕ್ರಿಕೆಟ್ ಬೆಟ್ಟಿಂಗ್/ ನಾಲ್ವರ ವಿರುದ್ಧ ದಾಖಲಾಯ್ತು ಕೇಸ್​ !

ಭದ್ರಾವತಿ/ ಶಿವಮೊಗ್ಗ ಭದ್ರಾವತಿ ಓಲ್ಡ್​ ಟೌನ್​ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ನಡೆಸ್ತಿದ್ದ ನಾಲ್ವರನ್ನ ಬಂಧಿಸಿದ್ದಾರೆ.

ಮಾಜಿ ಶಾಸಕರ ತೋಟದ ಮನೆಗೆ ನುಗ್ಗಿ ಒಂದು ಕೆಜಿ ಚಿನ್ನ ದರೋಡೆ! ಬಂದೂಕು ತೋರಿಸಿ 15 ಜನರ ತಂಡದ ಕೃತ್ಯ!

ಕಳೆದ ಆರನೇ ತಾರೀಖು, ಓಲ್ಡ್​ ಟೌನ್​ ಪಿಎಸ್​ಐಗೆ  ಬೆಟ್ಟಿಂಗ್ ನಡೆಯುತ್ತಿರುವುದರ ಬಗ್ಗೆ ಮಾಹಿತಿ ಬಂದಿದೆ.

ನಗರದ ಮಾಧವಾಚಾ‌ರ್​ ಸರ್ಕಲ್‌ ಭೂತನಗುಡಿ, ಟಿಕೆ ರಸ್ತೆ, ಗಾಂಧಿ ಸರ್ಕಲ್‌ ,ಗುಂಡುರಾವ್‌ ಶೆಡ್‌ ಮುಂತಾದ ಏರಿಯಾಗಳಲ್ಲಿ ಗಸ್ತು ಹೊರಟಿದ್ದಾರೆ. ಈ ವೇಳೇ  ಟಿಕೆ ರಸ್ತೆ ಫೈ ಓವರ್ ಕೆಳಗೆ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವುದು ಕಂಡು ಬಂದಿದೆ. ಸದ್ಯ ಪ್ರಕರಣ ಸಂಬಂಧ ಪೊಲೀಸರೇ ಕೋರ್ಟ್ ಪರ್ಮಿಶನ್​ ಪಡೆದು ಸಮುಟೋ ಕೇಸ್ ದಾಖಲಿಸಿದ್ದು, ಮಂಜುನಾಥ್​ ಸೇರಿದಂತೆ ನಾಲ್ವರ ವಿರುದ್ಧ  ಕಲಂ 78(1)(A) (VI) ಕೆ.ಪಿ,ಆಕ್ಟ್ ನಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ.  


 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media