ಮೊರಾರ್ಜಿ ದೇಸಾಯಿ ಶಾಲೆ ಆವರಣದಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ

King cobra spotted in Morarji Desai School premises

ಮೊರಾರ್ಜಿ ದೇಸಾಯಿ ಶಾಲೆ ಆವರಣದಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ
King cobra spotted in Morarji Desai School premises

KARNATAKA NEWS/ ONLINE / Malenadu today/ Jun 3, 2023 SHIVAMOGGA NEWS

ಶಿವಮೊಗ್ಗ/ ಗಾಜನೂರಿನ ಮೂರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಶಾಲಾ ಆವರಣದಿಂದ ವಿದ್ಯಾರ್ಥಿಗಳ ವಸತಿ ಶಾಲೆಯೊಳಗೆ ಬರುತ್ತಿರುವುದನ್ನು ಗಮನಿಸಿದ ಶಾಲಾ ಮುಖ್ಯ ಶಿಕ್ಷಕರು ಕೂಡಲೆ ಉರಗ ರಕ್ಷಕರಿಗೆ ಕರೆ ಮಾಡಿದ್ದಾರೆ. 

ಇನ್ನೂ ವಿಷಯ ತಿಳಿದು  ಸ್ಥಳಕ್ಕೆ ಆಗಮಿಸಿದ ಸ್ನೇಕ್ ವಿಕ್ಕಿ, ಸ್ನೇಕ್ ರಂಜನ್, ಸ್ನೇಕ್ ಸುಹಾಸ್ ಮತ್ತು ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಉರಗಗಳ ಸಂಶೋಧನ ವಿದ್ಯಾರ್ಥಿಯಾದ  ಎಂ.ಎಸ್ ಜಯಂತ್ ಬಾಬರವರು ಹಾವನ್ನ ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು.



ಕೆಲವೇ ನಿಮಿಷದಲ್ಲಿ  ತಮ್ಮ ತಂಡದೊಂದಿಗೆ ಕಾಳಿಂಗ ಸರ್ಪವನ್ನು ಹಿಡಿದ ಜಯಂತ್ ಬಾಬು ಮತ್ತವರ ತಂಡ, ಅದನ್ನು  ಅರಣ್ಯ ಸಿಬ್ಬಂದಿಗಳ ಸಮ್ಮುಖದಲ್ಲಿ ಅರಣ್ಯಪ್ರದೇಶಕ್ಕೆ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ.


ಇವರ ಬಗ್ಗೆ ಸುಳಿವು ಸಿಕ್ಕರೆ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ!

ಶಿವಮೊಗ್ಗ,   ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (doddapete police station shivamogga) ವಿವಿಧ ದಿನಾಂಕಗಳಂದು ಕಾಣೆಯಾದವರ ಬಗ್ಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು ಮನವಿ ಮಾಡಿದ್ದಾರೆ. 

ಮಂಗಳೂರು ಏರ್​ಪೋರ್ಟ್​ನಲ್ಲಿ ಸ್ಫೋಟಕ ಇಟ್ಟಿದ್ದ ಆದಿತ್ಯರಾವ್ ವಿರುದ್ಧ ಶಿವಮೊಗ್ಗಲ್ಲಿ ಕೇಸ್ ! ಕಾರಣವೇನು?

ದಿ:04/12/2022 ರಂದು ನಗರದ ಹೊಸಮನೆ 4ನೇ ಕ್ರಾಸ್‍ನಲ್ಲಿ ವಾಸವಿರುವ ಸುರೇಶ್ ಎಂಬುವವರ ತಂದೆ 65 ವರ್ಷದ ಮುನಿಸ್ವಾಮಿ ಎಂಬುವವರು ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈತನ ಚಹರೆ 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣಾ ಮೈಕಟ್ಟು, ತಲೆಯಲ್ಲಿ ಕಪ್ಪುಬಿಳಿ ಕೂದಲು ಹೊಂದಿದ್ದು, ಎಡಗೈ ಬೆರಳುಗಳು ಸಣ್ಣದಾಗಿರುತ್ತದೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ.  

292 ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ ! ಶಿವಮೊಗ್ಗ ಜಿಲ್ಲೆಯ ಸ್ಟೇಷನ್​​ಗಳಿಗೆ ಯಾರೀಗ ಇನ್​ಸ್ಪೆಕ್ಟರ್​ ! ವಿವರ ಇಲ್ಲಿದೆ

ದಿ: 15/01/2023 ರಂದು ನಗರದ ಮದಾರಿಪಾಳ್ಯ 1ಕ್ರಾಸ್‍ನಲ್ಲಿ ವಾಸವಿರುವ ಮೊಹಮದ್ ಸಮೀರ್ ಎಂಬುವವರ ತಂದೆ ಎನ್.ಟಿ.ರಸ್ತೆ ಕರ್ನಾಟಕ ಬ್ಯಾಂಕ್ ಹತ್ತಿರ ವಾಸವಿದ್ದ ಬಸವರಾಜಪ್ಪ ಬಿನ್ ಪಕೀರಪ್ಪ ಎಂಬ 60 ವರ್ಷದ ವ್ಯಕ್ತಿ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ.  ಈತನು 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಉದ್ದನೆಯ ಮುಖ, ಬಿಳಿ ಕೂದಲು ಹೊಂದಿರುತ್ತಾರೆ. 

ನೆರೆಮನೆಯ ವ್ಯಕ್ತಿಯಿಂದ ಅಶ್ಲೀಲ ವರ್ತನೆ! ಕಿರುಕುಳ ಆರೋಪ! ಎಫ್​ಐಆರ್ ಹಾಕಿಸಲು ತಡರಾತ್ರಿ 1 ಗಂಟೆಯವರೆಗೂ ಪುಟ್ಟು ಮಗುವಿನ ಜೊತೆ ಸ್ಟೇಷನ್​ನಲ್ಲಿಯೇ ಕಾದ ಮಹಿಳೆ!

ಈ ಇಬ್ಬರು ವ್ಯಕ್ತಿಗಳ ಸುಳಿವು ಯಾರಿಗಾದರೂ ಸಿಕ್ಕಲ್ಲಿ ದೊಡ್ಡಪೇಟೆ ಪೆÇಲೀಸ್ ಠಾಣೆ ಶಿವಮೊಗ್ಗ, ಜಿಲ್ಲಾ ನಿಸ್ತಂತು ಕೇಂದ್ರ ಅಥವಾ ಪೆÇಲೀಸ್ ಕಂಟ್ರೋಲ್ ರೂಂ ಸಂಖ್ಯೆ 100, ದೂ.ಸಂ: 08182-261414/261416 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. (ಛಾಯಾಚಿತ್ರ ಲಗತ್ತಿಸಿದೆ) 

ಹೊಸ ವ್ಯಾಪಾರ ಆರಂಭಿಸಲು ಅವಕಾಶ! ಶಿವಮೊಗ್ಗ ಎಪಿಎಂಸಿಯಲ್ಲಿ ಮಳಿಗೆಗಳ ಬಾಡಿಗೆಗೆ ಹರಾಜು! ಇಲ್ಲಿದೆ ವಿವರ

ಶಿವಮೊಗ್ಗದ ಎ.ಪಿ.ಎಂ.ಸಿ. ಯಲ್ಲಿ ನಿರ್ಮಾಣ ಮಾಡಿರುವ 32 ಮಳಿಗೆಗಳನ್ನು ಬಾಡಿಗೆ ಹರಾಜು ಮಾಡಲಾಗುತ್ತಿದ್ದು,  ಆಸಕ್ತರಿಂದ ಅರ್ಜಿ ಆಹಾನಿಸಿದೆ. 

shimoga crime news today live/ ಕಾಡಿನಲ್ಲಿ ಮಹಿಳೆಯ ಶವ! ಹೊಲದಲ್ಲಿ ಅರೆಬರೆ ಸುಟ್ಟ ಪುರಷನ ಶವ ಪತ್ತೆ! ಅನುಮಾನ ಮೂಡಿಸಿದ ಎರಡು ಸಾವು!?

ಈ ಮಳಿಗೆಗಳು ಭಾರ್ಗವಿ ಪೆಟ್ರೋಲ್ ಬಂಕ್ ಹಾಗೂ ಬಿ.ಎಸ್.ಎನ್.ಎಲ್ ಮುಂಭಾಗದಲ್ಲಿ ಬಿ.ಹೆಚ್ ರಸ್ತೆಗೆ ಅಭಿಮುಖವಾಗಿದ್ದು, ಉತ್ತಮವಾದ ಗಾಳಿ, ಬೆಳಕು, ನೆರಳಿನ ಮರಗಳು, ಗ್ರಾಹಕರ ವಾಹನ ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶ ಲಭ್ಯವಿರುತ್ತದೆ. ಈ ಸ್ಥಳವು ಪ್ರಮುಖ ವಸತಿ ಲೇಔಟ್‍ಗಳಿಗೆ ಹತ್ತಿರವಿದ್ದು, ಕಾನೂನಿನಡಿಯಲ್ಲಿ ನಡೆಸಬಹುದಾದ ವಹಿವಾಟು ನಡೆಸಲು ಅನುಕೂಲವಾಗಿರುತ್ತದೆ.

ಇಲ್ಲಿ ಕ್ಲಿನಿಕ್, ಜೆರಾಕ್ಸ್, ಕಿರಾಣಿ, ಔಷಧಿಗಳು, ಬೇಕರಿ, ಲಾಯರ್, ಆಡಿಟರ್ ಆಫೀಸ್‍ಗಳನ್ನು ಹಾಗೂ ಇತರೆ ವ್ಯವಹಾರಗಳನ್ನು ನಡೆಸಬಹುದಾಗಿದೆ.  ಇದಲ್ಲದೇ ಎ.ಪಿ.ಎಂ.ಸಿ ಎಡಭಾಗದಲ್ಲಿ ನಿರ್ಮಾಣವಾಗುತ್ತಿರುವ ಮೂರು ಅಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿ ಸಬ್ ರಿಜಿಸ್ಟಾರ್ ಕಚೇರಿ, ಬ್ಯಾಂಕ್‍ಗಳು ಬರಲಿದ್ದು, ವ್ಯಾಪಾರ ವಹಿವಾಟು ನಡೆಸಲು ಸೂಕ್ತ ಸ್ಥಳವಾಗಿರುತ್ತದೆ.  

ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂ.09ರೊಳಗಾಗಿ ಸಲ್ಲಿಸುವಂತೆ ಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.   ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-250338 ನ್ನು ಸಂಪರ್ಕಿಸುವುದು

ಬಿಜೆಪಿ ಪರ ಅಧಿಕಾರಿಗಳೇ ಮೊದಲ ಟಾರ್ಗೆಟ್! ಸಂಸದರಿಗೆ ಸಹಕರಿಸುವ ಅಧಿಕಾರಿಗಳಿಗೆ ವರ್ಗಾವಣೆ ಎಂದ ಬೇಳೂರು ಗೋಪಾಲಕೃಷ್ಣ!

ಶಿವಮೊಗ್ಗ ನಗರದಲ್ಲಿ ನಡೆದ ನೂತನ ಸಚಿವ ಮಧು ಬಂಗಾರಪ್ಪರಿಗೆ ಸ್ವಾಗತ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಜಿಲ್ಲೆಯಲ್ಲಿ

 ಜಿಲ್ಲೆಯಲ್ಲಿನ ಅಧಿಕಾರಿಗಳ ಪೈಕಿ ಕೆಲವರು ಬಿಜೆಪಿ ಮನಸ್ಥಿತಿಯವರು ಇದ್ದಾರೆ, ಅಂತವರನ್ನ ಕಿತ್ತುಹಾಕಬೇಕಿದೆ ಎಂದರು. ಅಲ್ಲದೆ, ಜಿಲ್ಲೆಯಲ್ಲಿ ಸಂಸದರು ಹೇಳಿದ ಹಾಗೆ ಕೇಳುವ ಅವರಿಗೆ ಸಹಕಾರ ನೀಡುವ ಅಧಿಕಾರಿಗಳಿದ್ದು, ಈ ಹಿಂದೆ ಹಲವರು ಅವರ ಚೇಲಾಗಳ ರೀತಿಯಲ್ಲಿ ಕೆಲಸ ಮಾಡಿದ ಉದಾಹರಣೆಯಿದೆ, ಅಂತಹವರನ್ನ ವರ್ಗಾವಣೆ ಮಾಡಬೇಕಿದೆ ಎಂದರು. 

ಆರ್​ಎಂ ಮಂಜುನಾಥ್​ ಗೌಡರಿಗೆ ಕೆಪಿಸಿಸಿಯಿಂದ ಸಿಕ್ತು ಮಹತ್ತರ ಜವಾಬ್ದಾರಿ!

ದರಿದ್ರ  ಬಿಜೆಪಿ ಸರ್ಕಾರವನ್ನು ಕಿತ್ತು ಬಿಸಾಕಿದ್ದಕ್ಕೆ ಸಂತಸವಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಸವಾಲುಗಳಿವೆ. ಅವುಗಳನ್ನ ಸಮರ್ಥವಾಗಿ ಎದುರಿಸಲು,  ನಾವು ಮಧು ಬಂಗಾರಪ್ಪರವರ ಜೊತೆಗಿದ್ದೇವೆ ಎಂದು ಸಹಮತ ವ್ಯಕ್ತಪಡಿಸಿದರು. ಅಲ್ಲದೆ ಮಧು ಬಂಗಾರಪ್ಪನವರು ಮಂತ್ರಿಯಾಗಿರುವುದು ತಮಗೆ ಸಂತಸ ತಂದಿದೆ ಎಂದರು. 

ಮಂಗಳೂರು ಏರ್​ಪೋರ್ಟ್​ನಲ್ಲಿ ಸ್ಫೋಟಕ ಇಟ್ಟಿದ್ದ ಆದಿತ್ಯರಾವ್ ವಿರುದ್ಧ ಶಿವಮೊಗ್ಗಲ್ಲಿ ಕೇಸ್ ! ಕಾರಣವೇನು?

ರಾಜ್ಯದ ಜನರು ಕಾಂಗ್ರೆಸ್ ಗೆ ಸ್ಪಷ್ಟ ಬಹುಮತವನ್ನು ನೀಡಿದ್ದಾರೆ,  136 ಸ್ಥಾನವನ್ನು ನೀಡಿದ್ದು ಯಡಿಯೂರಪ್ಪ ಮುಖ್ಯಮಂತ್ರಿ ಯಾಗುತ್ತಾರೆ ಎಂದರೂ ಸಹ ಇಷ್ಟೊಂದು ಬಹುಮತವನ್ನು ನೀಡುತ್ತಿರಲಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಯನ್ನು ವ್ಯಂಗ್ಯವಾಡಿದ್ರಷ್ಟೆ ಅಲ್ಲದೆ, ಕಾಂಗ್ರೆಸ್​ನ ಸಾಮರ್ಥ್ಯವನ್ನು ಶ್ಲಾಘಿಸಿದರು. 

ಮೊಬೈಲ್​ ಕಳೆದುಕೊಂಡ ಬೆನ್ನಲ್ಲೆ ಅಕೌಂಟ್​ನಲ್ಲಿದ್ದ ಲಕ್ಷ ರೂಪಾಯಿನೂ ಮಾಯವಾಯ್ತು! ಹೀಗೂ ಮಾಡ್ತಾರೆ ಎಚ್ಚರ!

ಸಚಿವರಾದ ಬಳಿಕ ಶಿವಮೊಗ್ಗಕ್ಕೆ ಮೊದಲ ಭೇಟಿಕೊಟ್ಟ ಮಧು ಬಂಗಾರಪ್ಪ ಹೇಳಿದ್ದೇನು ಗೊತ್ತಾ?

ಶಿವಮೊಗ್ಗದಲ್ಲಿ ಕಾಂಗ್ರೆಸ್​ ನಾಯಕರು ನೀಡಿದ ಸ್ವಾಗತ ಹಾಗೂ ಅಭಿನಂದನೆಯನ್ನ ಸ್ವೀಕರಿಸಿದ ಮಾತನಾಡಿದ ನೂತನ ಸಚಿವ ಮಧು ಬಂಗಾರಪ್ಪ,  ಸಚಿವ ಸ್ಥಾನ ದೊರಕಿದ್ದಕ್ಕೆ ಶಿವಮೊಗ್ಗ ಜಿಲ್ಲೆಯ ಜನರಿಗೆ ಧನ್ಯವಾದ ತಿಳಿಸಿದ್ಧಾರೆ. 

ವೃದ್ಧನ ಕಿಡ್ನ್ಯಾಪ್​ ಕೇಸ್! 20 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದ ಅಪಹರಣಕಾರರು 24 ಗಂಟೆಯಲ್ಲಿ ಸೆರೆ

ಜಿಲ್ಲೆಯ ಜನರ ಜೊತೆಗಿರುತ್ತೇನೆ

ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಿದ್ದ ವೇಳೆ ನನಗೆ ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಅಭಿಮಾನ ತೊರಿದ್ದರು ಅದಕ್ಕೆ ನಾನು ಅಭಾರಿಯಾಗಿದ್ದೇನೆ,  ಮುಂದಿನ ಎಲ್ಲಾ ಚುನಾವಣೆಗಳ ಜವಾಬ್ದಾರಿ ಯನ್ನು ಹೊರುತ್ತೇನೆ ಹಾಗೂ ನಾನು ಜಿಲ್ಲೆಯ ಜನರ ಜೊತೆ ಇರುತ್ತೇನೆ ಎಂದರು,  

Madhubangarappa/ ನೂತನ ಸಚಿವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಕಳ್ಳರ ಕಾಟ! ಕಾಂಗ್ರೆಸ್​ ಮುಖಂಡರ ಮೊಬೈಲ್ ! 15 ಸಾವಿರ ದುಡ್ಡು ಕಳ್ಳತನ

ಸಚಿವ ಸ್ಥಾನದ ಸವಾಲು

ಈ ಸಚಿವ ಸ್ಥಾನ ನನಗೆ ಒಂದು ಸವಾಲು ಎಂದು ಮಧುಬಂಗಾರಪ್ಪ ಒಂದು ಕೋಟಿ ಕ್ಕಿಂತ ಹೆಚ್ಚು ಮಕ್ಕಳು ಹಾಗೂ ಮೂರುವರೆ ಲಕ್ಷಕ್ಕಿಂತ ಹೆಚ್ಚು ಶಿಕ್ಷಕರು ನಮ್ಮ ವ್ಯಾಪ್ತಿಗೆ ಬರುತ್ತಾರೆ. ಹಾಗಾಗಿ ಇದೊಂದು ಗುರುತರ ಜವಾಬ್ದಾರಿಯುಳ್ಳ ಸಚಿವ ಸ್ಥಾನ ಎಂದರು. 

ಎಲ್ಲೂ ಇಲ್ಲದ ಕಾರ್ಯಕ್ರಮ

ಇನ್ನೂ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ ಯಾವ ರಾಜ್ಯದಲ್ಲು ಇತಂಹ ಕಾರ್ಯಕ್ರಮ ಕೊಟ್ಟಿಲ್ಲ.ಬಿಜೆಪಿಯವರ ಬಾಯಿ‌ಮುಚ್ಚುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಬಿಜೆಪಿಯವರು 17 ಲಕ್ಷ ಕೋಟಿಯನ್ನು ಶ್ರೀಮಂತರಿಗೆ ಸಾಲ ಮನ್ನ ಮಾಡಿದ್ದಾರೆ. ಸಾಲ ಮನ್ನ ಮಾಡದೇ ಇದ್ದರೆ ಎಲ್ಕಾ ರಾಜ್ಯಗಳಿಗೆ ತಲಾ 50 ಸಾವಿರ ಕೋಟಿ ಕೂಡಬಹುದಾಗಿತ್ತು ಎಂದು ಟೀಕಿಸಿದ್ರು. 

ಎತ್ತು ಸಾಗಿಸ್ತಿದ್ದವನ ಮೇಲೆ ಹಲ್ಲೆ ಆರೋಪಕ್ಕೆ ದಾಖಲಾಯ್ತು 9 ಮಂದಿ ವಿರುದ್ಧ ಕೇಸ್! ಹೆಚ್ಚುವರಿಯಾಗಿ ಪೊಲೀಸರೇ ಹಾಕಿದ್ರು ಸುಮೋಟೋ ಕೇಸ್​

ಶಿರಾಳಕೊಪ್ಪ ಪೊಲೀಸ್ ಸ್ಠೇಷನ್​ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರ ಸಂಬಂಧ ಸುಮೊಟೋ ಕೇಸ್ ಹಾಗೂ ಹಲ್ಲೆ ಪ್ರಕರಣದ ಕೇಸ್ ದಾಖಲಾಗಿದೆ. ಎತ್ತುಗಳನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನ ತಡೆದು ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪದ ಅಡಿಯಲ್ಲಿ9 ಮಂದಿ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ. ಇನ್ನೂ ಪ್ರಾಣಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿಯಲ್ಲಿ ವಾಹನದ ಚಾಲಕನ ವಿರುದ್ಧವೂ ಕೇಸ್ ದಾಖಲಾಗಿದೆ. 

odisha balasore train accident/ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕಾಫಿನಾಡಿನ 110 ಮಂದಿ ಸುರಕ್ಷಿತ!

ನಡೆದಿದ್ಧೇನು? 

ಇಲ್ಲಿ ಮಂಚಿಕೊಪ್ಪ ಗ್ರಾಮದ ಬಳಿ ಶುಕ್ರವಾರ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆ ಎಂಬ ಆರೋಪದಡಿಯಲ್ಲಿ ವಾಹನವೊಂದನ್ನ ಗುಂಪೊಂದು ತಡೆದು ವಿಚಾರಿಸಿದೆ. ಆ ಸಂದರ್ಭದಲ್ಲಿ  ದಾದಾಪೀರ್ ಎಂಬುವವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದು, ಇನ್ನೊಂದೆಡೆ ಅಕ್ರಮವಾಗಿ ಎತ್ತುಗಳನ್ನ ಕೊಂಡೊಯ್ದ ಆರೋಪ ಸಂಬಂಧವೂ ಸುಮೊಟೊ ಕೇಸ್ ದಾಖಲಾಗಿದೆ.