shimoga crime news today live/ ಕಾಡಿನಲ್ಲಿ ಮಹಿಳೆಯ ಶವ! ಹೊಲದಲ್ಲಿ ಅರೆಬರೆ ಸುಟ್ಟ ಪುರಷನ ಶವ ಪತ್ತೆ! ಅನುಮಾನ ಮೂಡಿಸಿದ ಎರಡು ಸಾವು!?

KARNATAKA NEWS/ ONLINE / Malenadu today/ Jun 3, 2023 SHIVAMOGGA NEWS

shimoga crime news today live / ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಎರಡು ಸಾವಿನ ಪ್ರಕರಣಗಳು ಅನುಮಾನ ಮೂಡಿಸಿದೆ. ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿ ಅರೆಬರೆಟ್ಟ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಇನ್ನೊಂದು ಕಡೆ ತೀರ್ಥಹಳ್ಳಿ ತಾಲ್ಲೂಕಿನ ದೇವಂಗಿ ಸಮೀಪ ಕಾಡಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. 

ಅರಣ್ಯಪ್ರದೇಶದಲ್ಲಿ ಅರೆಬರೆ ಸುಟ್ಟು ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ !

ಸಾಗರ ತಾಲೂಕಿನ ತ್ಯಾಗರ್ತಿ  ಸಮೀಪದ ಬೆಳಂದೂರು ಚೆನ್ನಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮೃತದೇಹ  ಅರೆಬರೆ ಸುಟ್ಟ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. 

ಮೃತದೇಹ ಬೆಳಂದೂರು ಗ್ರಾಮದ ಬತ್ತಿ ರಮೇಶಪ್ಪ(55) ಎಂದು ಗುರುತಿಸಲಾಗಿದೆ. ಬೆಳಂದೂರು ಗ್ರಾಮದ ಬತ್ತಿ ರಮೇಶಪ್ಪ ಎಂಬ ವ್ಯಕ್ತಿ  ಕಳೆದ ೪ ದಿನಗಳಿಂದ ಕಾಣೆಯಾಗಿದ್ದರು. ಮೃತಶರೀರ ಹಾಗೂ ಸುತ್ತಮುತ್ತಲೂ  ಕರಕಲು ಸ್ಥಿತಿಯಲ್ಲಿದ್ದುದರಿಂದ ಸಿಡಿಲು ಬಡಿದು ಮೃತಪಟ್ಟಿರಬಹುದೆಂದು ಗ್ರಾಮಸ್ಥರು ಶಂಕಿಸಿದ್ದು ಮರಣೋತ್ತರ ವರದಿ ಹಾಗೂ ಪೋಲಿಸ್‌ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ.

ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ತೀರ್ಥಹಳ್ಳಿ: ತಾಲೂಕಿನ ದೇವಂಗಿ ಸಮೀಪದ ಬಾಣಂಕಿ ಗ್ರಾಮದ ಇಂದಿರಾನಗರ ಕಾಡಿನಲ್ಲಿ ಶುಕ್ರವಾರ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಬಾಣಂಕಿ ಗ್ರಾಮದ ಕಲಾ (41) ಎಂದು ಗುರುತಿಸಲಾಗಿದೆ. ಗುರುವಾರ ತಡರಾತ್ರಿ ಕಲಾ ಮನೆಯಿಂದ ತೆರಳಿ ಕಾಣೆಯಾಗಿದ್ದರು. ಪತಿ, ಕುಟುಂಬದವರು ರಾತ್ರಿಯೆಲ್ಲಾ ಶೋಧ ನಡೆಸಿದ್ದರು. ತೀರ್ಥಹಳ್ಳಿ ಠಾಣೆಯಲ್ಲಿ (shivamogga police) ಪ್ರಕರಣ ದಾಖಲಾಗಿದೆ.

 

 

Leave a Comment