ಜೋಗದಿಂದ ಬಳ್ಳಾರಿಗೆ ಹೊರಟ ಕುಟುಂಬ; ಪೊಲೀಸರಿಗೆ ತಿಳಿಯಿತು ವಿಷಯ; ಆಮೇಲೆ ಏನಾಯ್ತು? 

ಹಂಚಿಕೊಳ್ಳಿ
WhatsApp Facebook X Telegram
Kargal Police Rescue Stranded Ballari Family
Kargal Police Rescue Stranded Ballari Family

Kargal Police ಶಿವಮೊಗ್ಗ: ಕೆಲವೊಂದು ಘಟನೆಗಳು ಪೊಲೀಸರ ಮಾನವೀಯ ಕಾರ್ಯಗಳನ್ನು ಎತ್ತಿ ತೋರಿಸುತ್ತವೆ. ಪೊಲೀಸರು ಎಂದರೆ ಬರೀ ದಂಡಿಸುವುದು ಮಾತ್ರವಲ್ಲ, ಅವರಿಂದ ಅನೇಕ ಒಳ್ಳೆಯ ಕಾರ್ಯಗಳೂ ಸಾಧ್ಯ ಎಂಬುದಕ್ಕೆ ಜೋಗದಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. ಬಳ್ಳಾರಿಯ ಕುಟುಂಬವೊಂದು ಸ್ವಗ್ರಾಮಕ್ಕೆ ತೆರಳಲು ಪರದಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಮುರುಡೇಶ್ವರದ ಹೋಂ ಸ್ಟೇಯಲ್ಲಿ ಶಿವಮೊಗ್ಗದ ಯುವಕ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ?

Kargal Police ಘಟನೆಯ ವಿವರ

ದೂರದ ಬಳ್ಳಾರಿಯಿಂದ ಕುಟುಂಬವೊಂದು ಕೆಲಸ ಹುಡುಕಿಕೊಂಡು ಶಿವಮೊಗ್ಗ ಜಿಲ್ಲೆಯ ಜೋಗಕ್ಕೆ ಬಂದಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಅವರು ತಮ್ಮ ಸ್ವಗ್ರಾಮಕ್ಕೆ ಮರಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕೈಯಲ್ಲಿದ್ದ ಹಣವೆಲ್ಲ ಖಾಲಿಯಾಗಿದ್ದರಿಂದ ಹಾಗೂ ಯಾವುದೇ ಕೆಲಸ ಸಿಗದಿದ್ದರಿಂದ ಅವರಿಗೆ ಏನು ಮಾಡಬೇಕೆಂದು ತೋಚದಾಯಿತು. ಪರಊರಿನಿಂದ ಬಂದಿದ್ದರಿಂದ ಯಾರ ಬಳಿಯೂ ಸಹಾಯ ಕೇಳಲು ಮುಜುಗರ; ಜತೆಗೆ ಯಾರ ಪರಿಚಯವೂ ಇರಲಿಲ್ಲ. ಹಣವಿಲ್ಲದೆ ಊರಿಗೆ ಹೋಗಲು ಸಾಧ್ಯವಿಲ್ಲ ಎಂದು ಬೇಸರದಿಂದ ಕುಳಿತಿದ್ದಾಗ ಈ ವಿಷಯ ಕಾರ್ಗಲ್ ಪೊಲೀಸರ ಗಮನಕ್ಕೆ ಬಂದಿದೆ.

ಕೂಡಲೇ ಸ್ಪಂದಿಸಿದ ಕಾರ್ಗಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕಾರ್ಗಲ್-ಜೋಗ್ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಆ ಕುಟುಂಬವು ಸುರಕ್ಷಿತವಾಗಿ ತಮ್ಮ ಮರಳಿ ಗೂಡಿಗೆ ತಲುಪಲು ಅಗತ್ಯವಾದ ಪ್ರಯಾಣ ಸೌಲಭ್ಯ ಹಾಗೂ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. 

ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನೆರವಾದ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೂಲಕ ಪೊಲೀಸರೆಂದರೆ ಬರೀ ಭಯವಲ್ಲ, ಕಷ್ಟಕ್ಕೆ ಸ್ಪಂದಿಸುವ ಭರವಸೆ ಎಂಬ ಸಂದೇಶ ಸಮಾಜಕ್ಕೆ ತಲುಪಿದಂತಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor