ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ: ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿನ ಅಡಿಕೆ ದರಪಟ್ಟಿ ಈಗ ತಾನೇ ಹೊರಬಿದ್ದಿದೆ. ಮೊನ್ನೆಗೆ ಹೋಲಿಸಿದರೆ ಅಂದರೆ ಸೆಪ್ಟಂಬರ್ 19 ಕ್ಕೆ ಹೋಲಿಸಿದರೆ, ಬೆಟ್ಟೆಯ ಗರಿಷ್ಟ ದರದಲ್ಲಿ 2 ಸಾವಿರ ಕಡಿಮೆಯಾಗಿದ್ದು, ಗೊರಬಲು ರೇಟ್‌ನಲ್ಲಿ 2 ಸಾವಿರ ರೂಪಾಯಿ ಹೆಚ್ಚಾಗಿದೆ.
ಇನ್ನು ರಾಶಿ ಇಡಿ ವಿಚಾರಕ್ಕೆ ಬರೋದಾದ್ರೆ, ಸುಮಾರು 300 ರೂಪಾಯಿ ದರ ಏರಿಕೆ ಆಗಿದೆ. ಒಟ್ಟಾರೆ ಈ ಎಲ್ಲಾ ವೆರೈಟಿ ಅಡಿಕೆಗಳ ರೇಟ್ನ್ನು ತಿಳ್ಕೋಬೇಕಾದ್ರೆ ಈ ಕೆಳಗನ ಪಟ್ಟಿಯನ್ನು ನೋಡಿ.
ಎಪಿಎಂಸಿ ಶಿವಮೊಗ್ಗ ಅಡಿಕೆ ದರ ಪಟ್ಟಿ (ದಿನಾಂಕ: 21/09/2026)
(ದರಗಳು ಪ್ರತಿ ಕ್ವಿಂಟಾಲ್‌ಗೆ)
- ಸರಕು/ಹಸ: ಕನಿಷ್ಠ 61,029, ಗರಿಷ್ಠ 76,009, ಮಾದರಿ 74,299
- ಬೆಟ್ಟೆ: ಕನಿಷ್ಠ 50,039, ಗರಿಷ್ಠ 58,639, ಮಾದರಿ 52,699
- ರಾಶಿ ಇಡಿ: ಕನಿಷ್ಠ 45,691, ಗರಿಷ್ಠ 49,989, ಮಾದರಿ 47,089
- ಗೊರಬಲು: ಕನಿಷ್ಠ 19,000, ಗರಿಷ್ಠ 40,669, ಮಾದರಿ 35,819
- ಹೊಸ ರಾಶಿ ಇಡಿ: ಕನಿಷ್ಠ 39,038, ಗರಿಷ್ಠ 46,089, ಮಾದರಿ 43,499
