ಬಿಜೆಪಿ ಒಳಗೆ ಬರೋಕೆ ಅವಕಾಶ ಇದೀಯಾ ಅಂತ ಕೇಳಿದ್ರ ಬೇಳೂರು ಗೋಪಾಲ ಕೃಷ್ಣ: ಹಾಲಪ್ಪ ಗಂಭೀರ ಆರೋಪ 

ಹಂಚಿಕೊಳ್ಳಿ
WhatsApp Facebook X Telegram
Shivamogga Belur Tried to Join BJP,
Shivamogga Belur Tried to Join BJP,

Shivamogga ಶಿವಮೊಗ್ಗ:ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ಸಿಗದಿದ್ದಕ್ಕೆ ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಬಿಜೆಪಿಗೆ ಸೇರಲು ಮುಂದಾಗಿದ್ದರು ಎಂಬ ಹೊಸ ಬಾಂಬ್ ಒಂದನ್ನು ಮಾಜಿ ಶಾಸಕ ಹರತಾಳು ಹಾಲಪ್ಪ ಸಿಡಿಸಿದ್ದಾರೆ.

ಶಿವಮೊಗ್ಗ : ಮಳೆ ಆರ್ಭಟ, ತುಂಗಾ ಜಲಾಶಯದ ಒಳಹರಿವು ಹೊರಹರಿವು ಎಷ್ಟಿದೆ ಇವತ್ತು ?

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ತೀವ್ರ ಬೇಸರದಲ್ಲಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಅದೇ ದಿನ ರಾತ್ರಿ ಆರ್.ಎಸ್.ಎಸ್. ಪ್ರಮುಖರೊಬ್ಬರಿಗೆ ದೂರವಾಣಿ ಕರೆ ಮಾಡಿದ್ದರು. ಕರೆ ಮಾಡಿ ಏನಪ್ಪಾ, ಬಿಜೆಪಿಯೊಳಗೆ ಬರಲು ಏನಾದರೂ ಅವಕಾಶ ಇದೆಯಾ ಎಂದು ಕೇಳುವ ಮೂಲಕ ಬಿಜೆಪಿ ಬಾಗಿಲು ತಟ್ಟಿದ್ದರು ಎಂದು ಗಂಭೀರ ಆರೋಪ ಮಾಡಿದರು. ಆಗ ಆ ಆರ್‌ಎಸ್‌ಎಸ್ ಮುಖಂಡರು ನೀನು ಯಡಿಯೂರಪ್ಪ ಹಾಗೂ ಯಡಿಯೂರಪ್ಪ ಮಕ್ಕಳ ಬಗ್ಗೆ ಬಾಯಿಗೆ ಬಂದ ಹಾಗೆ ಬೈದಿದ್ದೀಯಾ, ಹಾಗಾಗಿ ನಿನಗೆ ಬಿಜೆಪಿಯಲ್ಲಿ ಅವಕಾಶ ಸಿಗುವುದು ತೀರಾ ಕಡಿಮೆ ಎಂದು ಹೇಳಿದ್ದರೆಂದು ಹಾಲಪ್ಪ ಸಾಗರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬಹಿರಂಗಪಡಿಸಿದರು. 

ಇದೇ ವೇಳೆ. ಬಂಗಾರಪ್ಪನವರ ಮಗ ಎಂದು ಹೇಳಿಕೊಳ್ಳುವ ಸಚಿವ ಮಧು ಬಂಗಾರಪ್ಪ ಮತ್ತು ಅವರ ಶಿಷ್ಯ ಎಂದು ಹೇಳಿಕೊಳ್ಳುವ ಗೋಪಾಲಕೃಷ್ಣ ಬೇಳೂರು ಇಬ್ಬರೂ ಸೇರಿ ತಮ್ಮ ರಾಜಕೀಯ ಲಾಭಕ್ಕಾಗಿ ಜನರ ಮುಂದೆ ನಾಟಕವಾಡುತ್ತಿದ್ದಾರೆ. ಇವರ ಈ ದ್ವಂದ್ವ ನೀತಿ ಮತ್ತು ಹೇಳಿಕೆಗಳನ್ನು ಕ್ಷೇತ್ರದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor