ಶಿವಮೊಗ್ಗ: ತೀರ್ಥಹಳ್ಳಿ ತಹಶೀಲ್ದಾರ್ ವಾಹನಕ್ಕೆ ಡಿಕ್ಕಿ ಹೊಡೆದ ಕಾರು ! ಸ್ಥಳಿಯರಿಂದ ಹಲ್ಲೆ? 

ಹಂಚಿಕೊಳ್ಳಿ
WhatsApp Facebook X Telegram
ತೀರ್ಥಹಳ್ಳಿ ತಹಶಿಲ್ದಾರ್_ ವಾಹನಕ್ಕೆ ಖಾಸಗಿ ವಾಹನ ಡಿಕ್ಕಿ
ತೀರ್ಥಹಳ್ಳಿ ತಹಶಿಲ್ದಾರ್_ ವಾಹನಕ್ಕೆ ಖಾಸಗಿ ವಾಹನ ಡಿಕ್ಕಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ತೀರ್ಥಹಳ್ಳಿ ತಹಶೀಲ್ದಾರ್ ಬಳಕೆಯ ವಾಹನಕ್ಕೆ ಐ20 ಕಾರೊಂದು ನೆಹರೂ ರಸ್ತೆಯಲ್ಲಿ ಡಿಕ್ಕಿ ಹೊಡೆದು, ಕಾರು ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ.

ತೀರ್ಥಹಳ್ಳಿಯ ತಹಶೀಲ್ದಾರ್ ಬಳಕೆಯ ಬೊಲೆರೊ ವಾಹನಕ್ಕೆ ಐ20 ಕಾರು ನೆಹರೂ ರಸ್ತೆಯಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದಿದ್ದೇ ತಡ ಕಾರು ಅಲ್ಲಿಂದ ಪರಾರಿಯಾಗಲು ಯತ್ನಿಸಿದೆ. ಆದರೆ ಬೊಲೆರೊ ವಾಹನವು ಐ20 ಕಾರನ್ನು ಹಿಂಬಾಲಿಸಿದ್ದು, ಡಿಸಿ ಕಚೇರಿಯ ಬಳಿ ಐ20 ಕಾರನ್ನು ತಡೆದು ನಿಲ್ಲಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ನಂತರ ಸ್ಥಳೀಯರೆಲ್ಲರೂ ಸ್ಥಳದಲ್ಲಿ ಜಮಾಯಿಸಿದ್ದಾರೆ. ಅಷ್ಟೇ ಅಲ್ಲದೆ ಐ20 ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ . ಐ20 ಕಾರು ಚಾಲಕನ ಮೂಗಿನಲ್ಲಿ ರಕ್ತ ಸುರಿಯುತ್ತಿದ್ದು, ಕೆಳಗಿಳಿಯಲು ಎಷ್ಟೇ ಕೇಳಿಕೊಂಡರೂ ಆತ ಕೆಳಗಿಳಿಯದೆ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ಹಲ್ಲೆ ನಡೆಸಿದವರನ್ನೆಲ್ಲ ಮೊದಲು ಪೊಲೀಸ್ ಠಾಣೆಗೆ ಕರೆದೊಯ್ಯಿರಿ ಎಂದು ಹಠ ಹಿಡಿದಿದ್ದಾನೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಆತನನ್ನು ಸಮಾಧಾನಪಡಿಸಿದ್ದಾರೆ. ಬಳಿಕ ಆತನನ್ನು ಹತ್ತಿರದ ಜಯನಗರ ಠಾಣೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಮೇಲ್ನೋಟಕ್ಕೆ ಐ20 ಕಾರು ಚಾಲಕ ಕಂಠಪೂರ್ತಿ ಕುಡಿದು ಕಾರು ಚಲಾಯಿಸುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor