ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ವಾಗ್ದಾಳಿ, ಸಚಿವ ಮಧು ಬಂಗಾರಪ್ಪರ ಸ್ಟೇಟ್ಮೆಂಟ್, ಜಲಾಶಯದ ವಿವರ ಇ-ಪತ್ರಿಕೆ ಓದಿ

ಹಂಚಿಕೊಳ್ಳಿ
WhatsApp Facebook X Telegram
malenadu today epaper
malenadu today epaper

Top Headlines ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ಮಲೆನಾಡು ಭಾಗದ ಪತ್ರಿಕೆ ಮಲೆನಾಡು ಟುಡೆಯ ಇವತ್ತಿನ ಆವೃತ್ತಿಯ ಇ ಪತ್ರಿಕೆಯ ವಿವರ ಹೀಗಿದೆ. ಇಂದಿನ ಇ-ಪತ್ರಿಕೆಯನ್ನು ಓದಲು ಹಾಗೂ ಡೌನ್‌ಲೋಡ್ ಮಾಡಲು ವರದಿಯ ಕೊನೆಯಲ್ಲಿ ಗೂಗಲ್ ಡ್ರೈವ್ ಲಿಂಕ್ ಒದಗಿಸಲಾಗಿದೆ. ಇಂದಿನ ಇ-ಪತ್ರಿಕೆಯ ಮುಖ್ಯಾಂಶಗಳು ಹೀಗಿವೆ

1. ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ

ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಗತಿಯ ಕುರಿತು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಒಂದು ಕಾಲದಲ್ಲಿ ಮುತ್ತೈದೆಯಂತಿದ್ದ ಕಾಂಗ್ರೆಸ್, ಇಂದು ಅಧಿಕಾರದ ದಾಹಕ್ಕಾಗಿ ಪೂರ್ತಿ ಕೆಳಮಟ್ಟಕ್ಕೆ ಇಳಿದು ಬೆತ್ತಲಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ನಡುವಿನ ಆಂತರಿಕ ಕಚ್ಚಾಟ, ಶಿವಮೊಗ್ಗ ನಗರದಲ್ಲಿ ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ಕೈಬಿಟ್ಟಿರುವುದು ಹಾಗೂ ಹಿಂದೂ ಧರ್ಮವನ್ನು ಟೀಕಿಸಿದ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅವರು ಕಿಡಿಕಾರಿದ್ದಾರೆ.

2. ಸಚಿವ ಸಂಪುಟ ವಿಸ್ತರಣೆ: ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದ ಮಧು ಬಂಗಾರಪ್ಪ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಕೇಳಿಬರುತ್ತಿರುವ ಅಸಮಾಧಾನದ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಶಾಸಕ ಬಾಲಕೃಷ್ಣ ಹಾಗೂ ಶಿವಮೊಗ್ಗದ ಬೇಳೂರು ಗೋಪಾಲಕೃಷ್ಣ ಅವರ ಬೇಸರದ ಮಾತುಗಳನ್ನು ಗಮನಿಸಿದ್ದೇನೆ. ಆದರೆ, ಏನೇ ಗೊಂದಲಗಳಿದ್ದರೂ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

3. ಅಕ್ರಮ ಅಡಿಕೆ ಆಮದು ತಡೆಗೆ ಅಮಿತ್ ಶಾಗೆ ರಾಜ್ಯದ ನಿಯೋಗದಿಂದ ಮನವಿ

ವಿದೇಶಿ ಅಡಿಕೆಯ ಅಕ್ರಮ ಆಮದು ಹಾಗೂ ಕಳ್ಳಸಾಗಣೆಯಿಂದ ಕಂಗೆಟ್ಟಿರುವ ದೇಶೀಯ ಅಡಿಕೆ ಬೆಳೆಗಾರರ ರಕ್ಷಣೆಗಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ಸಂಸದರು ಹಾಗೂ ಕ್ಯಾಂಪ್ಕೋ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನವದೆಹಲಿಯಲ್ಲಿ ಮನವಿ ಸಲ್ಲಿಸಿದೆ.

4. ಹರತಾಳು ಹಾಲಪ್ಪ ವಿರುದ್ಧ ಗುಡುಗಿದ ಕಾಂಗ್ರೆಸ್ ಮುಖಂಡರು

ತಮ್ಮ ಶಾಸಕರ ಬಗ್ಗೆ ಟೀಕಿಸುವ ಮಾಜಿ ಶಾಸಕ ಹರತಾಳು ಹಾಲಪ್ಪನವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಸಾಗರ ನಗರ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ವಾಗ್ದಾಳಿ ನಡೆಸಿದ್ದಾರೆ. ಆಡಳಿತ ವೈಫಲ್ಯ ಖಂಡಿಸಿ ಪ್ರತಿಭಟಿಸುವ ನೆಪದಲ್ಲಿ ಶಾಸಕರ ತೇಜೋವಧೆ ಮಾಡಿದರೆ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

5. ಕಾರ್ಗಲ್ ಪೊಲೀಸರ ಮಾನವೀಯತೆ

ಹಣವಿಲ್ಲದೆ ಕಾರ್ಗಲ್‌ನಲ್ಲಿ ನಿರಾಶ್ರಿತರಾಗಿದ್ದ ಬಳ್ಳಾರಿಯ ಕಾರ್ಮಿಕ ಕುಟುಂಬಕ್ಕೆ ಕಾರ್ಗಲ್ ಪೊಲೀಸರು ಆರ್ಥಿಕ ನೆರವು ನೀಡಿ ಊರಿಗೆ ಕಳುಹಿಸಿಕೊಟ್ಟ ಮಾನವೀಯ ವರದಿ ಪ್ರಕಟವಾಗಿದೆ.

ಇತರೆ ಪ್ರಮುಖ ಸುದ್ದಿಗಳು

  • ಯುಪಿಐ ವಹಿವಾಟುಗಳಿಗೆ ಮರು ಶುಲ್ಕ ವಿಧಿಸುವ ಕುರಿತು ಕೇಂದ್ರದ ಚಿಂತನೆ.
  • ಇಎಂಐ ಕಟ್ಟದಿದ್ದರೆ ಫೋನ್ ಲಾಕ್ ಮಾಡುವಂತಿಲ್ಲ: ಆರ್‌ಬಿಐ ಹೊಸ ನಿಯಮ.
  • ಶಿಕಾರಿಪುರದ ಪ್ರಸಿದ್ಧ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದಲ್ಲಿ ಗಣ್ಯರಿಂದ ವಿಶೇಷ ಪೂಜೆ.
  • ಶಿವಮೊಗ್ಗ ರಂಗಾಯಣ ರೆಪರ್ಟರಿಗೆ ತಂತ್ರಜ್ಞರು ಹಾಗೂ ಕಲಾವಿದರ ನೇಮಕಾತಿಗೆ ಅರ್ಜಿ ಆಹ್ವಾನ.

ಇ-ಪತ್ರಿಕೆ ಓದುವುದು ಮತ್ತು ಡೌನ್‌ಲೋಡ್ ಮಾಡುವುದು ಹೇಗೆ?

‘ಮಲೆನಾಡು ಟುಡೆ’ಯ ಸಮಗ್ರ ಸುದ್ದಿಗಳನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಓದಲು ಈ ಕೆಳಗಿನ ಲಿಂಕ್ ಬಳಸಿ.[ಲಿಂಕ್ ಇಲ್ಲಿದೆ]

ಸೂಚನೆ: ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಗೂಗಲ್ ಡ್ರೈವ್‌ನಲ್ಲಿ ಇ-ಪತ್ರಿಕೆ ತೆರೆದುಕೊಳ್ಳುತ್ತದೆ. ನೀವು ನೇರವಾಗಿ ಅಲ್ಲಿಯೇ ಪತ್ರಿಕೆಯನ್ನು ಓದಬಹುದು. ಆಫ್‌ಲೈನ್‌ನಲ್ಲಿ ಓದಲು ಬಯಸಿದರೆ, ಪರದೆಯ ಮೇಲ್ಭಾಗದಲ್ಲಿರುವ Download (ಬಾಣದ ಗುರುತಿನ) ಐಕಾನ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ (PDF) ಫೈಲ್ ಅನ್ನು ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor