ತೀರ್ಥಹಳ್ಳಿ–ಆಗುಂಬೆ ರಸ್ತೆಯಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ; ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ!

ಹಂಚಿಕೊಳ್ಳಿ
WhatsApp Facebook X Telegram
Thirthahalli Bale Bailu Car Accident Head-On Collision Caught on CCTV
Thirthahalli Bale Bailu Car Accident Head-On Collision Caught on CCTV

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತೀರ್ಥಹಳ್ಳಿ ತಾಲೂಕಿನ ಬಾಳೇಬೈಲು ಬಳಿ ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಎರಡು ಕಾರುಗಳಲ್ಲಿದ್ದವರಿಗೆ ಹೆಚ್ಚು ಪೆಟ್ಟಾಗಿದೆ. ಅವರುಗಳನ್ನ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಗುಂಬೆ ಮಾರ್ಗದಲ್ಲಿ ಘಟನೆ ನಡೆದಿದ್ದು, ಬಾಳೇಬೈಲು ರಸ್ತೆಯಲ್ಲಿ ಎದುರುಬದುರಾಗಿ ಬರುತ್ತಿದ್ದ ಎರಡು ಕಾರುಗಳು ಸೀದಾಸೀದಾ ಡಿಕ್ಕಿ ಹೊಡೆದುಕೊಂಡಿದೆ. ಒಂದು ಕಾರು ಆಪೋಸಿಟ್ ಡೈರಕ್ಷನ್​ನಲ್ಲಿ ಬಂದಿದ್ದು, ಎದುರಿಗೆ ಬರುತ್ತಿದ್ದ ಕಾರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಸಿಸಿ ಕ್ಯಾಮೆರಾದಲ್ಲಿ ಕಂಡ ದೃಶ್ಯದಲ್ಲಿ ಟರ್ನಿಂಗ್​ನಿಂದ ಬರುತ್ತಿದ್ದ ಕಾರಿಗೆ ಇನ್ನೊಂದು ದಿಕ್ಕಿನಿಂದ ಬಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯಾಗುವುದನ್ನ ತಪ್ಪಿಸಲು ಒಂದು ಕಾರಿನವರು, ಕಾರನ್ನ ರಸ್ತೆ ಬದಿಗೆ ಟರ್ನ್​ ಮಾಡುವ ಪ್ರಯತ್ನ ಮಾಡಿದ್ದರಾದರೂ, ಎದುರಿನ ಕಾರು ಸೀದಾ ಬಂದು ಡಿಕ್ಕಿಯಾಗಿದೆ.

ಇನ್ನೂ ಘಟನೆ ಬೆನ್ನಲ್ಲೆ ಸ್ಥಳಕ್ಕೆ ಓಡಿ ಬಂದ ಜನರು ವಿಚಾರಿಸಿ, ವೆಹಿಕಲ್ ಮಾಡಿ ಕಾರಿನಲ್ಲಿ ಪೆಟ್ಟಾದವರಿಗೆ ಆಸ್ಪತ್ರೆಗೆ ಸೇರಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor