ಶಿವಮೊಗ್ಗ: ಗೊರಬಲುವಿನಲ್ಲಿ 1 ಸಾವಿರ, ರಾಶಿಇಡಿಯಲ್ಲಿ 400 ರೂ. ಕಡಿತ! ಹಾಗಾದರೆ ಇಂದಿನ ಅಡಿಕೆ ರೇಟ್ ಎಷ್ಟಿದೆ?

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಪ್ರತಿನಿತ್ಯದ ಅಡಿಕೆ ಮಾರುಕಟ್ಟೆ ಧಾರಣೆಯನ್ನು ವೀಕ್ಷಕರಿಗೆ ನಿಖರವಾಗಿ ತಲುಪಿಸುವ ಕೆಲಸವನ್ನು ನಮ್ಮ ಮಲೆನಾಡು ಟುಡೆ ಸುದ್ದಿ ನಿರಂತರವಾಗಿ ಮಾಡುತ್ತಾ ಬರುತ್ತಿದೆ. ಅದರಂತೆ ಇಂದಿನ (ಸೆಪ್ಟೆಂಬರ್ 22) ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರಪಟ್ಟಿ ಬಿಡುಗಡೆಯಾಗಿದ್ದು, ಬೆಳೆಗಾರರಿಗೆ ಕೊಂಚ ನಿರಾಸೆ ಮೂಡಿಸಿದೆ.

ನಿನ್ನೆಯ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಇಂದು ರಾಶಿಇಡಿ ಅಡಿಕೆಯ ಗರಿಷ್ಠ ದರದಲ್ಲಿ ಸರಿಸುಮಾರು 400 ರೂಪಾಯಿ ಇಳಿಕೆಯಾಗಿದೆ. ಅಷ್ಟೇ ಅಲ್ಲದೆ, ಗೊರಬಲು ಅಡಿಕೆಯ ಗರಿಷ್ಠ ದರದಲ್ಲಿ ಬರೋಬ್ಬರಿ 1,000 ರೂಪಾಯಿಯಷ್ಟು ಕಡಿತವಾಗಿದೆ. ಹಾಗಾದರೆ ಇಂದಿನ ಮಾರುಕಟ್ಟೆಯಲ್ಲಿ ಸರಕು/ಹಸ, ಬೆಟ್ಟೆ, ರಾಶಿಇಡಿ, ಗೊರಬಲು ಹಾಗೂ ಹೊಸ ರಾಶಿಇಡಿ ಅಡಿಕೆಯ ಕನಿಷ್ಠ ಮತ್ತು ಗರಿಷ್ಠ ದರಗಳು ಎಷ್ಟಿವೆ ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಶಿವಮೊಗ್ಗ ಎಪಿಎಂಸಿ (APMC) ಅಡಿಕೆ ಮಾರುಕಟ್ಟೆ ದರಪಟ್ಟಿ (ದಿನಾಂಕ: 22/09/2026)

ಸರಕು / ಹಸ ಅಡಿಕೆ: ಕನಿಷ್ಠ ಧಾರಣೆ ₹53,999, ಗರಿಷ್ಠ ಧಾರಣೆ ₹94,896 ಹಾಗೂ ಮಾದರಿ ಧಾರಣೆ ₹83,099 ಇದೆ.

ಬೆಟ್ಟೆ ಅಡಿಕೆ: ಕನಿಷ್ಠ ಧಾರಣೆ ₹50,114, ಗರಿಷ್ಠ ಧಾರಣೆ ₹58,998 ಹಾಗೂ ಮಾದರಿ ಧಾರಣೆ ₹56,319 ಇದೆ.

ರಾಶಿಇಡಿ ಅಡಿಕೆ: ಕನಿಷ್ಠ ಧಾರಣೆ ₹45,009, ಗರಿಷ್ಠ ಧಾರಣೆ ₹49,500 ಹಾಗೂ ಮಾದರಿ ಧಾರಣೆ ₹47,059 ಇದೆ.

ಗೊರಬಲು ಅಡಿಕೆ: ಕನಿಷ್ಠ ಧಾರಣೆ ₹19,001, ಗರಿಷ್ಠ ಧಾರಣೆ ₹39,009 ಹಾಗೂ ಮಾದರಿ ಧಾರಣೆ ₹36,819 ಇದೆ.

ಹೊಸ ರಾಶಿಇಡಿ ಅಡಿಕೆ: ಕನಿಷ್ಠ ಧಾರಣೆ ₹45,059, ಗರಿಷ್ಠ ಧಾರಣೆ ₹47,280 ಹಾಗೂ ಮಾದರಿ ಧಾರಣೆ ₹46,999 ಇದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor