ಶಿವಮೊಗ್ಗ ಜಿಲ್ಲೆಯಲ್ಲಿ ಜೋರು ಚರ್ಚೆಗೆ ಕಾರಣವಾಗ್ತಿದೆ ದೇವರ ದುಡ್ಡು ! ಯಾರ ಜೇಬಿಗೆ ಹೋಯ್ತು! ಹುಂಡಿ ಹಣ!

ಹಂಚಿಕೊಳ್ಳಿ
WhatsApp Facebook X Telegram
Cyber Scam PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga
Cyber Scam PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga

Temple Hundi Money Misused / ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ದೇವರ ದುಡ್ಡಿನ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಡುವ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ದತ್ತಿ ದೇವಾಲಯಗಳ ಜಾತ್ರೆ ಹಾಗೂ ದರ್ಗಾದ ಉರುಸ್ ನಲ್ಲಿ ಹೆಚ್ಚುವರಿ ಕೆಲಸ ಮಾಡಿದ ನೆಪವೊಡ್ಡಿ ಹುಂಡಿ ಹಣವನ್ನು ಅಧಿಕಾರಿಗಳು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಶಾಸಕರೇ ಪ್ರಮುಖ ಆರೋಪವನ್ನು ಮಾಡಿದ್ದಾರೆ.

ಶಾಸಕ ಆರಗ ಜ್ಞಾನೇಂದ್ರ ಅವರು ಕಂದಾಯ ಇಲಾಖೆಯ ಅಧಿಕಾರಿಗಳು ಹುಂಡಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ಎಲ್.ಸುಂದರೇಶ್ ಪಟ್ಟಣದ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಸಮಿತಿಯ ಸಂಚಾಲಕರಾಗಿ ನಾನು ಮತ್ತು ಸೊಪ್ಪುಗುಡ್ಡೆ ರಾಘವೇಂದ್ರ ಅವರು ಕಾರ್ಯನಿರ್ವಹಿಸಿದ್ದೇವೆ ನಾವು ಯಾವುದೇ ರೀತಿಯ ತಪ್ಪು ಮಾಡದಿದ್ದರೂ, ನಮ್ಮ ಮೇಲೆ ವಿನಾಕಾರಣ ಗುತ್ತಿಗೆದಾರರಿಗೆ ಹಣವನ್ನು ಮಂಜೂರು ಮಾಡಲು ಪ್ರಯತ್ನಿಸಿದ್ದರು ಎಂದು ಶಾಸಕರು ಆರೋಪ ಮಾಡಿದ್ದಾರೆ. ಈ ಆರೋಪದ ಹಿಂದೆ ರಾಜಕೀಯವಾಗಿ ತೇಜೋವಧೆ ಮಾಡುವ ಸ್ಪಷ್ಟವಾದ ಹುನ್ನಾರ ಅಡಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಇದೇ ವಿಚಾರ ರಾಜಕಾರಣಕ್ಕೆ ಕಾರಣವಾದರೆ, ಇತ್ತ 2026ರ ಜುಲೈ 21ರಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ನೀಡಿದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ರಚಿಸಿದ್ದ ತಪಾಸಣ ಸಮಿತಿ, ಧಾರ್ಮಿಕ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ, ಹುಂಡಿ ಹಣವನ್ನು ಬಿಡುಗಡೆ ಮಾಡಿರುವುದು ದೃಢಪಟ್ಟಿದೆ ಎಂದು ವರದಿ ನೀಡಿದೆ.

ಈ ವರದಿ ಬೆನ್ನಲ್ಲೆ ತೀರ್ಥಹಳ್ಳಿಯಲ್ಲಿ ದೇವರ ದುಡ್ಡಿನ ಲೂಟಿ ಬಗ್ಗೆ ನಾನಾ ಚರ್ಚೆಗಳು ಆರಂಭವಾಗಿದೆ. ಒಬ್ಬ ಅರ್ಚಕ ದಿನಕ್ಕೆ ಮೂರು ಭಾರಿ ಪೂಜೆ ಮಾಡಿದರು ಆತನಿಗೆ ತಿಂಗಳಿಗೆ ಸಿಗುವುದು ಅರೆಕಾಸು, ಅಂತದ್ದರಲ್ಲಿ ಅಧಿಕಾರಿಗಳು ಹೆಚ್ಚಿನ ಅಹಣವನ್ನು ಹೇಗೆ ಬಿಡುಗಡೆ ಮಾಡಿಕೊಂಡರು ಎಂಬ ಪ್ರಶ್ನೆ ಕೇಳಿಬರುತ್ತಿದೆ. ತಿಂಗಳ ವೇತನಕ್ಕೆ ಸರಿಸಮಾನವಾಗಿ ಹೆಚ್ಚುವರಿ ಕೆಲಸದ ನಿಮಿತ್ತ ಪ್ರತ್ಯೇಕವಾಗಿ ವೇತನವನ್ನು ಬಿಡುಗಡೆ ಮಾಡಲು ಯಾವುದೇ ನಿಯಮಗಳಿಲ್ಲ. ಹೀಗಿದ್ದರೂ ಸಹ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ತಹಸೀಲ್ದಾರ್ ಕಚೇರಿಯ ವಿಷಯ ನಿರ್ವಾಹಕ ಸಿಬ್ಬಂದಿಯ ಹೆಸರಿನಲ್ಲಿ ಒಟ್ಟಾರೆ 9,65,099 ರೂಪಾಯಿಗಳನ್ನು ಹುಂಡಿಯಿಂದ ನೀಡಲಾಗಿದೆ. ಸದ್ಯ ಇದೇ ವಿಚಾರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿ ತಹೀಶೀಲ್ದಾರ್​ ಹೇಳುವಂತೆ 2016ರಲ್ಲಿ ಸರ್ಕಾರವು ಹೊರಡಿಸಿರುವ ಆದೇಶದ ಅನ್ವ ಇಂತಹದ್ಯದೊಂದು ಅವಕಾಶವಿದೆ ಎನ್ನಲಾಗುತ್ತದೆ. ಆದರೆ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ಪ್ರಕಾರ ಹೆಚ್ಚುವರಿ ಕೆಲಸಕ್ಕೆ ಭತ್ಯೆ ಪಡೆಯಲು ಅವಕಾಶ ಇದೆಯಾದರೂ ಹೆಚ್ಚುವರಿ ವೇತನ ಪಡೆಯಲು ಅವಕಾಶಗಳಿಲ್ಲ. ಅದರಲ್ಲಿಯು ಇದಕ್ಕೆಂದ ಕೆಲವೊಂದು ನಿಯಮಗಳಿವೆ. ಆದರೆ ಈ ನಿಯಮವನ್ನ ಉಲ್ಲಂಘಿಸಿ, ತೀರ್ಥಹಳ್ಳಿಯಲ್ಲಿ ದೇವರ ದುಡ್ಡು ಯಾರ ಜೇಬಿಗೆ ಹೋಗಿದೆ ಎಂಬುದೇ ತಲೆಭಾರದ ಪ್ರಶ್ನೆಯಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor