ಸರ್ಕಾರಿ ನೌಕರಿಯಲ್ಲಿ ಈ ವಾರ ವಿಶೇಷ!, ಕಾರ್ಮಿಕರಿಗೆ, ಉದ್ಯೋಗಿಗಳಿಗೆ ಧನಲಾಭ! ವಾರ ಭವಿಷ್ಯ

ಹಂಚಿಕೊಳ್ಳಿ
WhatsApp Facebook X Telegram
Unlock Your Weekly Horoscope your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ? this Weeks Horoscope in Kannadathis Weeks Horoscope in Kannadayour Weekly Horoscope June 8 to June 14 2025
your Weekly Horoscope June 8 to June 14 2025

Complete Zodiac Horoscope / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ದ್ವಾದಶ ರಾಶಿಗಳ ಈ ವಾರದ ಭವಿಷ್ಯವು ಆರ್ಥಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಏರಿಳಿತಗಳನ್ನು ಸೂಚಿಸುತ್ತದೆ ಗ್ರಹಗತಿಗಳು ಭಿನ್ನ ಫಲಗಳನ್ನು ನೀಡಲಿವೆ. ವಿದ್ಯಾರ್ಥಿ ಸಮೂಹವು ಶೈಕ್ಷಣಿಕ ಪ್ರಗತಿಗಾಗಿ ಹೆಚ್ಚಿನ ಶ್ರಮ ವಹಿಸಬೇಕಾದ ಅಗತ್ಯವಿದೆ. ಕೌಟುಂಬಿಕ ಸಹಕಾರ ಮತ್ತು ಸ್ವಂತ ಪರಿಶ್ರಮವು ಈ ಅವಧಿಯಲ್ಲಿ ಯಶಸ್ಸಿನ ಕೀಲಿಕೈಯಾಗಲಿದೆ. ವಿವರ ಹೀಗಿದೆ.

ಮೇಷ ರಾಶಿ

ಕೃಷಿ ವಲಯದಿಂದ ಹೆಚ್ಚಿನ ಆದಾಯ ಹರಿದುಬರಲಿದೆ. ಕ್ರೀಡಾ ಕ್ಷೇತ್ರದವರಿಗೆ ಧನಾರ್ಜನೆಗೆ ಉತ್ತಮ ಅವಕಾಶಗಳಿವೆ. ಸಂಬಂಧಿಕರಿಂದ ನೆರವು ಪಡೆಯಲಿದ್ದೀರಿ. ವಿದ್ಯಾರ್ಥಿ ಸಮೂಹಕ್ಕೆ ಕೊಂಚ ಉತ್ತಮ ಮಟ್ಟದ ಫಲಿತಾಂಶ ಒಲಿಯುವ ಸಾಧ್ಯತೆ ಇದೆ. ಕೆಲವರಿಗೆ ಬಾಧೆ ಇರಬಹುದು.

ವೃಷಭ ರಾಶಿ

ಉತ್ಸಾಹಭರಿತರಾಗಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಆದಾಯದ ಪ್ರಮಾಣ ಸಾಧಾರಣ ಸ್ಥಿತಿಯಲ್ಲಿರಲಿದೆ. ಹಿರಿಯ ವ್ಯಕ್ತಿಗಳಿಂದ ಬೆಂಬಲ ದೊರೆಯುವುದು. ವಿದ್ಯಾರ್ಥಿಗಳಿಗೆ ಸಾಧಾರಣಕ್ಕಿಂತ ಹೆಚ್ಚಿನ ಯಶಸ್ಸು ಲಭ್ಯವಾಗಲಿದೆ. ಆರೋಗ್ಯದ ಸ್ಥಿತಿಯಲ್ಲಿ ಚೇತರಿಕೆ ಕಂಡುಬರಲಿದೆ. ಪೂರ್ವಜರ ಆಸ್ತಿಪಾಸ್ತಿಗಳಿಂದ ವರಮಾನ ಬರಲಿದೆ. ವಿದೇಶದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ.

ಮಿಥುನ ರಾಶಿ

ವರಮಾನವು ನಿರೀಕ್ಷೆಗಿಂತ ಅಧಿಕವಾಗಿರಲಿದೆ. ವಯಸ್ಸಾದ ಮಹಿಳೆಯರ ನೆರವು ಸಿಗಲಿದೆ. ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭ ಗಳಿಸುವಿರಿ. ಶೀತದ ಸಮಸ್ಯೆ ಹಾಗೂ ಉಸಿರಾಟದ ತೊಂದರೆಗಳು ಕೆಲವರನ್ನು ಕಾಡಬಹುದು. ಜೀವನಸಂಗಾತಿಯಿಂದ ನಿರೀಕ್ಷೆಗೂ ಮೀರಿದ ಆರ್ಥಿಕ ನೆರವು ಒದಗಲಿದೆ. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಅಸಹಕಾರ ಎದುರಾಗಬಹುದು.

ಕಟಕ ರಾಶಿ

ವಿಪರೀತವಾದ ಆತ್ಮವಿಶ್ವಾಸ ಮೂಡಲಿದೆ. ಸಂಬಂಧಿಕರು ಕೇವಲ ತಮ್ಮ ಸ್ವಾರ್ಥದ ವ್ಯವಹಾರಗಳಿಗಾಗಿ ನಿಮ್ಮನ್ನು ಸಂಪರ್ಕಿಸಿದರೂ, ಅದರಿಂದ ನಿಮಗೆ ನಷ್ಟದ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಸಾಧಾರಣ ಮಟ್ಟಕ್ಕಿಂತ ಕೊಂಚ ಹೆಚ್ಚಿನ ಫಲಿತಾಂಶ ಲಭಿಸಲಿದೆ. ಕೆಲವರಲ್ಲಿ ತಲೆಸುತ್ತು ಕಾಣಿಸಿಕೊಳ್ಳಬಹುದು. ವಿದೇಶಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಅನಿರೀಕ್ಷಿತ ತಿರುವುಗಳು ಎದುರಾಗಿ, ಅವರ ವಹಿವಾಟು ವಿಸ್ತರಣೆಯಾಗಲಿದೆ. ಸಾಂಪ್ರದಾಯಿಕ ವೈದ್ಯಕೀಯ ವೃತ್ತಿ ನಡೆಸುವವರಿಗೆ ಬೇಡಿಕೆ ಹೆಚ್ಚಾಗಿ, ವರಮಾನ ಹಾಗೂ ಸಮಾಜದಲ್ಲಿನ ಗೌರವ ವೃದ್ಧಿಯಾಗಲಿದೆ.

ಸಿಂಹ ರಾಶಿ

ವರಮಾನದ ಪ್ರಮಾಣ ನಿರೀಕ್ಷಿತ ಮಟ್ಟವನ್ನು ತಲುಪಲಿದೆ. ವಾಣಿಜ್ಯ ವ್ಯವಹಾರಗಳ ಮೂಲಕ ಆದಾಯ ಹೆಚ್ಚಾಗಲಿದೆ. ಸಂಬಂಧಿಕರಿಂದ ಅಲ್ಪ ಪ್ರಮಾಣದ ಸಹಕಾರ ಲಭ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಅವರು ನಿರೀಕ್ಷಿಸಿದ ಫಲಿತಾಂಶ ಪಡೆಯುವುದು ಕೊಂಚ ಕಷ್ಟಕರ. ಹಳೆಯ ನೋವು ಮರುಕಳಿಸುವ ಸಾಧ್ಯತೆ ಇದೆ. ಜೀವನಸಂಗಾತಿಯೊಂದಿಗೆ ವಿದೇಶ ಪ್ರವಾಸ ಕೈಗೊಳ್ಳುವ ಅವಕಾಶ ಕೂಡಿಬರಲಿದೆ.

ಕನ್ಯಾ ರಾಶಿ

ಉತ್ತಮ ಬೇಡಿಕೆ ಸೃಷ್ಟಿಯಾಗಲಿದೆ. ಕಚೇರಿಯಲ್ಲಿನ ಮಹಿಳಾ ಸಹೋದ್ಯೋಗಿಗಳಿಂದ ಬೆಂಬಲ ದೊರೆಯಲಿದೆ. ಓದುವ ಆಸಕ್ತಿ ಇದ್ದರೂ ಅದಕ್ಕೆ ಪೂರಕ ವಾತಾವರಣ ಇರುವುದಿಲ್ಲ. ಕೀಲುರೋಗ ತಜ್ಞರಿಗೆ ಬೇಡಿಕೆ ಹೆಚ್ಚಾಗಲಿದ್ದು, ಆದಾಯವೂ ವೃದ್ಧಿಸಲಿದೆ. ಹಿರಿಯರ ಆಸ್ತಿ ವಿಚಾರದಲ್ಲಿದ್ದ ಅಡೆತಡೆ ನಿವಾರಣೆಯಾಗಲಿವೆ. ಸರ್ಕಾರಿ ವಲಯದ ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಅನುಕೂಲಕರ ವಾತಾವರಣವಿರುತ್ತದೆ.

ತುಲಾ ರಾಶಿ

ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಧನಸಂಪಾದನೆ ಮಾಡಲಿದ್ದೀರಿ. ವರಮಾನದಲ್ಲಿ ಏರಿಕೆ ಕಂಡುಬರುವುದು. ಕೈಗೊಳ್ಳುವ ಕೆಲಸಗಳಿಗೆ ಹಿರಿಯರ ಬೆಂಬಲ ಸಿಗುವುದು ಕಷ್ಟಸಾಧ್ಯ. ಸಾಂಪ್ರದಾಯಿಕ ಕೃಷಿಕರಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಹಳೆಯ ಕೃಷಿ ಸಾಲವನ್ನು ಚುಕ್ತಾ ಮಾಡಲು ಸಾಧ್ಯವಾಗುತ್ತದೆ. ಜೀವನಸಂಗಾತಿಯ ಕಠಿಣ ಮಾತುಗಳನ್ನು ಕೇಳಬೇಕಾದ ಪರಿಸ್ಥಿತಿ ಎದುರಾಗಬಹುದು.

ವೃಶ್ಚಿಕ ರಾಶಿ

ವಾರದ ಆರಂಭದಲ್ಲಿಯೇ ಸಂತೋಷದ ವಾರ್ತೆಯೊಂದು ಕಿವಿಗೆ ಬೀಳಲಿದೆ. ವಿದೇಶಿ ಕಂಪನಿಗಳಿಗಾಗಿ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರಿಗೆ ಹೆಚ್ಚಿನ ಆದಾಯ ಲಭ್ಯವಾಗಲಿದೆ. ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಗತಿ ಇರುತ್ತದೆ. ಸಂಗಾತಿಯ ಕಡೆಯ ಸಂಬಂಧಿಕರ ಮೂಲಕ ಎದುರಾಗಿದ್ದ ಸಾಲದ ಸಮಸ್ಯೆ ಕೊಂಚ ಮಟ್ಟಿಗೆ ಬಗೆಹರಿಯಲಿದೆ.

ಧನುಸ್ಸು ರಾಶಿ

ಕೊಂಚ ಸೋಮಾರಿತನ ಆವರಿಸಿದರೂ, ತದನಂತರ ಚೇತರಿಕೆ ಕಂಡುಬರಲಿದೆ. ವರಮಾನದ ಸ್ಥಿತಿಯೂ ಸುಧಾರಿಸಲಿದೆ. ಸಂಬಂಧಿಕರಿಂದ ನೆರವು ನಿರೀಕ್ಷಿಸುವುದು ಬಹಳ ಕಷ್ಟ. ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ಕಾರ್ಮಿಕರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ಸಂಗಾತಿಯ ಹೆಸರಿನಲ್ಲಿ ಮಾಡುವ ವ್ಯವಹಾರಗಳಿಂದ ಅಧಿಕ ಲಾಭಾಂಶ ದೊರೆಯಲಿದೆ.

ಮಕರ ರಾಶಿ

ಶ್ರಮವಹಿಸಿ ಕೆಲಸ ಮಾಡುವುದು ಶ್ರೇಯಸ್ಕರ. ಸಾರ್ವಜನಿಕವಾಗಿ ಮಾತನಾಡುವ ಸಂದರ್ಭದಲ್ಲಿ ಎಚ್ಚರದಿಂದಿರಬೇಕು, ಆಯತಪ್ಪಿ ಆಡುವ ಒಂದೇ ಒಂದು ಮಾತು ಗಂಭೀರ ಪರಿಣಾಮವನ್ನು ಬೀರಬಹುದು. ವಿರೋಧಿಗಳನ್ನು ಹತ್ತಿಕ್ಕುವ ಕಲೆಯನ್ನು ನೀವು ಕರಗತ ಮಾಡಿಕೊಳ್ಳಲಿದ್ದೀರಿ.ಕಾರ್ಮಿಕರಿಗೆ ವಿಪುಲ ಉದ್ಯೋಗಾವಕಾಶಗಳು ಸಿಗಲಿವೆ. ಕ್ರೀಡಾ ತರಬೇತಿಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ಇರಲಿದೆ.

ಕುಂಭ ರಾಶಿ

ಯುವಜನತೆಯಲ್ಲಿ ವಿದೇಶಕ್ಕೆ ತೆರಳುವ ವ್ಯಾಮೋಹ ಹೆಚ್ಚಾಗಲಿದೆ. ಪ್ರಸ್ತುತ ಆದಾಯ ಕಡಿಮೆಯಿರುವುದರಿಂದ ವರಮಾನದ ಇತರೆ ಮೂಲಗಳ ಬಗ್ಗೆ ಗಮನ ಹರಿಸಬೇಕಾದ ಅಗತ್ಯವಿದೆ. ಸಂಬಂಧಿಕರ ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇದೆ. ಕೆಲವೊಂದು ಸಂಬಂಧಿಕರು ನೆರವಿಗೆ ಬರಲಿದ್ದಾರೆ. ಸರ್ಕಾರಿ ಕೆಲಸಕಾರ್ಯಗಳಲ್ಲಿ ಅಡೆತಡೆ ಎದುರಾಗಬಹುದು. ಜೀವನಸಂಗಾತಿಯಿಂದ ಪೂರ್ಣ ಪ್ರಮಾಣದ ಬೆಂಬಲ ಲಭ್ಯವಾಗಲಿದೆ.

ಮೀನ ರಾಶಿ

ಭವಿಷ್ಯ ನೋಡುವುದಾದರೆ ಕಷ್ಟಪಟ್ಟು ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ನಿಮ್ಮ ಒರಟು ಮಾತಿನಿಂದಾಗಿ ಸಂಬಂಧಿಕರು ದೂರವಾಗುವ ಸಾಧ್ಯತೆ ಇದೆ. ಆಸ್ತಿಪಾಸ್ತಿಗಳ ವ್ಯವಹಾರದಲ್ಲಿ ತೊಡಗಿರುವವರಿಗೆ ಉತ್ತಮ ಆದಾಯವಿರಲಿದೆ. ವಿದ್ಯಾರ್ಥಿಗಳಿಗೆ ಉನ್ನತ ಯಶಸ್ಸನ್ನು ಸಾಧಿಸುವ ಯೋಗವಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor