ಮಾರುಕಟ್ಟೆ ಬರುತ್ತಿದೆ ಎರಡು ಹೊಸ ಕಾರು! ಮುಂದಿನ ಜನರೇಷನ್​ ವೆಹಿಕಲ್ ಹೇಗಿದೆ ಗೊತ್ತಾ!

ಹಂಚಿಕೊಳ್ಳಿ
WhatsApp Facebook X Telegram
Launch 26 New Models by 2030 Maruti Baleno Facelift Hyundai new models
Launch 26 New Models by 2030 Maruti Baleno Facelift Hyundai new models

Launch 26 New Models ಮಲೆನಾಡು ಟುಡೆ ಸುದ್ದಿ / ವೆಹಿಕಲ್​ ಫೀಲ್ಡ್​ನಲ್ಲಿ ಶಿವಮೊಗ್ಗಕ್ಕೆ ಬರುವ ಹೊಸ ಹೊಸ ಕಾರುಗಳಿಗೆ ಲೆಕ್ಕವೇ ಇಲ್ಲ. ಆ ಮಟ್ಟಿಗೆ ಶಿವಮೊಗ್ಗ ಕಾರುಗಳಿಗೆ ದೊಡ್ಡ ಮಾರ್ಕೆಟ್​ ಅನ್ನೋದರಲ್ಲಿ ಡೌಟಿಲ್ಲ. ಈ ಕಾರಣಕ್ಕೆ ಇವತ್ತು ಎರಡು ಅಪ್​ಕಮ್ಮಿಂಗ್ ಕಾರುಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ 2026ರ ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್ ಕಾರಿನ ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಿದೆ. 2026ರ ಬಲೆನೊ ಫೇಸ್‌ಲಿಫ್ಟ್‌ನ ಮಾದರಿಯೊಂದು ಇತ್ತೀಚೆಗೆ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಈ ಬಲೆನೊ ಫೇಸ್‌ಲಿಫ್ಟ್ ಇದೇ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. ಟೆಸ್ಟ್​ ರನ್​ ಮುಗಿಸಿರುವ ಹೊಸ ಆವೃತ್ತಿಯು ಮುಂಭಾಗದಲ್ಲಿ ಅಗಲವಾದ ಗ್ರಿಲ್ ಜೊತೆಗೆ ಹೊಸ ಹೆಡ್‌ಲೈಟ್‌ ಹೊಂದಿದೆ. ಹಿಂಭಾಗದಲ್ಲಿ ಟೈಲ್‌ಗೇಟ್​ ಹೊಸದಾಗಿರುವ ನಿರೀಕ್ಷೆಯಿದೆ. ಇಷ್ಟೆ ಅಲ್ಲದೆ ಬಲೆನೊ ಫೇಸ್‌ಲಿಫ್ಟ್‌ನಲ್ಲಿ ದೊಡ್ಡ ಸ್ಕ್ರೀನ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು ಆರಾಮದಾಯಕ ಪ್ರಯಾಣಕ್ಕೆ ಪೂರಕವಾದ ಹೆಚ್ಚಿನ ವೈಶಿಷ್ಟ್ಯಗಳನ್ನು ಅಳವಡಿಸುವ ನಿರೀಕ್ಷೆಯಿದೆ.

ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್‌ನ ಪವರ್‌ಟ್ರೇನ್ ಬಹುಪಾಲು ಬದಲಾಗದೆ ಉಳಿಯುವ ನಿರೀಕ್ಷೆಯಿದ್ದರೂ, ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಹೊಸ ಹೈಬ್ರಿಡ್ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಯಿದೆ. ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಸಂಯೋಜಿತವಾದ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಬಲೆನೊ ಫೇಸ್‌ಲಿಫ್ಟ್ ಹೊಂದಿರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

ಇನ್ನೊಂದೆಡೆ 2030ರ ವೇಳೆಗೆ ಪೆಟ್ರೋಲ್, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಪವರ್‌ಟ್ರೇನ್‌ಗಳನ್ನು ಒಳಗೊಂಡ 26 ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯನ್ನು ಹ್ಯುಂಡೈ ಪ್ರಕಟಿಸಿದೆ. ಎರಡು ಪ್ರಮುಖ ಎಸ್‌ಯುವಿ ಬೇಯಾನ್ ಆಧಾರಿತ ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಕ್ರೆಟಾ 2026-27ನೇ ಹಣಕಾಸು ವರ್ಷದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಆಂತರಿಕವಾಗಿ ಬಿಸಿ4ಐ ಎಂದು ಕರೆಯಲ್ಪಡುವ ಬೇಯಾನ್ ಆಧಾರಿತ ಎಸ್‌ಯುವಿ 2026ರ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.. ಹೊಸ ಎಸ್‌ಯುವಿ ಡ್ಯುಯಲ್ ಸ್ಕ್ರೀನ್ ಡ್ಯಾಶ್‌ಬೋರ್ಡ್, ಕನೆಕ್ಟೆಡ್ ಕಾರ್ ತಂತ್ರಜ್ಞಾನ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಮುಂಭಾಗದ ಸೀಟ್‌ಗಳು, ಹಿಂಭಾಗದ ಎಸಿ ವೆಂಟ್‌ಗಳು ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿರಲಿದೆ.

ಮೂರನೇ ತಲೆಮಾರಿನ ಕ್ರೆಟಾ ಕೂಡ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಹೊಸ ಕ್ರೆಟಾ ಸಂಪೂರ್ಣ ಹೊಸ ವಿನ್ಯಾಸ, ಹೊಸ ವೈಶಿಷ್ಟ್ಯಗಳ ಪಟ್ಟಿ ಮತ್ತು ಹ್ಯುಂಡೈನ ಹೊಸ ಕೆ3 ಪ್ಲಾಟ್‌ಫಾರ್ಮ್ ಅನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor