ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡು ಟುಡೆ ದಿನಪತ್ರಿಕೆಯ ಇವತ್ತಿನ ಈ ಪತ್ರಿಕೆ ಇಲ್ಲಿದೆ. ಇಂದಿನ ಪ್ರಮುಖ ಸುದ್ದಿಗಳನ್ನು ಗಮನಿಸುವುದಾದರೆ, ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಸ್ಟಿಂಗ್ ಆಪರೇಷನ್ ವಿವಾದದ ಕುರಿತು ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿರುವ ಹೇಳಿಕೆ ಇಂದಿನ ಸಂಚಿಕೆಯ ಮುಖಪುಟದ ಪ್ರಮುಖ ಸುದ್ದಿಯಾಗಿದೆ.
ಇನ್ನೂ ಮಲೆನಾಡಿನಾದ್ಯಂತ ರೈತಾಪಿ ಕುಟುಂಬಗಳು ಭೂಮಿ ಹುಣ್ಣಿಮೆ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿದ ವರದಿ ಮುಖಪುಟದಲ್ಲಿದೆ. ಭೂತಾಯಿಯನ್ನು ಗರ್ಭಿಣಿಯಂತೆ ಪೂಜಿಸಿ, ವಿಶೇಷ ತಿಂಡಿ ತಿನಿಸುಗಳನ್ನು ಅರ್ಪಿಸಿ, ಹೊಲದಲ್ಲಿಯೇ ಸಾಮೂಹಿಕ ಭೋಜನ ನಡೆಸಿದ ಹಬ್ಬದ ಸಂಭ್ರಮವನ್ನು ವರದಿ ಒಳಗೊಂಡಿದೆ.
ಇನ್ನೊಂದೆಡೆ ಸಾಗರ ತಾಲೂಕಿನ ಕಾಸ್ಪಾಡಿ ಸಮೀಪ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕಾಟಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಗಾಯಗೊಂಡ ವನ್ಯಪ್ರಾಣಿಗೆ ಸಕಾಲದಲ್ಲಿ ಪಶುವೈದ್ಯಕೀಯ ಚಿಕಿತ್ಸೆ ಲಭ್ಯವಾಗದಿರುವ ಆರೋಪ ಹಾಗೂ ವನ್ಯಜೀವಿಗಳ ತುರ್ತು ಚಿಕಿತ್ಸಾ ವ್ಯವಸ್ಥೆಯ ಕುರಿತು ಉದ್ಭವಿಸಿರುವ ಪ್ರಶ್ನೆಗಳನ್ನು ಸುದ್ದಿಯಲ್ಲಿ ವಿವರಿಸಲಾಗಿದೆ.
ಎಸ್. ಬಂಗಾರಪ್ಪ ಅವರ ಕುರಿತ ವಿಶೇಷ ಲೇಖನಗಳು
ಮಲೆನಾಡಿನ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ವ್ಯಕ್ತಿತ್ವ, ಸಮಾಜವಾದಿ ಚಿಂತನೆ, ಕನ್ನಡದ ಮೇಲಿನ ಅಭಿಮಾನ, ಸಾಹಿತ್ಯ ಮತ್ತು ಕ್ರೀಡಾಸಕ್ತಿ ಹಾಗೂ ಸಾರ್ವಜನಿಕ ಜೀವನದ ಕುರಿತು ವಿಶೇಷ ಲೇಖನಗಳು ಇಂದಿನ ಸಂಚಿಕೆಯ 3ನೇ ಪುಟದಲ್ಲಿವೆ. ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಅವರ ‘ಈ ಬದ್ಧತೆ ಎಂದೂ ಭದ್ರ’ ಹಾಗೂ ಡಾ. ಮಂಜುಳಾ ಹುಲ್ಲಹಳ್ಳಿ ಅವರ ‘ದೂರದಿಂದ ಬಂಗಾರಪ್ಪನವರು’ ಲೇಖನಗಳನ್ನು ಪ್ರಕಟಿಸಲಾಗಿದೆ.
ಇದರೊಂದಿಗೆ ಮಹರ್ಷಿ ವಾಲ್ಮೀಕಿಯವರ ಜೀವನ, ರಾಮಾಯಣ ಮಹಾಕಾವ್ಯ ಹಾಗೂ ಮಾನವೀಯ ಮೌಲ್ಯಗಳ ಕುರಿತು ವಿಶೇಷ ಲೇಖನವೂ ಸಂಚಿಕೆಯಲ್ಲಿದೆ.
ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ (CFTRI) 28 ತಾಂತ್ರಿಕ ಹುದ್ದೆಗಳ ನೇಮಕಾತಿ, ಮಾಜಿ ಸೈನಿಕರಿಗೆ 2 ಹುದ್ದೆಗಳ ಮೀಸಲಾತಿ ಹಾಗೂ ಅರ್ಜಿ ಸಲ್ಲಿಸುವ ವಿವರಗಳನ್ನು ಪ್ರಕಟಿಸಲಾಗಿದೆ.
ಇಂದಿನ ಸಂಪೂರ್ಣ ಇ-ಪೇಪರ್ ಓದಲು ಕೆಳಗಿನ PDF ವೀಕ್ಷಿಸಿ ಅಥವಾ ಡೌನ್ಲೋಡ್ ಮಾಡಿಕೊಳ್ಳಿ. ಇಲ್ಲಿಂದೆ ಲಿಂಕ್
