ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ವ್ಯಕ್ತಿಯೊಬ್ಬ ನನ್ನನ್ನು ಕಿಡ್ನಾಪ್ ಮಾಡಲು ಬರುತ್ತಿದ್ದಾನೆ ಎಂದು ಮಹಿಳೆಯೊಬ್ಬರು 112 ಸಿಬ್ಬಂದಿಗೆ ಫೋನ್ ಮಾಡಿ ಸಹಾಯ ಕೋರಿರುವ ಘಟನೆ ನಡೆದಿದೆ.
ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಿಂದ 112 ಸಿಬ್ಬಂದಿಗೆ ತುರ್ತು ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿದಾಗ ಮಹಿಳೆಯು, ಒಬ್ಬ ವ್ಯಕ್ತಿ ನನ್ನನ್ನು ಅಪಹರಣ ಮಾಡಲು ಬರುತ್ತಿದ್ದಾನೆ, ದಯವಿಟ್ಟು ನನಗೆ ಸಹಾಯ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ತೆರಳಿದ ಸಿಬ್ಬಂದಿಗಳು ದೂರುದಾರರನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಮಹಿಳೆಗೆ ಧೈರ್ಯ ತುಂಬಿ, ಆ ವ್ಯಕ್ತಿಯ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.
