ಶಿವಮೊಗ್ಗ: ಮೋದಿಯವರೂ ತಂದೆ ಹೆಸರು ಹೇಳದೇ 5 ವರ್ಷ ಅಧಿಕಾರ ಕೇಳಿಲ್ವಾ?: ಖರ್ಗೆ ಹೇಳಿಕೆ ವಿಚಾರವಾಗಿ ಮಧು ಬಂಗಾರಪ್ಪ ಹೇಳಿದ್ದೇನು ?

ಹಂಚಿಕೊಳ್ಳಿ
WhatsApp Facebook X Telegram
madhu-bangarappa-defends-mallikarjun-kharge
madhu-bangarappa-defends-mallikarjun-kharge

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರು ಕೂಡ ತಮ್ಮ ತಂದೆಯವರ ಹೆಸರು ಹೇಳದೇ ನನಗೆ 5 ವರ್ಷ ದೇಶ ಆಳಲು ಅವಕಾಶ ಕೊಡಿ ಎಂದು ಜನರ ಬಳಿ ಕೇಳಿರಲಿಲ್ಲವೇ ಎಂದು ಪ್ರಶ್ನಿಸುವ ಮೂಲಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿವಾದಾತ್ಮಕ ಹೇಳಿಕೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಮರ್ಥಿಸಿಕೊಂಡಿದ್ದಾರೆ.

ಪಾಟ್ನಾದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ನೀಡಿದ ಹೇಳಿಕೆ ರಾಜಕೀಯ ಕಾವು ಪಡೆದುಕೊಂಡ ಬೆನ್ನಲ್ಲೇ, ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಅವರ ತಂದೆಯವರ ಬಗ್ಗೆ ಮಾತನಾಡುವುದು ಭಾವನಾತ್ಮಕವಾಗಿ ಬೇರೆಯದ್ದೇ ವಿಷಯ. ಪ್ರಧಾನಿ ಮೋದಿಯವರಿಗೆ ದೇಶದ ಜನರ ಮೇಲೆ ನಂಬಿಕೆ ಇಟ್ಟು ಮಾತನಾಡುವ ಅಭ್ಯಾಸವಿಲ್ಲ. ರಾಜಕೀಯದಲ್ಲಿ ಆಕ್ರೋಶದ ವಾತಾವರಣ ಅಥವಾ ಗಲಾಟೆಗಳು ನಡೆದಾಗ ಈ ರೀತಿಯ ಮಾತುಗಳು ಸಹಜವಾಗಿ ಹೊರಬರುತ್ತವೆ ಎಂದು ಮಧು ಬಂಗಾರಪ್ಪ ಹೇಳಿದರು.

ಸಂವಿಧಾನದಲ್ಲಿ ಮಾಧ್ಯಮಗಳಿಗೆ ಹಾಗೂ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಮಾಧ್ಯಮಗಳನ್ನು ನೋಡಿದ ತಕ್ಷಣವೇ ಮೋದಿ ಹೆಸರು ನೆನಪಿಗೆ ಬರುತ್ತದೆ, ಆದರೆ ಈಗ ಜನರು ಅವರ ವಿರುದ್ಧ ತಿರುಗಿಬೀಳುತ್ತಿದ್ದಾರೆ. ಪ್ರತಿಯೊಬ್ಬರೂ ಸ್ವಲ್ಪ ಹುಷಾರಾಗಿರಬೇಕು. ಬಿಜೆಪಿಯವರ ಎಲ್ಲಾ ಕರ್ಮಗಳೂ ಈಗ ಜನರಿಗೆ ಗೊತ್ತಾಗುತ್ತಿವೆ ಎಂದು ಟೀಕಿಸಿದರು.

ದೇಶವನ್ನು ಆಳುತ್ತಿರುವ ಬಿಜೆಪಿ ನಾಯಕರು ಮೊದಲು ತಮ್ಮ ಗೌರವ ಹಾಗೂ ಮಾನ-ಮರ್ಯಾದೆಯನ್ನು ಕಾಪಾಡಿಕೊಳ್ಳಬೇಕು. ಮಾಧ್ಯಮಗಳನ್ನು ತಪ್ಪಾದ ದಿಕ್ಕಿಗೆ ಎಳೆದು ತಂದು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಇರುತ್ತದೆ, ಆದರೆ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಬಾರದು ಎಂದು ಸಚಿವರು ಹೇಳಿದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor