ಹೊಸ ಸ್ಪೈಡರ್​ ಮ್ಯಾನ್ ಜೊತೆಗೆ ಕಾಂತಾರ ರಿಷಬ್​ ಶೆಟ್ಟಿ ! ಸಖತ್ ಆಗಿದೆ ಪ್ರೋಮೋ! ಏನಿದು ವಿಶೇಷ ಓದಿ!

ಹಂಚಿಕೊಳ್ಳಿ
WhatsApp Facebook X Telegram
Rishab Shetty Joins Sony Pictures Spider-Man Brand New Day Promotion
Rishab Shetty Joins Sony Pictures Spider-Man Brand New Day Promotion

Sony Pictures Spider Man / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬದಲಾವಣೆ ಜಗದ ನಿಯಮ ಎನ್ನುವ ಹಾಗೆ ಸಿನಿ ಲೋಕವು ಬದಲಾಗಿದೆ. ಮೊದಲೆಲ್ಲಾ ಸ್ಥಳೀಯ ಸಿನಿಮಾ ಪ್ರಚಾರಕ್ಕೆ ಅಂತಾರಾಷ್ಟ್ರೀಯ ಟಚ್​ ಕೊಡುತ್ತಿದ್ದ ಪ್ರಯತ್ನ ನಡೆಯುತ್ತಿತ್ತು. ಈಗ ಹಾಲಿವುಡ್ ಸಿನಿಮಾಗಳೇ ಲೋಕಲ್​ನಲ್ಲಿ ಸಕ್ಸಸ್ ಕಾಣಲು ನಾನಾ ಪ್ರಯತ್ನ ಮಾಡುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಸ್ಪೈಡರ್​ ಮ್ಯಾನ್​ ಚಿತ್ರ ತಂಡ ಕಾಂತಾರಾ ಸೂಪರ್​ ಸ್ಟಾರ್ ರಿಷಬ್​ ಶೆಟ್ಟಿಯ ಜೊತೆ ಚಿತ್ರ ಪ್ರಚಾರಕ್ಕಾಗಿ ಕೈ ಜೋಡಿಸಿದೆ.

ಹಾಲಿವುಡ್ ಸೋನಿ ಪಿಕ್ಚರ್ಸ್ ಮುಂಬರುವ ಸೈಡರ್ ಮ್ಯಾನ್​ ಬ್ರಾಂಡ್ ನ್ಯೂ ಡೇ ಸಿನಿಮಾದ ವಿಶೇಷ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿ ಅವ ರೊಂದಿಗೆ ಕೈಜೋಡಿಸಿದೆ. ಈ ಮೂಲಕ ಹಾಲಿವುಡ್ ಚಿತ್ರವೊಂದರ ಪ್ರಚಾರದ ಪ್ರಮುಖ ಭಾಗವಾಗಿ ಆಯ್ಕೆಯಾದ ಭಾರ ತದ ಮೊದಲ ನಟ ಎಂಬ ಐತಿಹಾಸಿಕ ಹೆಗ್ಗ ಳಿಕೆಗೆ ರಿಷಬ್ ಪಾತ್ರರಾಗಿದ್ದಾರೆ.

ಕುಂದಾಪುರದ ಕೆರಾಡಿಯಿಂದ ಬಂದ ‘ಕಾಂತಾರ’ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಜಾಗತಿಕ ಮಟ್ಟದ ಸೂಪರ್ ಹೀರೋ ಫ್ರಾಂಚೈಸಿ ಸೈಡರ್ ಮ್ಯಾನ್ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಮೂಲಕ ಕನ್ನಡ ಹಾಗೂ ಭಾರತೀಯ ಚಿತ್ರರಂಗ ಹೆಮ್ಮೆಪಡುವಂತೆ ಮಾಡಿದ್ದಾರೆ.

ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿರುವ ವಿಶೇಷ ಪ್ರಚಾರದ ಪ್ರೋಮೋವನ್ನು ಹಂಚಿಕೊಂಡಿದೆ. ರಿಷಬ್ ಶೆಟ್ಟಿ ಪೀಟರ್ ಪಾರ್ಕರ್ ಪ್ರಪಂಚಕ್ಕೆ ಪ್ರವೇಶಿಸುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ…ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸೈಡರ್ ಮ್ಯಾನ್ ನೋ ವೇ ಹೋಮ್ ಅಂತ್ಯದಲ್ಲಿ ಪೀಟರ್ ಪಾರ್ಕರ್ ತನ್ನ ನೆನಪನ್ನು ಜಗತ್ತೇ ಮರೆಯುವಂತೆ ಮಾಡುವ ಸನ್ನಿವೇಶ, ಆತನ ಒಂಟಿತನ ಮತ್ತು ಸೂಪರ್-ಹೀರೋಯಿಸಂ ಪರಿಕಲ್ಪನೆಯನ್ನು ರಿಷಬ್ ಶೆಟ್ಟಿ ಈ ಪ್ರೋಮೋದಲ್ಲಿ ವಿವರಿಸಿದ್ದಾರೆ.

ಟಾಮ್ ಹಾಲ್ಯಾಂಡ್ ಅಭಿನಯದ ಈ ಸಿನಿಮಾ ಜುಲೈ 30 ರಂದು ವಿಶ್ವಾದ್ಯಂತ ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಪ್ರಮುಖ ಭಾಷೆಗಳಲ್ಲಿ ತೆರೆ ಕಾಣಲಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor