ಸಿಎಂ ಡಿಕೆ ಶಿವಕುಮಾರ್​ ಪಿಎ ಎಂದು ಹೇಳಿಕೊಂಡ ವ್ಯಕ್ತಿ ವಿರುದ್ಧ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್!

ಹಂಚಿಕೊಳ್ಳಿ
WhatsApp Facebook X Telegram
Shivamogga Robbery.
Shivamogga Robbery

Fake PA of CM DK Shivakumar / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ಸಹಾಯಕ (ಪಿಎ) ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ ಸುಮಾರು 15 ಲಕ್ಷ ರೂ. ಪಡೆದು ವಂಚನೆ ಎಸಗಿದ ಪ್ರಕರಣ ಶಿವಮೊಗ್ಗದಲ್ಲಿಯೇ ವರದಿಯಾಗಿದೆ.

ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್‌ಐಆರ್ ನಲ್ಲಿ ಉಲ್ಲೇಖಿಸಿರುವಂತೆ ಕೆಎಚ್‌ ಬಿ ಕಾಲೋನಿಯ ನಿವಾಸಿ ಹಾಗೂ ರೈತ ಮಂಜುನಾಥ ಹಂಜಿ ಅವರು ಈ ಕುರಿತು ದೂರು ದಾಖಲಿಸಿದ್ದಾರೆ. ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ ಎಂಬಾತ ಸುಮಾರು ಎಂಟು ತಿಂಗಳ ಹಿಂದೆ ಪರಿಚಯವಾಗಿ, ತಾನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಿಎ ಎಂದು ಹೇಳಿಕೊಂಡು ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದ ನಂತೆ.

ಆನಂತರ 15 ಲಕ್ಷ ರೂ. ಪಡೆದಿದ್ದ ಆರೋಪಿ, ಸಂತ್ರಸ್ತರ ಸಂಪರ್ಕಕ್ಕೆ ಸಿಗದೆ ಎಸ್ಕೇಪ್ ಆಗಿದ್ದ ಎಂದು ದೂರಲಾಗಿದ್ದು, ಈ ಸಂಬಂದ ತುಂಗಾನಗರ ಪೊಲೀಸರು ಆರೋಪಕ್ಕೆ ಸಂಬಂಧಿಸಿದ ಬಿಎನ್​ಎಸ್ ಸೆಕ್ಷನ್​ಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor