ಶಿವಮೊಗ್ಗದಲ್ಲಿ ದುರಂತ, ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿತ, ಒಂದೇ ಕುಟುಂಬದ ಮೂವರ ದುರ್ಮರಣ

Published: 02 ಆಗಷ್ಟ್ 2026, 8:34 ಫೂರ್ವಾಹ್ನ • 1 min read

thirthahalli / ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತಡರಾತ್ರಿ 2:30ರ ಸಮಯ. ಧಾರಾಕಾರ ಮಳೆಯ ಆರ್ಭಟ, ಭಾರದ ಮಳೆ ಸುರಿಯುತ್ತಿರುವುದು ಥಂಡಿಯ ಜೊತೆಗೆ ನೆಮ್ಮದಿಯ ನಿದ್ರೆ ಹತ್ತಿಸಿತ್ತು. ಇಡೀ ತೀರ್ಥಹಳ್ಳಿ ನಿದ್ದೆಗೆ ಜಾರಿತ್ತು. ಆದರೆ ಇಲ್ಲಿನ ಇಂದಿರಾ ನಗರದ ಅನಾಹುತವೊಂದು ಸಂಭವಿಸಿತ್ತು.

ಶೆಡ್​ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಧರೆ ಕುಸಿದು, ಒಂದೆ ಕುಟುಂಬದ ಮೂವರು ಮಣ್ಣಿನಡಿಯಾದರು. ವಿಷಯ ಗೊತ್ತಾಗುವ ಹೊತ್ತಿಗಾಗಲೇ ಮೂವರು ಸಾವನ್ನಪ್ಪಿದ್ದರು. ಇನ್ನೂ ಧರೆ ಜರಿದ ಸದ್ದು ಕೇಳಿ ಅಕ್ಕಪಕ್ಕದವರು ಸುತ್ತಮುತ್ತಲಿನವರು ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸ್ತಿದ್ದಾರೆ. ಸದ್ಯ ನಮ್ಮ ಮಲೆನಾಡು ಟುಡೆಯ ಸ್ನೇಹಿತ ವರದಿಗಾಗ ಶ್ರೀಕಾಂತ್ ರವರ ಪ್ರಕಾರ, ಘಟನೆಯಲ್ಲಿ ಮೃತಪಟ್ಟವರ ಶವ ಇನ್ನಷ್ಟೆ ಸಿಗಬೇಕಿದೆ. ಮಳೆ ಚಳಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.

ಮಗು ಸೇರಿ ಒಂದೇ ಕುಟುಂಬದ ಮೂವರು ಸಾವು

ಮೃತರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಕ್ಕರೆಗಾರು ಗ್ರಾಮದ ಮಲ್ಲಿಕಾರ್ಜುನ (35), ಅವರ ಪತ್ನಿ ನಾಗವೇಣಿ (28) ಹಾಗೂ ಮಗು ಸಂತೋಷ (3)

ತೀರ್ಥಹಳ್ಳಿಯಲ್ಲಿ ಧರೆ ಕುಸಿಯುವ ಆತಂಕದ ಬಗ್ಗೆ ಈಗಾಗಲೇ ಹಲವು ವರದಿಗಳು ಬಂದಿದೆ. ಸ್ಥಳೀಯ ಮೂಲದ ಪ್ರಕಾರ, ಕಳೆದ ವರ್ಷ ಇದೇ ಭಾಗದ ಇನ್ನೊಂದು ಕಡೆ ಗುಡ್ಡ ಜರಿದಿತ್ತು. ಈ ಸಲ, ಇತ್ಬದಿ ಕುಸಿದಿದೆ. ಮಳೆಯ ಅಬ್ಬರಕ್ಕೆ ಮಣ್ಣು ಸಡಿಲವಾಗಿ ಅನಾಹುತವಾಗಿದೆ.

ಪಕ್ಕದ ಶೆಡ್‌ನಲ್ಲಿದ್ದವರಿಗೆ ಗಾಯ

ಇನ್ನೂ ಘಟನೆಯಲ್ಲಿ ಅಲ್ಲಿಯೇ ಇದ್ದ ಇನ್ನೊಂದು ಶೆಡ್ ಮೇಲೂ ಮಣ್ಣು ಬಿದ್ದಿದ್ದು, ಅದರಲ್ಲಿದ್ದವರಿಗೂ ಗಂಭೀರ ಗಾಯಗಳಾಗಿವೆ. ಮಣ್ಣಿನಡಿ ಸಿಲುಕಿ ನರಳಾಡುತ್ತಿದ್ದ ಗಾಯಾಳುಗಳನ್ನು ತಕ್ಷಣವೇ ರಕ್ಷಿಸಿ, ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ರವಾನಿಸಲಾಗಿದೆ.

END OF STORY

ajjimane ganesh

Senior Journalist | Malenadu Today
✓ Verified Journalist