Madhubangarappa/ ನೂತನ ಸಚಿವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಕಳ್ಳರ ಕಾಟ! ಕಾಂಗ್ರೆಸ್​ ಮುಖಂಡರ ಮೊಬೈಲ್ ! 15 ಸಾವಿರ ದುಡ್ಡು ಕಳ್ಳತನ

Thieves at the reception of the new minister! Congress leader's mobile phone! Rs 15,000 stolen/ madhubangarappa

Madhubangarappa/ ನೂತನ ಸಚಿವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಕಳ್ಳರ ಕಾಟ! ಕಾಂಗ್ರೆಸ್​ ಮುಖಂಡರ ಮೊಬೈಲ್ ! 15 ಸಾವಿರ ದುಡ್ಡು ಕಳ್ಳತನ

KARNATAKA NEWS/ ONLINE / Malenadu today/ Jun 3, 2023 SHIVAMOGGA NEWS

ಶಿವಮೊಗ್ಗ/ ನಗರಕ್ಕೆ ಸಚಿವರಾದ ಬಳಿಕ ಇದೇ ಮೊದಲ ಭಾರಿಗೆ ಆಗಮಿಸುತ್ತಿರುವ ಮಧು ಬಂಗಾರಪ್ಪರವರಿಗೆ ಜಿಲ್ಲಾ ಕಾಂಗ್ರೆಸ್ ಅದ್ದೂರಿ ಸ್ವಾಗತ ಕೋರಿದೆ. ಈ ಮದ್ಯೆ ಸ್ವಾಗತ ಕೋರುವ ನಡೆಸಿದ ರೋಡ್​ ಶೋ ವೇಳೆ ಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. 

ಜಿಲ್ಲಾ ಕಾರ್ಯದರ್ಶಿ ಮಧುರವರಿಗೆ ಸೇರಿದ 15 ಸಾವಿರ ರೂಪಾಯಿ ಹಣವನ್ನ ಕಳ್ಳರು ಪಿಕ್ ಪಾಕೆಟ್ ಮಾಡಿದ್ದಾರೆ. ಇಷ್ಟೆ ಅಲ್ಲದೆ  ಸಚಿವರ ಆಗಮನದ ವೇಳೆ ಹಲವರ ಮೊಬೈಲ್ ಕಳ್ಳತನವಾಗಿದೆ. ಸುಮಾರು 8 ಮೊಬೈಲ್​ಗಳು ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. ಹರಿಗೆ, MRS ಸರ್ಕಲ್, ಗಣೇಶ್  ಭವನ್ ಬಳಿಯಲ್ಲಿ ಈ ಘಟನೆಗಳು ನಡೆದಿದೆ ಎಂದು ಮಲೆನಾಡು ಟುಡೆ ಓದುಗರೊಬ್ಬರು ಟುಡೆಗೆ ಮಾಹಿತಿ ನೀಡಿದ್ಧಾರೆ. 

ಬೈಕ್ ರ್ಯ್ಯಾಲಿ ಮೂಲಕ ಮಧುಬಂಗಾರಪ್ಪರಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತವನ್ನು ಕೋರುತ್ತಿದ್ದರು. ಈ ವೇಳೆ ಪ್ರಮುಖ ಸರ್ಕಲ್​ಗಳಲ್ಲಿ ಸಚಿವರಿಗೆ ಅಭಿನಂದನೆ ಸಲ್ಲಿಸುವಾಗ ಮುಗಿಬಿದ್ದ ಕಾರ್ಯಕರ್ತರ ನಡುವೆ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.  

odisha balasore train accident/ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕಾಫಿನಾಡಿನ 110 ಮಂದಿ ಸುರಕ್ಷಿತ!

ಚಿಕ್ಕಮಗಳೂರು: ಭೀಕರ ರೈಲು ದುರಂತದಲ್ಲಿ ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರು ಸುರಕ್ಷಿತವಾಗಿದ್ದ ಎಂಬ ವರದಿ ಲಭ್ಯವಾಗಿದೆ.  ಒಡಿಶಾದ ಬಾಲಸೋರ್ ನಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ ಎಕ್ಸ್ಪ್ರೆಸ್ ಮತ್ತು ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿತ್ತು. ಈ ಘಟನೆಯಲ್ಲಿ ಇದುವರೆಗೂ 233 ಮಂದಿ ಮೃತಪಟ್ಟಿರುವುದಾಗಿ ಅಧಿಕೃತವಾಗಿ ಹೇಳಲಾಗುತ್ತಿದೆ. ಈ ಸಂಖ್ಯೆ ಇನ್ನು ಹೆಚ್ಚುವ ಸಾಧ್ಯತೆ ಇದ್ದು ಘಟನೆಯಲ್ಲಿ 900ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ.

ಇನ್ನೂ ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಿಂದ 110 ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳಸ, ಸಂಸೆ. ಹೊರನಾಡು ಸುತ್ತಮುತ್ತಲಿನ ಜೈನ ಸಮುದಾಯದ 110 ಮಂದಿ ಎರಡು ದಿನಗಳ ಹಿಂದೆ ಜಾರ್ಖಂಡ್‌ನ ಸಮ್ಮೇದ್ ಶಿಖರ್ಜಿ ತೀರ್ಥಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ್ದರು. 

ಇವರೆಲ್ಲಾ ಬೆಂಗಳೂರಿನಿಂದ ರೈಲು ಮೂಲಕ ತೆರಳಿದ್ದರು.  ಶುಕ್ರವಾರ ರಾತ್ರಿ 8.30 ಕ್ಕೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶಾಲಿಮಾರ್ ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್ ರೈಲು  ಹಳು ತಪ್ಪಿ ಇನ್ನೊಂದು ಟ್ರೈನ್​ಗೆ ಡಿಕ್ಕಿಯಾಗಿದೆ.

shivamogga sims/ ಶಿವಮೊಗ್ಗ SIMS ನಲ್ಲಿ ಉದ್ಯೋಗಾವಕಾಶ! ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ: ಕಾಂಗ್ರೆಸ್‌ ಜನರಿಗೆ ನೀಡಿರುವ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ಆದೇಶ ಹೊರಡಿಸಿದ್ದಕ್ಕೆ ಜಿಲ್ಲಾ ಎನ್ ಎಸ್‌ಯುಐ ಹಾಗೂ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಅಶೋಕ ವೃತ್ತ ದಲ್ಲಿ ಶುಕ್ರವಾರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.  

ಪಟಾಕಿ ಸಿಡಿಸಿ ಕಾಂಗ್ರೆಸ್‌ ಸಂಭ್ರಮಿಸಿದ  ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್, ಕಾಂಗ್ರೆಸ್ ನುಡಿದಂತೆ ನಡೆ ಯುವ ಸರ್ಕಾರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದರು. ಮಾಜಿ ಎಂಎಲ್ಸಿ ಆರ್.ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ, ಪ್ರಮುಖರಾದ ಎಸ್.ಪಿ. ದಿನೇಶ್, ಕಲೀಮ್ ಪಾಶಾ ಇತರರಿದ್ದರು.