ಕೆಎಸ್‌ ಈಶ್ವರಪ್ಪ ಕೊಟ್ಟ ಪೆನ್‌ ಡ್ರೈವ್‌ ಸ್ಟೋರಿ ಏನದು? | ಮೆ 15 ರ ಡೆಡ್‌ಲೈನ್‌ ಏಕೆ

What is the pen drive story given by KS Eshwarappa? | Why the deadline of Me 15?KS Eshwarappa Pen Drive, Shimoga Political News, Malnadu Today News, BY Raghavendra, Ayanur Manjunath

ಕೆಎಸ್‌ ಈಶ್ವರಪ್ಪ ಕೊಟ್ಟ ಪೆನ್‌ ಡ್ರೈವ್‌ ಸ್ಟೋರಿ ಏನದು?  | ಮೆ 15 ರ ಡೆಡ್‌ಲೈನ್‌ ಏಕೆ
KS Eshwarappa Pen Drive, Shimoga Political News, Malnadu Today News, BY Raghavendra, Ayanur Manjunath

SHIVAMOGGA | MALENADUTODAY NEWS | May 10, 2024  



ಶಿವಮೊಗ್ಗ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಹೊರಬಂದ ಕೆಎಸ್‌  ಈಶ್ವರಪ್ಪರದ್ದು ಎನ್ನಲಾದ ಫೇಕ್‌ ವಿಡಿಯೋ ಸಂಬಂಧ ಜಯನಗರ ಪೊಲೀಸ್‌ ಸ್ಟೇಷನ್‌ನಲ್ಲಿ : IPC 1860 (U/s-171G)  ಅಡಿಯಲ್ಲಿ ಕೇಸ್‌ ದಾಖಲಾಗಿದೆ. ಪ್ರಕರಣ ಸಂಬಂಧ ಕೆಎಸ್‌ ಈಶ್ವರಪ್ಪ ಸಲ್ಲಿಸಿರುವ ದೂರು ಹಾಗೂ ಪೆನ್‌ಡ್ರೈವ್‌ನ್ನ ಆಧರಿಸಿ ಕೋರ್ಟ್‌ನ ಅನುಮತಿ ಪಡೆದು ಎಫ್‌ಐಆರ್‌ ದಾಖಲಾಗಿದೆ. 

 

ಐಪಿಸಿ ಸೆಕ್ಷನ್‌ 171ಜಿ ಪ್ರಕಾರ ಯಾರೇ ವ್ಯಕ್ತಿಯು ಚುನಾವಣೆಯ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮವಾಗಬೇಕೆಂಬ ಉದ್ದೇಶದಿಂದ ಯಾರೇ ಅಭ್ಯರ್ಥಿಯ ವೈಯಕ್ತಿಕ ಚಾರಿತ್ರ್ಯ  ಅಥವಾ ನಡತೆ ಕುರಿತು ಸುಳ್ಳಾಗಿರುವ ಮತ್ತು ಸುಳ್ಳೆಂದು ತಾನು ತಿಳಿದಿರುವ ಅಥವಾ ನಂಬಿರುವ ಅಥವಾ ಸತ್ಯವೆಂದು ನಂಬದಿರುವ ಯಾವುದೇ ಹೇಳಿಕೆಯನ್ನು ಸತ್ಯಸಂಗತಿಯೆಂದು ತಾತ್ಪರ್ಯವಾಗುವ ಹಾಗೆ ಮಾಡಿದರೆ ಅಥವಾ ಪ್ರಕಟಿಸಿದರೆ ಅವನು ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು. 

 

ಸದ್ಯ ಇದೇ ಸೆಕ್ಷನ್‌ ಅಡಿಯಲ್ಲಿ ಕೇಸ್‌ ದಾಖಲಾಗಿದೆ. ಇನ್ನೂ  ಈ ವಿಷಯದಲ್ಲಿ ಸುದ್ದಿಗೋಷ್ಟಿ ನಡೆಸಿದ ಕೆಎಸ್‌ ಈಶ್ವರಪ್ಪ ಪೆನ್‌ಡ್ರೈವ್‌ಗಳಲ್ಲಿ ತಮ್ಮ ವಿರುದ್ಧ ಮಾಡಿರುವ ಅಪಪ್ರಚಾರದ ವಿಷಯಗಳನ್ನ ದಾಖಲಿಸಿ ಮಾಧ್ಯಮಗಳಿಗೆ ನೀಡಿದ್ದಾರೆ. ಅಲ್ಲದೆ ಮೇ 15 ರೊಳಗೆ ಈ ಸಂಬಂಧ ಆರೋಪಿಯನ್ನ ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.  

 

ಆಯನೂರು ಮಂಜುನಾಥ್‌  ಕೂಡ ನನಗೆ ಮತ ಹಾಕುವುದಾಗಿ ಹೇಳಿದ್ದರು. ಆದರೆ ಬಿಜೆಪಿಯವರು ಹರಿಯಬಿಟ್ಟ ಫೇಕ್ ವಿಡಿಯೊ ನೋಡಿ ಅವರು ಹಾಕಿಲ್ಲ. ಹೀಗೆಯೇ ಕಾಂಗ್ರೆಸ್‌ನ ಹಲವರ ಮತಗಳು ನನಗೆ ತಪ್ಪಿವೆ ಎಂದ ಅವರು, ಡೆಡ್‌ಲೈನ್‌ನೊಳಗೆ ಕ್ರಮ ಕೈಗೊಳ್ಳದೇ ಇದ್ದರೇ ಪ್ರತಿಭಟನೆ ನಡೆಸುತ್ತೇನೆ ಎಂದಿದ್ದಾರೆ.  

 

ಶಿಕಾರಿಪುರದಲ್ಲಿ ನನಗೆ ಮತ ಬೀಳದಿರಲೆಂದು ವಾಮಾಚಾರ ಮಾಡಿದರು. ನನ್ನ ಪ್ರಚಾರಕ್ಕೆ ಅಡ್ಡಿಪಡಿಸಿದರು. ಕೊನೆಗೆ ನಾನು ಕಣದಿಂದ ಹಿಂದೆ ಸರಿದಿದ್ದೇನೆ ಎಂಬ ವಿಡಿಯೊ ವನ್ನು ಹರಿಬಿಟ್ಟರು. ಕಳೆದ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿದ್ದ ವಿಡಿಯೊ ಈ ಬಾರಿಯದ್ದು ಎಂಬಂತೆ ಬಿಂಬಿಸಿದರು ಎಂದ ಕೆಎಸ್‌ ಈಶ್ವರಪ್ಪ ನನಗೆ ಈಗ ಅನ್ಯಾಯವಾಗಿದೆ. ನಾನು ಈಗಾಗಲೇ ಎಸ್ಪಿಗೂ ದೂರು ಕೊಟ್ಟಿದ್ದೇನೆ. ಮೇ 15ರವರೆಗೆ ಸಮಯ ನೀಡುತ್ತೇನೆ. ಜಿಲ್ಲಾ ರಕ್ಷಣಾಧಿಕಾರಿಗಳು ಕೂಡಲೇ ಬಿ.ವೈ.ರಾಘವೇಂದ್ರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಮತ್ತು ಬಂಧಿಸಬೇಕು ಎಂದು ಆಗ್ರಹಿಸಿದರು.ಆದರೆ ಸದ್ಯ ದಾಖಲಾಗಿರುವ ಎಫ್‌ಐಆರ್‌ ನಲ್ಲಿ ಆರೋಪಿಯ ಕಾಲಂನಲ್ಲಿ ಅನೌನ್‌ ಎಂದು ಬರೆಯಲಾಗಿದ್ದು, ಯಾವುದೇ ವ್ಯಕ್ತಿ ಹೆಸರನ್ನ ಹಾಕಲಾಗಿಲ್ಲ. 

 

ಇನ್ನೂ ಸುದ್ದಿಗೋಷ್ಟಿಯಲ್ಲಿ ಕೆಎಸ್‌ ಈಶ್ವರಪ್ಪನವರು ಮಾಧ್ಯಮಗಳಿಗೆ ನೀಡಿದ ಪೆನ್‌ ಡ್ರೈವ್‌ಗಳು ಸದ್ಯದ ರಾಜಕಾರಣದ ಸನ್ನಿವೇಶದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಮೊದಲು ಪೆನ್‌ ಡ್ರೈವ್‌ನಲ್ಲಿ ಏನಿದೆ ಎಂಬ ಕುತೂಹದಲ್ಲಿದ್ದ ಮಾಧ್ಯಮಗಳಿಗೆ ಆ ಬಳಿಕ ಅದರಲ್ಲಿ ವಿಡಿಯೋ ಸಾಕ್ಷ್ಯಗಳು ಇರುವುದು ಗೊತ್ತಾಗಿದೆ.