Ashok Leyland ನಲ್ಲಿ ಅಂಜಾನಪುರ ಡ್ಯಾಂ ಹತ್ರ ಸಾಗಿಸಲಾಗ್ತಿತ್ತು ಬೀಟೆ, ಸಾಗುವಾನಿ | ಇಬ್ಬರು ಅರೆಸ್ಟ್‌

Beete, Saguani Nata was being transported in an Ashok Leyland truck near Anjanapur Dam Two arrested. Ayanur Forest Zone, Shikaripura, Kunsi, Bete, Saguani, Forest Department News,

Ashok Leyland ನಲ್ಲಿ ಅಂಜಾನಪುರ ಡ್ಯಾಂ ಹತ್ರ ಸಾಗಿಸಲಾಗ್ತಿತ್ತು ಬೀಟೆ, ಸಾಗುವಾನಿ | ಇಬ್ಬರು ಅರೆಸ್ಟ್‌
Ashok Leyland truck , Anjanapur Dam , Ayanur Forest Zone, Shikaripura, Kunsi, Bete, Saguani, Forest Department News,

SHIVAMOGGA | MALENADUTODAY NEWS | Apr 28, 2024    ‌

ಅಕ್ರಮವಾಗಿ ನಾಟ ಸಾಗಿಸ್ತಿದ್ದ ತಂಡವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಆಯನೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಕಾರ್ಯಾಚಣೆ ನಡೆದಿದೆ. ದಾಳಿ ವೇಳೇ ಅಕ್ರಮವಾಗಿ ಸಾಗಿಸುತ್ತಿದ್ದ ಸಾಗುವಾನಿ ಮತ್ತು ಬೀಟೆ ಮರದ ತುಂಡನ್ನು ಜಪ್ತಿ ಮಾಡಲಾಗಿದೆ.. 

ಏನಿದು ಪ್ರಕರಣ ? 

ಆಯನೂರು ವಲಯ ಅರಣ್ಯಾಧಿಕಾರಿಗಳ ತಂಡಕ್ಕೆ ಅಕ್ರಮ ನಾಟಾ ಸಾಗಾಣಿಕೆಯ ಮಾಹಿತಿ ಲಭ್ಯವಾದ ಬೆನ್ನಲ್ಲೆ ದಾಳಿ ನಡೆಸಿದ್ದಾರೆ. ಶಿಕಾರಿಪುರಕ್ಕೆ ಅಶೋಕಾ ಲೇಲ್ಯಾಂಡ್ ವಾಹನದಲ್ಲಿ ಸಾಗುವಾನಿ ಮತ್ತು ಬೀಟೆ ಮರದ ತುಂಡನ್ನು ಸಾಗಿಸುತ್ತಿದ್ದ ತಂಡವನ್ನು ಅಧಿಕಾರಿಗಳು ಅಂಜನಾಪುರ ಜಲಾಶಯದ ಬಳಿ ಅಡ್ಡಗಟ್ಟಿ ಮಾಲು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಚಾಲಕ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. 

ಆಯನೂರು ವಲಯ ಅರಣ್ಯಾಧಿಕಾರಿ ಗೀತಾ ವಿಠಲ್ ನಾಯಕ್, ಕುಂಸಿ ಡಿ.ಆರ್.ಎಫ್ ವಸಂತ್ ಕುಮಾರ್, ಸಂತೋಷ್ ಮತ್ತು ಫಾರೆಸ್ಟ್ ಗಾರ್ಡ್ ಅಸ್ಲಾಂ ಈ ಕಾರ್ಯಾಚರಣೆಯಲ್ಲಿದ್ದರು.