ಎರಡು ಬೈಕ್‌ಗಳ ನಡುವೆ ಭೀಕರ ಡಿಕ್ಕಿ! ಓರ್ವ ಸ್ಥಳದಲ್ಲಿಯೇ ಸಾವು

A terrible collision between two bikes! One died on the spot

ಎರಡು ಬೈಕ್‌ಗಳ ನಡುವೆ ಭೀಕರ ಡಿಕ್ಕಿ! ಓರ್ವ ಸ್ಥಳದಲ್ಲಿಯೇ ಸಾವು
collision between two bikes

shivamogga Mar 23, 2024   ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕುನಲ್ಲಿ ಎರಡು ಬೈಕ್‌ಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಪರಿಣಾಮ ಘಟನೆಯಲ್ಲಿ ಓರ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಈ ದೃಶ್ಯ ಸಿಸಿ ಕ್ಯಾಮಾರಾದಲ್ಲಿ ಸಹ ಸೆರೆಯಾಗಿದೆ. 

ಸೊರಬ ತಾಲ್ಲೂಕಿನ ಉಳವಿ ಸಮೀಪದ ಪೆಟ್ರೋಲ್‌ ಬಂಕ್‌ ಎದುರು ಈ ಘಟನೆ ಸಂಭವಿಸಿದೆ. ಸೊರಬ-ಸಾಗರ ರಸ್ತೆ ಇದಾಗಿದ್ದು ಎದುರುಬದುರು ಬರುತ್ತಿದ್ದ ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿವೆ. 

ಘಟನೆಯಲ್ಲಿ ಶಿವಪ್ಪ (45) ಮೃತಪಟ್ಟಿದ್ದಾರೆ. ಇವರು  ಶಿವಪ್ಪ ಸೊರಬ ತಾಲೂಕಿನ ಕಣ್ಣೂರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಇನ್ನೂ ಘಟನೆಯಲ್ಲಿ ಇನ್ನೊಬ್ಬ ಬೈಕ್‌ ಸವಾರನಿಗೂ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಸಿಸಿ ಕ್ಯಾಮಾರದಲ್ಲಿ ಈ ಘಟನೆ ಸೆರೆಯಾಗಿದ್ದು, ಬೈಕ್‌ವೊಂದು ವೇಗವಾಗಿ ಬಂದು ಇನ್ನೊಂದು ಬೈಕ್‌ಗೆ ಡಿಕ್ಕಿಯಾಗಿರುವುದು ಕಾಣುತ್ತಿದೆ.