ಶಿವಮೊಗ್ಗದಲ್ಲಿ ಮತ್ತೊಂದು ಬಂಡಾಯ | ಈ ಸಲ ಕಾಂಗ್ರೆಸ್‌ಗೆ ಬಿಸಿತುಪ್ಪ | ಏನಿದು ವಿಚಾರ?

Another rebellion in Shimoga. Shimoga Congress Bandaya, Madhu Bangarappa, Ayanur Manjunath, SP Dinesh, Shimoga Congress Bhawan, Shimoga District Congress,

ಶಿವಮೊಗ್ಗದಲ್ಲಿ ಮತ್ತೊಂದು ಬಂಡಾಯ | ಈ ಸಲ ಕಾಂಗ್ರೆಸ್‌ಗೆ ಬಿಸಿತುಪ್ಪ | ಏನಿದು ವಿಚಾರ?
Shimoga Congress Bandaya, Madhu Bangarappa, Ayanur Manjunath, SP Dinesh, Shimoga Congress Bhawan, Shimoga District Congress,

SHIVAMOGGA | MALENADUTODAY NEWS | May 11, 2024  

ಶಿವಮೊಗ್ಗ ರಾಜಕಾರಣದಲ್ಲಿ ಮತ್ತೊಂದು ಬಂಡಾಯದ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಇದಕ್ಕೆ ಸಾಕ್ಷಿಯಾಗಲಿದೆ ಎನ್ನಲಾಗುತ್ತಿದೆ. ಈ ಕ್ಷೇತ್ರಗಳ ಚುನಾವಣೆಗೆ  ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಆಯನೂರು ಮಂಜುನಾಥ್‌ರವರಿಗೆ ಟಿಕೆಟ್‌ ನೀಡಿದೆ. ಲೋಕಸಭಾ ಚುನಾವಣೆಗೂ ಮೊದಲೇ ಟಿಕೆಟ್‌ ಘೋಷಿಸಿದ ಹಿನ್ನೆಲೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಆದಾಗ್ಯು ಕಾಂಗ್ರೆಸ್‌ ಪಕ್ಷ ಅವರು ಹಾಲಿ ಸದಸ್ಯರಾದವರು ಎಂಬ ಕಾರಣಕ್ಕೆ, ಆಯನೂರು ಮಂಜುನಾಥ್‌ರಿಗೆ ಟಿಕೆಟ್‌ ನೀಡಲಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ. 

ಇದರ ನಡುವೆ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಈ ನೈರುತ್ಯ ಪದವೀಧರ ಕ್ಷೇತ್ರ ಟಿಕೆಟ್‌ ಆಕಾಂಕ್ಷಿಯಾಗಿ ಕೆಲಸ ಮಾಡಿದವರು ಎಸ್‌ಪಿ ದಿನೇಶ್‌. ಸದಸ್ಯತ್ವ ನೋಂದಣಿಯಿಂದ ಹಿಡಿದು ಕ್ಷೇತ್ರದಲ್ಲಿ ತಮಗೆ ಟಿಕೆಟ್‌ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಕೆಲಸ ಮಾಡಿದ್ದ ಅವರಿಗೆ ಕಾಂಗ್ರೆಸ್‌ನಲ್ಲಿ ನಿರಾಸೆಯಾಗಿದೆ. ಈ ಹಿಂದೆ ಆಯನೂರು ಮಂಜುನಾಥ್‌ರವರ ವಿರುದ್ಧವೇ ಕಾಂಗ್ರೆಸ್‌ ಮೂಲಕ ಸ್ಪರ್ಧಿಸಿದ್ದ ಅವರು ಸೋಲನ್ನ ಅನುಭವಿಸಿದ್ದರು. 

ಹಿಂದಿನ ಸೋಲಿನ ಪ್ರತೀಕಾರ ತೀರಿಸಿಕೊಳ್ಳಲು ಸಿದ್ದತೆ ನಡೆಸ್ತಿದ್ದ ಅವರಿಗೆ ಆಯನೂರು ಮಂಜುನಾಥ್‌ ರವರ ಪಕ್ಷಾಂತರ ಅಡ್ಡಿಯಾಗಿತ್ತು. ನೈರುತ್ಯ ಪದವೀಧರ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಜೆಡಿಎಸ್‌ಗೆ ಹೋಗಿದ್ದ ಆಯನೂರು ಮಂಜುನಾಥ್‌ ಎಂಎಲ್‌ಎ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದರು. ಆನಂತರ ಬದಲಾವಣೆ ರಾಜಕಾರಣದಲ್ಲಿ  ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದ ಅವರು ಇದು ನನ್ನ ಕೊನೆಯ ನಿಲ್ದಾಣ ಎಂದಿದ್ದರು. 

ಇನ್ನೂ ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಸಚಿವ ಮಧು ಬಂಗಾರಪ್ಪರವರ ಮೇಲುಗೈ ಸಾಧಿಸಿರುವುದು ಗೊತ್ತಿರುವ ವಿಚಾರ. ಅವರ ಮೂಲಕವೇ ಆಯನೂರು ಮಂಜುನಾಥ್‌ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ಎಸ್‌ಪಿ ದಿನೇಶ್‌ರಿಗೆ ನಿರಾಸೆಯಾಗಿದೆ. ಎರಡು ಸಲ ಇದೇ ಕ್ಷೇತ್ರದಲ್ಲಿ ಸೋತಿರುವ ಎಸ್‌ಪಿ ದಿನೇಶ್‌ ಈ ಸಲ ಗೆದ್ದೇ ತೀರಬೇಕು ಎಂದು ಹೊರಟಿದ್ದಾರೆ. ಪಕ್ಷದ ಟಿಕೆಟ್‌ ಸಿಗದ ಹೊರತಾಗಿಯು ಪ್ರಚಾರ ಆರಂಭಿಸಿದ್ದು, ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ. ಅವರ ಬಂಡಾಯ ಕಾಂಗ್ರೆಸ್‌ಗೆ ಬಿಸಿತುಪ್ಪವಾಗುವ ಸಾಧ್ಯತೆ ಇದೆ. 

Shimoga Congress Bandaya, Madhu Bangarappa, Ayanur Manjunath, SP Dinesh, Shimoga Congress Bhawan, Shimoga District Congress,