ಮರಕ್ಕೆ ಡಿಕ್ಕಿಯಾಗಿ ಮೂರು ಪಲ್ಟಿಯಾದ ಜೀಪ್ | ಸ್ಥಳದಲ್ಲೇ ಓರ್ವ ಸಾವು | ವಾಹನ ನುಜ್ಜುಗುಜ್ಜು
The jeep hit a tree and overturned three times One died on the spot Crush the vehicle. Shimoga, Ripponpet, Ninth Milestone, Arasalu, Shettikere Sanctuary, Suduru, Arasalu Gate

SHIVAMOGGA | MALENADUTODAY NEWS | Apr 26, 2024
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಲ್ಲಿ ನಿಯಂತ್ರಣ ತಪ್ಪಿದ ಜೀಪ್‌ವೊಂದು ಮರಕ್ಕೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾದ ಘಟನೆ ಸಂಭವಿಸಿದೆ. ಮತ್ತು ಈ ಘಟನೆಯಲ್ಲಿ ಜೀಪ್‌ನ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ನಿನ್ನೆ ಈ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಸಿಗುವ ಅರಸಾಳು 9 ನೇ ಮೈಲಿಕಲ್ಲಿನ ಬಳಿ ಘಟನೆ ನಡೆದಿದೆ. 9ನೇ ಮೈಲಿಕಲ್ಲು ಹಾಗೂ ಸೂಡೂರು ಗೇಟ್ ನ ನಡುವಿನ ಶೆಟ್ಟಿಕೆರೆ ಅಭಯಾರಣ್ಯದಲ್ಲಿ ವೇಗವಾಗಿ ಬರುತ್ತಿದ್ದ ಜೀಪ್ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಸೀದಾ ಬಂದು ಮರಕ್ಕೆ ಡಿಕ್ಕಿಯಾದ ಜೀಪ್ ಮೂರು ಪಲ್ಟಿಯಾಗಿದೆ. ಈ ಘಟನೆಯಲ್ಲಿ ತಳಲೆ ನಿವಾಸಿ ಪ್ರಭೀನ್ (45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ನುಜ್ಜುಗುಜ್ಜಾದ ಜೀಪ್‌ನಿಂದ ಮೃತದೇಹವ ಹೊರತೆಗೆಯಲು ಸ್ಥಳೀಯರು ಹರಸಾಹಸವೇ ಪಡೆಬೇಕಾಗಿ ಬಂದಿತ್ತು. ಸ್ಥಳಕ್ಕೆ ಬಂದ ರಿಪ್ಪನ್‌ಪೇಟೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.