ತಿರುವಿನಲ್ಲಿ ಬಸ್​ನಿಂದ ಪುಟ್ಟ ಮಗುವಿನೊಂದಿಗೆ ಕೆಳಕ್ಕೆ ಬಿದ್ದ ವ್ಯಕ್ತಿ!

Malenadu Today

KARNATAKA NEWS/ ONLINE / Malenadu today/ Oct 11, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಕೂಡೂರು ಸಮೀಪದ ಶಾಂತಪುರದಲ್ಲಿ ನಿನ್ನೆ ಬಸ್​ನಿಂದ ಮಗುವಿನ ಜೊತೆ ವ್ಯಕ್ತಿಯೊಬ್ಬ ಕೆಳಕ್ಕೆ ಬಿದ್ದ ಘಟನೆಯೊಂದು ಸಂಭವಿಸಿದೆ. 

ಗಂಭೀರ ಗಾಯ | ಈ ಭಾಗರ ರೂಟ್​ ಬಸ್​ ಗುರುಶಕ್ತಿ ಬಸ್ ಎಂದಿನಂತೆ ಹೊಸನಗರದಿಂದ ಶಿವಮೊಗ್ಗದ ಕಡೆಗೆ  ಹೋಗುತ್ತಿತ್ತು. ಮಾರ್ಗ ಮಧ್ಯೆ ಕೀಳಂಬಿ ಸ್ಟಾಪ್​ನಿಂದ ಮಗುವೊಂದರ ಜೊತೆ ವ್ಯಕ್ತಿಯೊಬ್ಬರು ಬಸ್ ಹತ್ತಿದ್ದಾರೆ. ಆದರೆ ಬಸ್​ ವಿಪರೀತ ರಶ್ ಇದ್ದಿದ್ದರಿಂದ ಸೀಟು ಸಿಗದೆ ನಿಂತಿದ್ದರು. ಈ ನಡುವೆ ಬಸ್ 200-300 ಮೀಟರ್ ಮುಂದಕ್ಕೆ ದಾಟಿ ಟರ್ನ್​ ತೆಗೆದುಕೊಂಡಿದೆ. ಈ ವೇಳೆ ಬ್ಯಾಲೆನ್ಸ್​ ಸಿಗದೆ, ಮಗುವಿನ ಸಮೇತ ವ್ಯಕ್ತಿಯು ಕೆಳಕ್ಕೆ ಬಿದ್ದಿದ್ದಾರೆ. 

ತಕ್ಷಣ ಬಸ್ ನಿಲ್ಲಿಸಲು ಸೂಚಿಸಿದ ಪ್ರಯಾಣಿಕರು, ಕೆಳಕ್ಕೆ ಇಳಿದು ವ್ಯಕ್ತಿಯ ಆರೈಕೆ ಮಾಡಿದ್ದಾರೆ. ಅಲ್ಲದೆ ಮಗುವನ್ನ ರಕ್ಷಣೆ ಮಾಡಿದ್ದಾರೆ. ಬಸ್​ನಿಂದ ಬಿದ್ದರು, ಮಗುವಿಗೆ ಏನಾಗದಂತೆ ವ್ಯಕ್ತಿಯು ರಕ್ಷಿಸಿದ್ದರು. ಬಳಿಕ ಆ್ಯಂಬುಲೆನ್ಸ್ ಮೂಲಕ ಅವರನ್ನು ಕೋಡೂರು ಪ್ರಾಥಮಿಕ ಕೇಂದ್ರ ಹಾಗೂ ಅಲ್ಲಿಂದ ಶಿವಮೊಗ್ಗಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.   


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

Share This Article