FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

A case has been registered against Sumuto for posting provocative posts on social mediaಸೋಶಿಯಲ್ ಮೀಡಿಯಾದಲ್ಲಿ ಪ್ರಚೋಧನಕಾರಿ ಪೋಸ್ಟ್ ಹಾಕಿದ್ದರ ಕುರಿತಾಗಿ ಸುಮುಟೋ ಕೇಸ್ ದಾಖಲಾಗಿದೆ

FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​!   social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

KARNATAKA NEWS/ ONLINE / Malenadu today/ Oct 9, 2023 SHIVAMOGGA NEWS

ಸೋಶಿಯಲ್​ ಮೀಡಿಯಾ ಕ್ರೇಜ್​ ಅಂತಾ ಏನೇನೋ ಅಪ್ಲೋಡ್​ ಮಾಡಿದ್ರೆ ಶಿವಮೊಗ್ಗ ಪೊಲೀಸರು ಕೇಸ್ ಹಾಕುತ್ತಾರೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ  ಸಲ್ಲದ್ದನ್ನ ಫಾರವರ್ಡ್ ಮಾಡಿದ್ದರ ಸಂಬಂಧ ಎರಡು ಕೇಸ್​ಗಳು ದಾಖಲಾಗಿವೆ. ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ  ಚಿಕ್ಕಮಗಳೂರಿನ ವ್ಯಕ್ತಿಯೊಬ್ಬನ ವಿಡಿಯೋ ಹಾಕಿ, ಶಿವಮೊಗ್ಗದಲ್ಲಿ ನಡೆದಿದ್ದು ಎಂಬುದರ ಸಂಬಂಧ ಮೆಸೇಜ್ ಹರಿಬಿಟ್ಟಿದ್ದಕ್ಕೆ ಕೇಸ್ ದಾಖಲಾಗಿದೆ. 

ಶಿವಮೊಗ್ಗದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆಂಬ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಘಟನೆಯು ಶಿವಮೊಗ್ಗಕ್ಕೆ ಸಂಬಂಧಿಸಿದ್ದಾಗಿರದೇ, ದಿಃ 3-9-2023ರಂದು ಚಿಕ್ಕಮಗಳೂರಿನ ಗೌರಿಕಾಲುವೆ ಬಡಾವಣೆಯಲ್ಲಿ ಗಲ್ಲಿ ಕ್ರಿಕೇಟ್ ಆಡುವಾಗ ನಡೆದ ಘಟನೆಯಾಗಿರುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. 

ನೈಜ ಸುದ್ದಿಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದ ಪೊಲೀಸ್ ಇಲಾಖೆ  ಈ ಸುದ್ಧಿಯನ್ನು ತಿರುಚಿ  ವೈರಲ್ ಮಾಡಿದವರ ವಿರುದ್ಧ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 354/2023 ರೀತ್ಯಾ ಪ್ರಕರಣ ದಾಖಲಿಸಿತ್ತು. 

ಇದಕ್ಕೂ ಮೊದಲು ಎನ್​ಕೌಂಟರ್ ಸಮಾಚಾರ ಹರಿಬಿಟ್ಟು ವ್ಯಕ್ತಿಯ ವಿರುದ್ಧವೂ ಶಿವಮೊಗ್ಗದ ಪೊಲೀಸ್ ಇಲಾಖೆ ಕೇಸ್ ದಾಖಲಿಸಿತ್ತು. ಇವೆರಡು ಕೇಸ್​ಗಳ ಬೆನ್ನಲ್ಲೆ ಶಿವಮೊಗ್ಗ ಸಿಇಎನ್ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.  IPC 1860 (U/s-153,505(1)(B),505(1)(C))  ಅಡಿಯಲ್ಲಿ ಸಿಇಎನ್​ ಠಾಣೆಯಲ್ಲಿ ಸುಮುಟೋ ಕೇಸ್ ದಾಖಲಾಗಿದೆ 

 

ಸಾಮಾಜಿಕ ಜಾಲತಾಣದಲ್ಲಿ ಪ್ರಚೋಧನಕಾರಿ ಪೋಸ್ಟ್​ ಹಾಕಿದ ಹಿನ್ನೆಲೆಯಲ್ಲಿ  ಸುಮುಟೋ ಕೇಸ್ ದಾಖಲಾಗಿದೆ. ದಾಖಲಾದ ಎಫ್ಐಆರ್​ ನಂತೆ ನೋಡುವುದಾದರೆ, ಸೈಬರ್ ಕ್ರೈಂ ಪೊಲೀಸರು Social media Monitoring ಮಾಡುತ್ತಿದ್ದಾಗ, ಪ್ರಕರಣ ಬೆಳಕಿಗೆ ಬಂದಿದೆ. ವಾಟ್ಸಪ್ ಗ್ರೂಪ್, ಇನ್ ಸ್ಟಾಗ್ರಾಮ್, ಫೇಸ್ ಬುಕ್ ಅಕೌಂಟ್​ಗಳನ್ನು  ಪರಿಶೀಲನೆ ಮಾಡುತ್ತಿರುವಾಗ ವ್ಯಕ್ತಿಯೊಬ್ಬನ ಫೇಸ್ ಬುಕ್ ಅಕೌಂಟ್​​ನಲ್ಲಿ  ವಿಡಿಯೋವೊಂದು ಪೋಸ್ಟ್ ಆಗಿರುವುದನ್ನ ಗಮನಿಸಿದ್ದಾರೆ. 

ವಿಡಿಯೋದಲ್ಲಿ ಹಿಂಸೆಗೆ ಪ್ರಚೋದಿಸುವ ವಿಚಾರ ಇರುವುದು  ಗೊತ್ತಾಗಿದೆ.  ಈ ರೀತಿಯಾಗಿ ಫೇಸ್ ಬುಕ್‌ ಸಾಮಾಜಿಕ ಜಾಲತಾಣದಲ್ಲಿ, ಸಾರ್ವಜನಿಕರಿಗೆ ಬೀತಿ ಹುಟ್ಟಿಸುವ ರೀತಿ ಅಪರಾಧವನ್ನು ಪ್ರಚೋದಿಸುವ ದೊಂಬಿ ಮಾಡಿಸುವುದಕ್ಕಾಗಿ ಉದ್ರೇಕಿಸುವ ಹಾಗೆ ವಿಡಿಯೋವನ್ನು ಪೋಸ್ಟ್ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವ ಸಂಬಂಧ ಇದೀಗ ಕೇಸ್​ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ