ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ

An important news about Shimoga politics has come to light from sourcesಶಿವಮೊಗ್ಗ ರಾಜಕಾರಣದ ಬಗ್ಗೆ ಮಹತ್ವದ ಸುದ್ದಿಯೊಂದು ಮೂಲಗಳಿಂದ ತಿಳಿದುಬಂದಿದೆ

ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ?  ರಾಜ್ಯ ರಾಜಕಾರಣದ  ಕುತೂಹಲದ ಸುದ್ದಿ

KARNATAKA NEWS/ ONLINE / Malenadu today/ Oct 5, 2023 SHIVAMOGGA NEWS

ಶಿವಮೊಗ್ಗದ ಧಾರ್ಮಿಕ ವಿಚಾರದ ನಡುವೆ, ಶಿವಮೊಗ್ಗದ ರಾಜಕಾರಣ ಇದೀಗ ರಾಜ್ಯದೆಲ್ಲೆಡೆ ಗುಲ್ಲೆಬ್ಬಿಸುತ್ತಿದೆ. ಈಗಾಗಲೇ ಈ ವಿಚಾರದ ಬಗ್ಗೆ ಒಂದಷ್ಟು ಸುಳಿವು ಜನರ ಕಿವಿಗೂ ಬಿದ್ದಿದೆ. ನವರಾತ್ರಿಯ ನಂತರ ಈ ಸುದ್ದಿ ಕಾರ್ಯಗತ ಆಗುತ್ತದೆ ಎಂಬುದು ಮಲೆನಾಡು ಟುಡೆಗೆ ಲಭ್ಯವಾಗಿದ್ದು, ಅದರ ಪೂರ್ಣ ವಿವರ ಮುಂದೆ.  ಓದಬಹುದು. 

ರಾಜ್ಯಾಧ್ಯಕ್ಷ ಸ್ಥಾನ ಫಿಕ್ಸ್ / ಬಿಜೆಪಿ ವಿಧಾನಸಭಾ ಸೋಲಿಗೆ ಕಾರಣಗಳನ್ನು ಹುಡುಕಿದ್ದಷ್ಟೆ ಅಲ್ಲದೆ ಬಿಎಸ್​ವೈ ಜೊತೆಗಿನ ಬೇಸರ ತಣಿಸಿ, ಅವರನ್ನೇ ದಂಡನಾಯಕನಾಗಿಸಿಕೊಳ್ಳುವ ಪ್ರಯತ್ನದಲ್ಲಿದೆ. ಸದ್ಯ ಚುನಾವಣಾ ರಾಜಕಾರಣದಿಂದ ದೂರ ಉಳಿದಿರುವ ಬಿಎಸ್​ವೈ ತಂತ್ರಗಾರಿಕೆಯ ರಾಜಕಾರಣಕ್ಕೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಎಸ್​ವೈ ನರೇಂದ್ರ ಮೋದಿಯವರ ಕೈ ಮೇಲಾಗಿಸಲು ಅದಾಗಲೇ ಲೆಕ್ಕಾಚಾರ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಎಸ್​ವೈಗೆ ಸಾಥ್ ನೀಡಲು ಬಿಜೆಪಿ ಹೈಕಮಾಂಡ್ ಬಿವೈ ವಿಜಯೇಂದ್ರರನ್ನೆ ರಾಜ್ಯಾಧ್ಯಕ್ಷರನ್ನಾಗಿಸಲು ಹೊರಟಿದೆ ಎಂದು ಹೇಳಲಾಗುತ್ತಿದೆ. 

ಇದೇ ನವರಾತ್ರಿ ಹಬ್ಬದ ಬಳಿಕ ವಿಜಯೇಂದ್ರರರವರನ್ನ ಅಧಿಕೃತವಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಘೋಷಿಸಲಾಗುತ್ತದೆ ಎಂಬ ಮಾತುಗಳು ಕೇಸರಿ ಪಾಳಯದಲ್ಲಿ ಲಭ್ಯವಾಗಿದ್ದು, ಇದಕ್ಕೆ ಬಿಎಲ್​ ಸಂತೋಷ್ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ.. 

ಮಾಜಿ ಸಿಎಂ ಕುಮಾರಸ್ವಾಮಿ ವಿಪಕ್ಷ ನಾಯಕ?! ಸಿಕ್ಕಿರುವ ಇನ್ನೊಂದು ಮಾಹಿತಿಯನ್ನು ನೋಡುವುದಾದರೆ, ಸದ್ಯ ಬಿಜೆಪಿಯಲ್ಲಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಆದರೆ ಜೆಡಿಎಸ್ ಮೈತ್ರಿ ನಿಕ್ಕಿಯಾಗಿದೆ. ಹಾಗಾಗಿ ಮಾಜಿ ಸಿಎಂ ಕುಮಾರಸ್ವಾಮಿಯವರನ್ನ ವಿಪಕ್ಷ ನಾಯಕನನ್ನಾಗಿಸುವ  ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಸಹಜವಾಗಿಯೇ ವಿರೋದವೂ ಆ ಸಂಬಂಧ ವಿಪಕ್ಷನಾಯಕನ ಆಯ್ಕೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. 

ಸರ್ಕಾರ ಬೀಳಿಸುವ ಗುಮ್ಮಾ? ಇವೆಲ್ಲದರ ಜೊತೆಯಲ್ಲಿ ರಾಜ್ಯ ಸರ್ಕಾರ ಅದಾಗಿಯೇ ಬೀಳುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ವ್ಯತಿರಿಕ್ತವಾಗಿ ಅವರ ಪಕ್ಷದಿಂದ ಹಲವರು ಹೊರಕ್ಕೆ ಬರುತ್ತಿದ್ದಾರೆ. ಅವರನ್ನು ತಪ್ಪಿಸಲು ಹೀಗೆ ಹೇಳುತ್ತಿದ್ದಾರೆ ಅಂತಾ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಎರಡು ಸಹ ರಾಜಕಾರಣದ ಮಾತುಗಳೆ.. ಇದರ ನಡುವೆ ಬಿಜೆಪಿ ವಲಯದಲ್ಲಿ ಮಾತ್ರ ಸಂಕ್ರಾಂತಿ ಬರಲಿ…ಅಧಿಕಾರ ಸಿಗಲಿ ಅನ್ನುವ ವಿಶ್ವಾಸದ ನುಡಿಗಳು ಕೇಳಿಬರುತ್ತಿದೆ. ಇದು ಅಚ್ಚರಿಯನ್ನು ಮೂಡಿಸುತ್ತಿದೆ..


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!