ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!

A video of the conversation between the education minister and a student is now going viralಶಿಕ್ಷಣ ಸಚಿವ ಹಾಗೂ ವಿದ್ಯಾರ್ಥಿನಿಯೊಬ್ಬರ ಮಾತುಕತೆಯ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ

ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!

KARNATAKA NEWS/ ONLINE / Malenadu today/ Oct 1, 2023 SHIVAMOGGA NEWS’ 

ವಿದ್ಯಾರ್ಥಿಗಳಿಗೆ ಮತ್ತೊಂದು ಪೂರಕ ಪರೀಕ್ಷೆ ಅವಕಾಶ ನೀಡಿದ್ದರ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ಶಿಕ್ಷಣ ಸಚಿವರನ್ನ ಪ್ರಶ್ನೆ ಮಾಡಿದ್ದು ಅದಕ್ಕೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿನಿಗೆ ಸರ್ಕಾರದ ಉದ್ದೇಶ ಅರ್ಥ ಮಾಡಿಸಿದ ವಿಡಿಯೋವೊಂದು ಇದೀಗ ವೈರಲ್ ಆಗಿದೆ. 

ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಸಮಾರಂಭವೊಂದರಲ್ಲಿ ಸಚಿವ ಮಧು ಬಂಗಾರಪ್ಪರವರು ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ವಿದ್ಯಾರ್ಥಿನಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಸರ್​,,ಎರೆಡೆರಡು ಪರೀಕ್ಷೆಗಳನ್ನು ನಡೆಸಿದರೇ ಫಸ್ಟ್​ ರ್ಯಾಂಕ್​ ಬರುವವರು ಹಾಗೂ ಡಿಸ್ಟಿಂಕ್ಷನ್​ ಬರುವವರಿಗೆ ಸಮಸ್ಯೆಯಾಗುವುದಿಲ್ಲವೇ ಎಂದು ಕೇಳಿದ್ದಾರೆ. 

ಇದಕ್ಕೆ ಉತ್ತರಿಸಿದ ಮಧು ಬಂಗಾರಪ್ಪ ಅದು ಹಾಗಲ್ಲ, ಪಾಸದವರು ಎರಡು ಮತ್ತು ಮೂರನೇ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅವಕಶ್ಯತೆ ಇಲ್ಲ. ಕೆಲವು ಮಕ್ಕಳು ಫೇಲ್​ ಆಗಿ ಮನೆಗೆ ಹೋದರೆ ಅವರಿಗೆ ತಂದೆ ತಾಯಿ ಬೇಸರ ಮಾಡುವ , ಆ ಮಕ್ಕಳು ಮನೆ ಬಿಟ್ಟುವ ಹೋಗುವಂತ ಘಟನೆಗಳು ನಡೆಯತ್ತಿವೆ. ಅಲ್ಲದೆ ಒಂದು ವರ್ಷ ಸುಮ್ಮನೆ ಕೂತು ಮತ್ತೆ ಶಾಲೆಗೆ ಸೇರಿ ಓದುವುದು ಕೂಡ ಕಷ್ಟವೆ ..ನೀನೇ ಆದರೆ ಒಂದು ವರ್ಷ ಸುಮ್ಮನಿದ್ದು ಓದುವುದು ಸಾಧ್ಯವೇ ಪುಟ್ಟಿ ಎಂದು ಪ್ರಶ್ನಿಸಿದ್ದಾರೆ. 

ಹೀಗೆ ಪಾಸಾಗದ ಮಕ್ಕಳ ಓದುವಿಕೆ ನಿರಂತರವಾಗಿಸಿರುವ ಕಾರಣದಿಂದ ಈ ವ್ಯವಸ್ಥೆ ಜಾರಿಗೆ ತಂದಿದ್ದು, ಲಾಂಗ್​ ಜಂಪ್​ನಲ್ಲಿ ಮೂರು ಸಲ ಹಾರಿದ ನಂತರ ಗೆಲುವಿನ ಅವಕಾಶ ಸಿಗುತ್ತದೆ ,ಅದೇ ರೀತಿಯಲ್ಲಿ ಪರೀಕ್ಷೆಯಲ್ಲಿ ಪಾಸಾಗಿ ವಿದ್ಯಾರ್ಥಿಗಳು ಓದುವುದನ್ನು ಮುಂದುವರಿಸಲಿ ಎಂದು ಈ ರೀತಿಯ ವ್ಯವಸ್ಥೆ ತರಲಾಗಿದೆ. ನಾನ್​ ಸರಿ ಮಾಡಿದ್ದೀನಾ ತಪ್ಪು ಮಾಡಿದ್ದೀನಾ ಅಂತಾ ವಿದ್ಯಾರ್ಥಿನಿಯನ್ನೆ ಸಚಿವರು ಪ್ರಶ್ನೆ ಮಾಡುತ್ತಾರೆ. ಆಗ ವಿದ್ಯಾರ್ಥಿನಿಯು ನೀವು ಸರಿ ಮಾಡಿದ್ದೀರಾ ಎನ್ನುತ್ತಾಳೆ ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು ವೈರಲ್ ಆಗಿದೆ 


ಇನ್ನಷ್ಟು ಸುದ್ದಿಗಳು 

  1. ರಾಷ್ಟ್ರೀಯ ಹೆದ್ದಾರಿ 169 A ನಲ್ಲಿ ಬೆಳಗಿನ ಜಾವ ಧಗಧಗ ಹೊತ್ತಿ ಉರಿದ ಮರ! ಏನಿದು ಘಟನೆ

  2. ವಿಐಎಸ್​ಎಲ್​​ ಆವರಣದಲ್ಲಿ ಕಾಣಿಸಿಕೊಳ್ತು ಮತ್ತೊಂದು ಚಿರತೆ!

  3. ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬೆಂಗಳೂರಿಗೆ ಹೋಗುತ್ತಿದ್ದಾಗ ಶಾಕ್! ಸೂಡೂರು ಸಮೀಪ ಆಕ್ಸಿಡೆಂಟ್!