KSRTC ಡಿಪೋಗೆ ಬಂದ ರಜಿನಿಕಾಂತ್/ ಗ್ಯಾಸ್​ ಮತ್ತೆ ಸಿಗಲಿದೆ ₹200 ಸಬ್ಸಿಡಿ/ ಪತ್ನಿ ಮನೆ ಮುಂದೆ ಪತಿಯ ವಾಮಾಚಾರ/ ಮತ್ತೆ ಸಿಕ್ಕ ಪುನುಗು ಬೆಕ್ಕಿನ ದೇಹ TODAY@NEWS

Four brief news stories of the district, state, country in today's newsಜಿಲ್ಲೆ, ರಾಜ್ಯ, ದೇಶದ ನಾಲ್ಕು ಸಂಕ್ಷಿಪ್ತ ಸುದ್ದಿಗಳು ಇವತ್ತಿನ ಟುಡೆ ನ್ಯೂಸ್​ನಲ್ಲಿ

KSRTC ಡಿಪೋಗೆ ಬಂದ ರಜಿನಿಕಾಂತ್/ ಗ್ಯಾಸ್​ ಮತ್ತೆ ಸಿಗಲಿದೆ ₹200 ಸಬ್ಸಿಡಿ/ ಪತ್ನಿ ಮನೆ ಮುಂದೆ ಪತಿಯ ವಾಮಾಚಾರ/ ಮತ್ತೆ ಸಿಕ್ಕ ಪುನುಗು ಬೆಕ್ಕಿನ ದೇಹ TODAY@NEWS

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS  

ಶಿಕಾರಿಪುರದ ದಾರಿಯಲ್ಲಿ ಸಾವನ್ನಪ್ಪಿದ ಪುನುಗು ಬೆಕ್ಕು

ಕಳೆದ ವಿಧಾನಸಭೆಯ ಚುನಾವಣೆ ವೇಳೆ ಬಿಎಸ್​ವೈ ರವರ ಮನೆಯ ಬಳಿಯಲ್ಲಿ ಪುನುಗು ಬೆಕ್ಕನ್ನು ಬಳಸಿ ವಾಮಾಚಾರ ಮಾಡಿದ್ದರಿಂದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಪುನುಗು ಬೆಕ್ಕು ಉಪಯೋಗಿಸಿ ಮಾಟ, ಮಂತ್ರ, ವಾಮಾಚಾರ ಕ್ಷುದ್ರ ಪ್ರಯೋಗ ಮಾಡಲಾಗಿತ್ತು ಎಂದು ಸಂಸದರು ಆರೋಪಿಸಿದ್ದರು. ಇದೀಗ  ಶಿಕಾರಿಪುರದಲ್ಲಿ ಮತ್ತೆ ಸಾವನ್ನಪ್ಪಿರುವ ಪುನುಗು ಬೆಕ್ಕೊಂದು ಕಾಣ ಸಿಕ್ಕಿದೆ.  ಪಟ್ಟಣದ ಸಾಲೂರು ರಸ್ತೆಯಲ್ಲಿ ಪುನುಗು ಬೆಕ್ಕೊಂದು ಸಾವನ್ನಪ್ಪಿದೆ, ಹೇಗೆ ಸಾವನ್ನಪ್ಪಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಜನರ ನಡುವೆ ವಾಮಾಚಾರದ ಚರ್ಚೆ ಆರಂಭವಾಗಿದೆ.   

 

ಪತ್ನಿ ಮನೆ ಮುಂದೆ ಪತಿಯ ವಾಮಾಚಾರ

ಅತ್ತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪತ್ನಿ ಗಂಡನ ಜತೆ ಜಗಳವಾಡಿ ತವರು ಮನೆಗೆ ಹೋಗಿದ್ದಕ್ಕೆ ವ್ಯಕ್ತಿಯೊಬ್ಬ  ಆಕೆಯ ಮನೆಯ ಮುಂದೆ ವಾಮಾಚಾರ ಮಾಡಿದ ಬಗ್ಗೆ ಆರೋಪ ಕೇಳಿಬಂದಿದೆ.  ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಮನೆಯ ಮುಂದೆ ಬಂದು ಗಲಾಟೆಮಾಡಿ ಪ್ರಾಣಿಯೊಂದರ ರಕ್ತ ಚೆಲ್ಲಿ ಹೋಗಿದ್ಧಾನೆ. ಈ ಸಂಬಂಧ ಪೊಲೀಸ್ ಕಂಪ್ಲೆಂಟ್ ದಾಖಲಾಗಿದೆ.  

 

ಜಯನಗರ ಡಿಪೋಗೆ ಬಂದ ರಜಿನಿಕಾಂತ್ 

ಸೂಪರ್ ಸ್ಟಾರ್ ರಜಿನಿಕಾಂತ್ ಆಗಾಗ ಅಚ್ಚರಿ ಮೂಡಿಸುತ್ತಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಮ್ಮೆ ಎಲ್ಲಾ ಷೆಡ್ಯೂಲ್​ಗಳ ನಡುವೆ ಬೆಂಗಳೂರಿನ ಜಯನಗರದಲ್ಲಿರುವ ಕೆಎಸ್​ಆರ್​ಟಿಸಿ ಡಿಪೋಗೆ ಅವರು  ಭೇಟಿಕೊಟ್ಟಿದ್ಧಾರೆ. ಅವರ ಈ ಭೇಟಿ ಅಲ್ಲಿನ ಸಿಬ್ಬಂದಿಗೆ ಅಚ್ಚರಿ ಮೂಡಿಸಿತ್ತು. ಮೊದಲು ಯಾರೋ ಗಣ್ಯರು ಬಂದಿದ್ದಾರೆ ಎಂದು ಗಮನಿಸಿದ ಸಿಬ್ಬಂದಿ ಆನಂತರ ರಜಿನಿಕಾಂತ್ ಎಂದು ಗೊತ್ತಾದ ತಕ್ಷಣ ಅವರ ಬಳಿಗೆ ತೆರಳಿ ಸೆಲ್ಪಿ ತೆಗೆದುಕೊಂಡಿದ್ಧಾರೆ. 


ಗ್ಯಾಸ್​ ಗೆ ಮತ್ತೆ ಸಿಗಲಿದೆ ಸಬ್ಸಿಡಿ 

 

ಎಲ್ಪಿಜಿ ಅಥವಾ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಸದ್ದಿಲ್ಲದೆ ಹಿಂತೆಗೆದುಕೊಂಡಿದ್ದ ಕೇಂದ್ರ ಸರ್ಕಾರ, ಇದೀಗ ಮತ್ತೆ ಪ್ರತಿ ಸಿಲಿಂಡರ್ಗೆ 200 ರೂಪಾಯಿಗಳು  ಸಬ್ಸಿಡಿ ನೀಡಲು ತೀರ್ಮಾನಿಸಿದೆ.  ಸಬ್ಸಿಡಿ ನೀಡುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡಿದೆ ಮತ್ತು ಇದು ದೇಶದ ಎಲ್ಲಾ 33 ಕೋಟಿ ಎಲ್ಪಿಜಿ ಗ್ರಾಹಕರಿಗೆ ಅನ್ವಯಿಸುತ್ತದೆ.  ಇದರಿಂದ ಕೇಂದ್ರ ಸರ್ಕಾರಕ್ಕೆ  ವರ್ಷಕ್ಕೆ ಸುಮಾರು 10,000 ಕೋಟಿ ರೂಪಾಯಿಗಳ ವೆಚ್ಚವಾಗಲಿದೆ. 

 

ಇನ್ನಷ್ಟು ಸುದ್ದಿಗಳು