ಕೆಲಸ ಹುಡುಕಿ ಹೋದವರಿಗಾಗಿ ಹುಡುಕಾಟ! ಇವರ ಸುಳಿವು ಸಿಕ್ಕರೇ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ!

Malenadu Today

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS  

ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಮನವಿ

ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಭದ್ರಾವತಿ ತಾಲೂಕು ದೊಡ್ಡಗೋಪ್ಪೆನಹಳ್ಳಿ ಗ್ರಾಮದ ಕುಬೇರಪ್ಪರವರ ಮಗ ಮಂಜುನಾಥ ಕೆ. ಎಂಬ 36 ವರ್ಷದ ವ್ಯಕ್ತಿ ಆ.12 ರಂದು ಬೆಳಗ್ಗೆ ಮೆಗ್ಗಾನ್ ಆಸ್ಪತ್ರೆಯಿಂದ ಕಾಣೆಯಾಗಿರುತ್ತಾರೆ. ಈತನ ಚಹರೆ 5.7 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡನೆಯ ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.  ಬಿಳಿ ಪ್ಯಾಂಟು ಹಾಗೂ ಕೆಂಪು ಟೀಶರ್ಟ್ ಧರಿಸಿರುತ್ತಾರೆ.

ಕೆಲಸ ಹುಡುಕಿಕೊಂಡು ಹೋದವವರು ನಾಪತ್ತೆ

ಇನ್ನೊಂದು ಪ್ರಕರಣದಲ್ಲಿ ನಗರದ ನ್ಯೂಮಂಡ್ಲಿ 2ನೇ ಕ್ರಾಸ್ ಅಂಚೇ ಕಚೇರಿ ರಸ್ತೆ ವಾಸಿ ಸೈಫುಲ್ಲಾ ಎಂಬು ಪತ್ನಿ ವಾಹೀದಾಬಾನು ಎಂಬ 27 ವರ್ಷದ ಮಹಿಳೆ ಆ.23 ರಂದು ಕೆಲಸ ಹುಡುಕಿಕೊಂಡು ಮನೆಯಿಂದ ಹೊರಗೆ ಹೋದವರು ಇದುವರೆಗೂ ವಾಪಾಸ್ಸಾಗಿರುವುದಿಲ್ಲ.  ಈಕೆಯ ಚಹರೆ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕಪ್ಪುಕೂದಲು, ಬಲಗೈನಲ್ಲಿ ಎಸ್.ಟಿ.ಎಂದು ಹಚ್ಚೆ ಇರುತ್ತದೆ. ಬಲಭಾಗದ ತುಟಿಯ ಕೆಲಗೆ ಮಚ್ಚೆ ಇರುತ್ತದೆ. ಉರ್ದು ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ.  ಅರಶಿಣ ಬಣ್ಣದ ಟಾಪ್, ಗಿಳಿ ಹಸಿರು ಬಣ್ಣದ ಪ್ಯಾಂಟ್ ,ಕಪ್ಪು ಬುರ್ಖಾ ಧರಿಸಿರುತ್ತಾರೆ.

ಈ ಕಾಣೆಯಾದ ವ್ಯಕ್ತಿಗಳ ಮಾಹಿತಿ ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಖ್ಯೆ : 08182-261414/9611761255 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 


ಇನ್ನಷ್ಟು ಸುದ್ದಿಗಳು 


 

 

Share This Article