ಶಿವಮೊಗ್ಗ ಜಿಲ್ಲೆ ಒಂದರಲ್ಲೆ 35 ಮಂದಿ ಕಾಂಗ್ರೆಸ್ ಸೇರ್ಪಡೆ! ಕುಮಾರ್​ ಬಂಗಾರಪ್ಪ ಕೈ ಹಿಡಿಯುತ್ತಾರಾ? ಬಿಜೆಪಿ ಖಾಲಿಯಾಗುತ್ತಾ? ಶಿಕಾರಿಪುರದ ಬಗ್ಗೆ BYV ಹೋರಾಟವೇನು? TODAY @POLITICS

Here is a report of the opinions and opinions of the people's representatives and politicians of Shivamogga. ಶಿವಮೊಗ್ಗದ ಜನಪ್ರತಿನಿಧಿಗಳು ರಾಜಕಾರಣಿಗಳ ಪರ-ವಿರೋಧ ಅಭಿಪ್ರಾಯ ಹಾಗೂ ಮಾತುಗಳ ವರದಿ ಇಲ್ಲಿದೆ

ಶಿವಮೊಗ್ಗ ಜಿಲ್ಲೆ ಒಂದರಲ್ಲೆ 35 ಮಂದಿ ಕಾಂಗ್ರೆಸ್ ಸೇರ್ಪಡೆ! ಕುಮಾರ್​ ಬಂಗಾರಪ್ಪ ಕೈ ಹಿಡಿಯುತ್ತಾರಾ? ಬಿಜೆಪಿ ಖಾಲಿಯಾಗುತ್ತಾ? ಶಿಕಾರಿಪುರದ ಬಗ್ಗೆ BYV  ಹೋರಾಟವೇನು?  TODAY @POLITICS

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS

ಕಾಂಗ್ರೆಸ್​ ಪಕ್ಷಕ್ಕೆ ಬರುವವರನ್ನ ಹೈಕಮಾಂಡ್​ ನಿರ್ಧಾರದಂತೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್​.ಎಸ್.ಸುಂದರೇಶ್ ಹೇಳಿದ್ಧಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲಾಗುತ್ತಿದ್ದು, ಯಾವುದೇ ಅಪೇಕ್ಷೆ ಇಲ್ಲದೆ ಪಕ್ಷಕ್ಕೆ ಬರುವವರನ್ನ ಸೇರಿಸಿಕೊಳ್ಳಲಾಗುತ್ತಿದೆ 

ಕುಮಾರ್ ಬಂಗಾರಪ್ಪರವರು ಪಕ್ಷ ಬಿಡೋದಿಲ್ಲ

ಇನ್ನೊಂದೆಡೆ ಆಪರೇಷನ್ ಹಸ್ತದ ಬಗ್ಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರವರು ಕುಮಾರ್ ಬಂಗಾರಪ್ಪ ರವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಹಾಗೂ ರಾಜ್ಯ ವ್ಯಾಪ್ತಿಯಲ್ಲಿ ಸಂಘಟನೆಯ ಬಲವನ್ನು ಹೆಚ್ಚಿಸಿದವರಾಗಿದ್ದು ಅವರು ಕಾಂಗ್ರೆಸ್ ಸೇರ್ಪಡೆ ವಿಚಾರ ಕೇವಲ ಕಟ್ಟುಕಥೆಯಾಗಿದೆ ಎಂದಿದ್ಧಾರೆ. 

ಅರಸಾಳುವಲ್ಲಿ ರೈಲು ನಿಲುಗಡೆ ಸದುಪಯೋಗ ಪಡಿಸಿಕೊಳ್ಳಿ

ಇನ್ನೂ ಇದೇ ವೇಳೆ ಸಂಸದ ರಾಘವೇಂದ್ರ ರವರು ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ರೈಲ್ವೆ ಪ್ರಯಾಣಿಕರಿಗೆ ಸದುಪಯೋಗವಾಗಲೆಂದು ಅರಸಾಳಿನ ಮಾಲ್ಗುಡಿ ರೈಲ್ವೇ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆಯಿಂದ ಅನುಮತಿ ದೊರೆತಿದೆ.ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಹೊಸನಗರ, ರಿಪ್ಪನ್‌ಪೇಟೆ, ಹುಂಚ, ಕೋಣಂದೂರು, ನಿಟ್ಟೂರು, ಯಡೂರು, ಮಾಸ್ತಿಕಟ್ಟೆ, ರಾಮಚಂದ್ರಪುರ, ಹೊಂಬುಜ, ಕೋಡೂರು, ಸೂಡೂರು, ಚಿನ್ನಮನೆ, ನಗರ ರೋಡ್ ,ಹೀಗೆ ಸುತ್ತಮುತ್ತಲಿನ ಊರಿನ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ. ಈ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ಧಾರೆ.   

ಶಿಕಾರಿಪುರವನ್ನು ಬರ ಪೀಡಿತ ತಾಲ್ಲೂಕು ಎಂದು ಘೋಷಿಸಿ

ಅತ್ತ ಶಿಕಾರಿಪುರದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ರವರ ನೇತೃತ್ವದಲ್ಲಿ ತಾಲ್ಲೂಕನ್ನ ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಮೆರವಣಿಗೆ ನಡೆಸಲಾಗಿದೆ. ಈ ವೇಳೆ ಮಾತನಾಡಿದ ವಿಜಯೇಂದ್ರರವರು,  ರಾಜ್ಯದಲ್ಲಿ ರೈತರು ಮಳೆ ಇಲ್ಲದೇ ಕಂಗಾಲಾಗಿದ್ದಾರೆಮ ಆದರೆ ಸರ್ಕಾರ ಈ ಬಗ್ಗೆ ನಿಗಾವಹಿಸ್ತಿಲ್ಲ ಎಂದು ದೂರಿದರು. ಶಿಕಾರಿಪುರದಲ್ಲಿ ಮಳೆ ಸಮರ್ಪಕವಾಗಿ ಆಗದೇ ಬರದ ಛಾಯೇ ಆವರಿಸಿದೆ. ಹೀಗಾಗಿ ಬರಪೀಡಿತ ತಾಲ್ಲೂಕನ್ನಾಗಿ ಘೋಷಿಸಬೇಕು, ಈ ಹೋರಾಟ ತಾಲ್ಲೂಕಿನಿಂದ ಆರಂಭವಾಗಿ ರಾಜ್ಯದೆಲ್ಲೆಡೆ ವಿಸ್ತರಿಸಲಿದೆ ಎಂದಿದ್ಧಾರೆ.  

ಯಾರು ಕಾಂಗ್ರೆಸ್ಗೆ ಹೋಗುವುದಿಲ್ಲ

ಇನ್ನೂ ಶಿವಮೊಗ್ಗದಲ್ಲಿ ಕಾಂಗ್ರೆಸ್​ಗೆ ಬಿಜೆಪಿ ಮುಖಂಡರು ಹೋಗುವುದರ ಬಗ್ಗೆ ಮಾತನಾಡಿದ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಬಿಜೆಪಿಯ ಯಾವುದೇ ಶಾಸಕರು ಅಥವಾ ವಿಧಾನ ಪರಿಷತ್ ಸದಸ್ಯರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದಿದ್ದಾರೆ.  ಬಿಜೆಪಿಯನ್ನು ಖಾಲಿ ಮಾಡುತ್ತಾರೆ ಎಂಬ ಕಾಂಗ್ರೆಸ್ ಹೇಳಿಕೆಗೆ ಜನ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ.ಯಾವ ಪಕ್ಷ ಬೀದಿಗೆ ಬರುತ್ತದೆ ಎಂಬುದ ಗೊತ್ತಾಗಲಿದೆ ಎಂದಿದ್ದಾರೆ.  

ಇನ್ನಷ್ಟು ಸುದ್ದಿಗಳು