ಪ್ರೀತಿ ಪೆಟ್ಟು ಹುಷಾರು! ಪ್ರೇಮಿಸಿದ ಯುವಕನನ್ನ ಕೂಡಿ ಹಾಕಿ ಹೊಡೆದ ಹುಡುಗಿ ಕಡೆಯವರು! ದಾಖಲಾಯ್ತು ಎಫ್​ಐಆರ್!

KARNATAKA NEWS/ ONLINE / Malenadu today/ Aug 26, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರಿನಲ್ಲಿ ಪ್ರೀತಿ ಪ್ರೇಮದ ವಿಚಾರವಾಗಿ ಹುಡುಗಿ ಕಡೆಯವರು ಹುಡುಗನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ (Holehonur Police Station) ನಲ್ಲಿ ಪ್ರಕರಣ ದಾಖಲಾಗಿದೆ. 

ಏನಿದು ಘಟನೆ ?

ಪವನ್​ ಎಂಬಾತ ಯುವತಿಯೊಬ್ಬಳನ್ನ ಪ್ರೀತಿಸ್ತಿದ್ದನಂತೆ. ಆಕೆಯು ಪ್ರೀತಿಸುತ್ತಿದ್ದು, ಮನೆಯವರ ವಿರೋಧದಿಂದಾಗಿ ಪರಸ್ಪರ ದೂರಾಗಿದ್ದಾರೆ. ಈ ನಡುವೆ ನಿನ್ನೆ ಅಂದರೆ, ಆಗಸ್ಟ್ 25 ರಂದು ಪವನ್​ ಬೈಕ್​ನಲ್ಲಿ ಹೋಗುತ್ತಿದ್ದಾಗ ಆತನನ್ನ ಅಡ್ಡಗಟ್ಟಿ  ಹುಡುಗಿ ಕಡೆಯವರು ಹಲ್ಲೆ ನಡೆಸಿದ್ಧಾರೆ. ಅಲ್ಲದೆ ಹುಡುಗಿಯ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿದ್ದವರು ಹಿಗ್ಗಾಮುಗ್ಗಾ ಥಳಿಸಿದ್ಧಾರೆ ಎಂದು ದೂರಿನಲ್ಲಿ ಆರೋಪಿಸಿದ್ದು ಎಫ್​ಐಆರ್ ದಾಖಲಾಗಿದೆ.   

ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪವನ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ನೀಡಿದ ಹೇಳಿಕೆಯನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ  


ಇನ್ನಷ್ಟು ಸುದ್ದಿಗಳು 


 

 

Leave a Comment