ಪ್ರತಿಭಟನೆ ಸಂದರ್ಭದಲ್ಲಿ ಆರಗ ಜ್ಞಾನೇಂದ್ರರವರು ಆಡಿದ ಮಾತು ವಿವಾದಕ್ಕೆ ಕಾರಣವಾಯ್ತಾ?

Did Araga Gyanendra's remarks during the protest lead to a controversy?ಪ್ರತಿಭಟನೆ ಸಂದರ್ಭದಲ್ಲಿ ಆರಗ ಜ್ಞಾನೇಂದ್ರರವರು ಆಡಿದ ಮಾತು ವಿವಾದಕ್ಕೆ ಕಾರಣವಾಯ್ತಾ?

ಪ್ರತಿಭಟನೆ ಸಂದರ್ಭದಲ್ಲಿ ಆರಗ ಜ್ಞಾನೇಂದ್ರರವರು ಆಡಿದ ಮಾತು ವಿವಾದಕ್ಕೆ ಕಾರಣವಾಯ್ತಾ?

KARNATAKA NEWS/ ONLINE / Malenadu today/ Aug 2, 2023 SHIVAMOGGA NEWS

ಡಾ.ಕಸ್ತೂರಿರಂಗನ್ ನೀಡಿರುವ ವರದಿ ಜಾರಿಗೊಂಡರೆ ರಕ್ತಕ್ರಾಂತಿ ಆಗುತ್ತದೆ ಎಂದು ಕೇಂದ್ರ ಸಚಿವರಿಗೆ ಈ ಹಿಂದೆ ಎಚ್ಚರಿಕೆ ನೀಡಿದ್ದೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆ ವೇಳೆ ಹೇಳಿದ್ದರು. ಈ ವೇಳೆ ಅವರು ಆಡಿದ ಮಾತೊಂದು ಇದೀಗ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ. ಕಸ್ತೂರಿರಂಗನ್ ವರದಿ ಮಾಡಲಾಗುವುದು ಎಂದು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿರುವ ಹೇಳಿಕೆ ಖಂಡಿಸಿ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆ ನೇತೃತ್ವವಹಿಸಿ  ಆರಗ ಜ್ಞಾನೇಂದ್ರ ಮಾತನಾಡುತ್ತಿದ್ರು. 

ಈ ವೇಳೆ ಅವರು,  ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿ ಜಾರಿಗೆ ಸಿದ್ಧವಾಗಿರುವುದು ಖಂಡನೀಯ ಎಂದರು ಅಲ್ಲದೆ  ಕಸ್ತೂರಿ ರಂಗನ್ ವರದಿ ಜಾರಿಯಿಂದಾಗಿ ಮಲೆನಾಡ ಭಾಗದ ಹಳ್ಳಿಗರ ಜೀವನ ಸ್ತಬ್ಧವಾಗುವ ಪರಿಸ್ಥಿತಿ ಎದುರಾಗಬಹುದು ಎಂದಿದ್ದರು. ಈ ಮಧ್ಯೆ ನಮ್ಮ ದುರಾದೃಷ್ಟ ಏನಂದರೆ ನಮ್ಮ ಫಾರೆಸ್ಟ್ ಮಿನಿಸ್ಟರ್ ಆದವರು ಆ ಕಡೆಯವರು. ಅವರಿಗೆ ಮರ ಗಿಡ ಅಂದರೆ ಏನು ಅಂತಾ ಗೊತ್ತಿಲ್ಲ ನೆರಳು ಅಂದ್ರೆ ಗೊತ್ತಿಲ್ಲ, ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಖರ್ಗೆಯವರನ್ನ ನೋಡಿದರೆ ಗೊತ್ತಾಗುತ್ತದೆ. ತಲೆಕೂದಲು ಮುಚ್ಚಿಕೊಂಡಿರುವುದರಿಂದ ಅದು ಸ್ವಲ್ಪ ಉಳಿದುಕೊಂಡಿದೆ ಎಂದಿದ್ದಾರೆ.ಸದ್ಯ ಆರಗರವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದ್ದು, ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇನ್ನೂ ಇದೇ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಖರ್ಗೆಯವರ ಮೈ ಬಣ್ಣವನ್ನು ಅವಹೇಳನ ಮಾಡುವ ಮೂಲಕ @JnanendraAraga ಮತ್ತು ಅವರ ಪಕ್ಷದ ಮನುವಾದದಲ್ಲಿನ ವರ್ಣಾಶ್ರಮ ಬಗೆಗಿನ ಪ್ರೀತಿ ಹಾಗೂ ದಮನಿತರ ವಿರುದ್ಧದ ಮನಸ್ಥಿತಿ ತೆರೆದಿಟ್ಟಿದ್ದಾರೆ ಎಂದು ಆರೋಪಿಸಿದೆ

ಇನ್ನಷ್ಟು ಸುದ್ದಿಗಳು 





 ​