ಶಿವಮೊಗ್ಗ ನಗರ ಶಾಸಕರನ್ನ ಸ್ಟೇಷನ್​ನಿಂದ ಹೊರಗಡೆ ನಿಲ್ಲಿಸಿದ್ಯಾರು!? ಪೊಲೀಸರು ತೋರಿದ್ರಾ ಅಗೌರವ? ಬಿಜೆಪಿ ಮುಖಂಡರ ದೂರೇನು? ಡಿಸಿ ಹೇಳಿದ್ದೇನು?

KARNATAKA NEWS/ ONLINE / Malenadu today/ Aug 2, 2023 SHIVAMOGGA NEWS

ಜಿಲ್ಲಾ ಪಂಚಾಯತ್ ಸಭಾಂಗಣದೊಳಗೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪ್ರತಿಭಟಿಸಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಕೇಸ್ ಹಾಕಿರುವುದನ್ನ ಶಿವಮೊಗ್ಗ ಜಿಲ್ಲಾ ಬಿಜೆಪಿ ಪ್ರತಿಷ್ಟೆಯಾಗಿ ತೆಗೆದುಕೊಂಡಿದೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಹಾಗೂ ಜಿಲ್ಲಾ ಎಸ್​ಪಿ ಮಿಥುನ್​ ಕುಮಾರ್​ರವರಿಗೂ ಮನವಿ ಸಲ್ಲಿಸಿದೆ. ಈ ವೇಳೆ ಶಿವಮೊಗ್ಗ ನಗರ ಶಾಸಕರಿಗೆ ಪ್ರತಿಭಟನೆ ನಡೆದ ದಿನ ಪೊಲೀಸರು ಸಮರ್ಪಕವಾಗಿ ನಡೆಸಿಕೊಂಡಿಲ್ಲ ಎಂದು ಬಿಜೆಪಿ ಮುಖಂಡರು ಗಂಭೀರವಾಗಿ ಆರೋಪಿಸಿದ್ದು, ಜಿಲ್ಲಾಧಿಕಾರಿಗೆ ಈ ಬಗ್ಗೆ ದೂರು ಹೇಳಿಕೊಂಡಿದ್ದಾರೆ. 

ಶಾಸಕರನ್ನು ಹೊರಗಿರಿ ಎಂದು ಪೊಲೀಸರು ಹೇಳಿದರೇ?

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಜಿಲ್ಲಾ ಪಂಚಾಯತ್ ಸಭಾಂಗಣದಿಂದ ಜಯನಗರ ಸ್ಟೇಷನ್​ಗೆ ಕರೆದುಕೊಂಡು ಬಂದ ಪೊಲೀಸರು ಅವರನ್ನ ಅಲ್ಲಿಯೇ ಕೂರಿಸಿಕೊಂಡಿದ್ದರು. ಮಧ್ಯಾಹ್ನ ಮೂರು ಗಂಟೆಯಾದರೂ ಅವರನ್ನ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಎಸ್​.ಎನ್​. ಚನ್ನಬಸಪ್ಪ ಜಯನಗರ ಪೊಲೀಸ್ ಸ್ಟೇಷನ್​ಗೆ ತೆರಳಿದ್ದರು. ಈ ವೇಳೆ ಅವರು ಸ್ಟೇಷನ್​ ಒಳಗೆ ಹೋದಾಗ, ಹೊರಗಡೆ ಇರಿ ಸರ್, ಅವರನ್ನು ಕಳುಹಿಸಿಕೊಡುತ್ತೇವೆ ಎಂದಿದ್ದಾರೆ ಎಂದು ಪೊಲೀಸರು ಹೇಳಿದ್ಧಾರೆ ಎಂಬುದು ಬಿಜೆಪಿ ಮುಖಂಡರ ಆರೋಪ. ಇನ್ನೂ ಇದೇ ವಿಚಾರವಾಗಿ ಜಿಲ್ಲಾಧಿಕಾರಿಯವರ ಬಳಿಯಲ್ಲಿ ಮಾತನಾಡಿದ  ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ್​ರವರು ಇನ್ನೂ ಶಾಸಕರು ಜಯನಗರ ಪೊಲೀಸ್ ಸ್ಟೇಷನ್​ಗೆ ಬಂದಾಗ ಅವರಿಗೆ ಒಂದು ಕುರ್ಚಿಯನ್ನು ಸಹ ನೀಡದೇ ಅಗೌರವ ತೋರಲಾಗಿದೆ. ಅವರೊಬ್ಬ ಶಾಸಕರು ಅವರು ತಪ್ಪು ಮಾಡಿಯೇ ಬಂದಿದ್ದರು ಸಹ ಅವರಿಗೆ ಕುರ್ಚಿಕೊಟ್ಟು ಗೌರವ  ಸಲ್ಲಿಸಬೇಕಾಗಿತ್ತು. ಆದರೆ ಪೊಲೀಸರ ನಡೆ ಸೌಜನ್ಯರಹಿತವಾಗಿತ್ತು ಎಂದು ದೂರಿದರು. ಪೊಲೀಸ್ ಸ್ಟೇಷನ್​ನಲ್ಲಿ ಶಾಸಕರನ್ನ ಒಳಗೆ ಕರೆಯಲಾಗದಷ್ಟು ಬದಲಾವಣೆಯಾಗಿದೆಯಾ ಎಂದು ಭಾನುಪ್ರಕಾಶ್ ಜಿಲ್ಲಾಧಿಕಾರಿಯವರನ್ನ ಪ್ರಶ್ನಿಸಿದ್ರು. ಅಲ್ಲದೆ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕಲ್ಲವೇ ಎಂದರು. 

ದೂರು ಕೊಡಿ ಪರಿಶೀಲಿಸುತ್ತೇನೆ 

ಇನ್ನೂ ಬಿಜೆಪಿ ಮುಖಂಡರ ಆರೋಪಕ್ಕೆ ಉತ್ತರಿಸಿದ ಡಿಸಿ ಸೆಲ್ವಮಣಿಯವರು, ಈ ಸಂಬಂಧ ಲಿಖಿತ ದೂರನ್ನ ನೀಡಿದರೆ, ಆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಒಟ್ಟಾರೆ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಯವರ ಬಳಿ, ಶಾಸಕರಿಗೆ ಅಗೌರವ ತೋರಿದ್ದು ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ. 

ಇನ್ನಷ್ಟು ಸುದ್ದಿಗಳು 

Shivamogga Malenadu Today

 ​ 

 

 

Leave a Comment