BREAKING NEWS : ಶಿವಮೊಗ್ಗ ಪೊಲೀಸ್​ಗೆ ರಾಷ್ಟ್ರಮಟ್ಟದ ಗರಿ/ ಇನ್​ಸ್ಪೆಕ್ಟರ್​ ಗುರುರಾಜ್​ಗೆ ಸಿಕ್ಕಿತು India Cyber Cop Award

ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ನೀಡುವ ಇಂಡಿಯಾಸ್​ ಸೈಬರ್​ ಕಾಪ್​ ದಿ ಇಯರ್​ ಪ್ರಶಸ್ತಿಯು, ಇನ್​ಸ್ಪೆಕ್ಟರ್​ ಕೆ.ಟಿ.ಗುರುರಾಜ್​ರಿಗೆ ಲಭಿಸಿದೆ.

BREAKING NEWS :  ಶಿವಮೊಗ್ಗ ಪೊಲೀಸ್​ಗೆ ರಾಷ್ಟ್ರಮಟ್ಟದ ಗರಿ/ ಇನ್​ಸ್ಪೆಕ್ಟರ್​ ಗುರುರಾಜ್​ಗೆ ಸಿಕ್ಕಿತು India Cyber Cop Award

ನಿರೀಕ್ಷೆಯಂತೆಯೇ ಶಿವಮೊಗ್ಗ ಪೊಲೀಸ್ ಇಲಾಖೆಗೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್​ ಇಂಡಿಯ, ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ನೀಡುವ ಇಂಡಿಯಾಸ್​ ಸೈಬರ್​ ಕಾಪ್​ ದಿ ಇಯರ್​ ಪ್ರಶಸ್ತಿಯು, ಇನ್​ಸ್ಪೆಕ್ಟರ್​ ಕೆ.ಟಿ.ಗುರುರಾಜ್​ರಿಗೆ ಲಭಿಸಿದೆ.

ಶಿವಮೊಗ್ಗದ  ಸಿಇಎನ್‌(ಸೈಬರ್‌, ಎಕಾನಿಮಿಕ್‌ ಅಫೆನ್ಸ್‌ ಹಾಗೂ ನಾರ್ಕೋಟಿಕ್‌) ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್ ಆಗಿದ್ದ ಕೆ.ಟಿ. ಗುರುರಾಜ್​ ಕೈಗೊಂಡಿದ್ದ ತನಿಖಾ ಪ್ರಕರಣಕ್ಕೆ ಈ ಪ್ರಶಸ್ತಿ ಲಭ್ಯವಾಗಿದೆ. ಈ ಸಂಬಂಧ ಮಲೆನಾಡು ಟುಡೆ. ಕಾಂ ಈ ಮೊದಲು ಮಾಡಿದ್ದ ವರದಿಯು ಇಲ್ಲಿದೆ ಓದಿ BREAKING NEWS | India Cyber Cop Award ಪ್ರಶಸ್ತಿ ಪಟ್ಟಿಯಲ್ಲಿ ಶಿವಮೊಗ್ಗದ ಸೈಬರ್​ ಕ್ರೈಂ ಪೊಲೀಸ್​ ಠಾಣೆ ಕೇಸ್​ & ತನಿಖಾಧಿಕಾರಿ ಕೆ.ಟಿ ಗುರುರಾಜ್​

ಏನಿದು ಪ್ರಕರಣ

ಶಿವಮೊಗ್ಗದ ತಾಲ್ಲೂಕುವೊಂದರಲ್ಲಿ ಶಿಕ್ಷಕನೊಬ್ಬ ಮಕ್ಕಳ ಅಶ್ಲೀಲ ಚಿತ್ರಗಳನ್ನು ಇಂಟರ್​ನೆಟ್​ನಲ್ಲಿ ಅಪ್​ಲೋಡ್ ಮಾಡುತ್ತಿದ್ದ ಕೇಸ್​ವೊಂದರ ಜಾಡು ಹಿಡಿದು ತನಿಖೆ ಕೈಗೊಂಡಿದ್ದ ಗುರುರಾಜ್​, ಆ ಸಂಬಂಧ ಆರೋಪಿಯನ್ನು ಅರೆಸ್ಟ್ ಮಾಡಿದ್ದಷ್ಟೆ ಅಲ್ಲದೆ ಆತನಿಗೆ 20 ವರ್ಷ ಸಜೆ ಆಗುವಂತೆ ಶ್ರಮಿಸಿದ್ದರು. ಈ ವೇಳೆ ಆರು ಅಪ್ರಾಪ್ತ ಮಕ್ಕಳನ್ನು ರಕ್ಷಿಸಿದ್ದರು. 

ಇದನ್ನು ಸಹ ಓದಿ : ಮಕ್ಕಳ ಅಶ್ಲೀಲ ಚಿತ್ರ ತೆಗೆದು ಶಿಕ್ಷಕನ ಆಟ/ ಅಮೆರಿಕಾದಿಂದ ಬಂದಿತ್ತು ಸುಳಿವು/ ಗುರುರಾಜ್​ ಭೇದಿಸಿದ ದೇಶದ ಟಾಪ್​ಮೋಸ್ಟ್​​ ಪ್ರಕರಣ ಯಾವುದು ಗೊತ್ತಾ?

ಈ ಪ್ರಕರಣ ಈ ವರ್ಷದ ಇಂಡಿಯಾಸ್​ ಸೈಬರ್ ಕಾಪ್​ ಇಯರ್​ ಪ್ರಶಸ್ತಿಯ ಫೈನಲ್​ ತ್ರೀ ಲಿಸ್ಟ್​ನಲ್ಲಿ ಆಯ್ಕೆಯಾಗಿತ್ತು. ಬೆಂಗಳೂರಿನ ಪೊಲೀಸ್ ಕಮಿಷನರ್​, ಐಪಿಎಸ್​ ಅಧಿಕಾರಿ ಪ್ರತಾಪ್​ ರೆಡ್ಡಿ, ಸುಪ್ರೀಂಕೋರ್ಟ್ ವಕೀಲರಾದ ವಕುಲ್ ಶರ್ಮಾ, NTIPRIT ಯ ಟೆಲಿಕಾಂ ಸೆಕ್ಯುರಿಟಿ ವಿಭಾಗದ ಡೆಪ್ಯುಟಿ ಡೈರಕ್ಟರ್​ ಜನರಲ್​ ಮತ್ತುMHA DFSS ನ ಫಾರ್ಮರ್​ ಸೈಂಟಿಸ್ಟ್​ ಕೃಷ್ಣಶಾಸ್ತ್ರಿ ಪೆಂಡಾಲ್ಯರವರು ತೀರ್ಪುಗಾರರ ತಂಡ ಅಂತಿಮವಾಗಿ ಮೂವರ ಪೈಕಿ ಕೆ.ಟಿ ಗುರುರಾಜ್​ರವರನ್ನು ಇಂಡಿಯಾಸ್​ ಸೈಬರ್​ ಕಾಪ್ ಆಫ್ ಇಯರ್ (India Cyber Cop of the Year) ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. 

ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು ಎಸಿ ಆಗುವುದು ಬೇಡ/ ರಾಜ್ಯ ಸರ್ಕಾರಕ್ಕೆ ಒತ್ತಾಯ/ ಏನಿದು ಬೇಡಿಕೆ ವಿವರ ಇಲ್ಲಿದೆ ಓದಿ

ಇವತ್ತು ನಡೆದ ಕಾರ್ಯಕ್ರಮದಲ್ಲಿ ಗುರುರಾಜ್​ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಈ ಮೂಲಕ ಶಿವಮೊಗ್ಗ ಪೊಲಿಸ್ ವಿಭಾಗಕ್ಕೆ ಹೆಮ್ಮೆಯ ಗರಿ ಮೂಡಿಸಿದ್ಧಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link