ಇಂಡಿಯಾ ಸೈಬರ್ ಕಾಪ್ ಇಯರ್ ಪ್ರಶಸ್ತಿಯ ಪಟ್ಟಿಯಲ್ಲಿ ಅಂತಿಮಗೊಂಡಿರುವ ಮೂವರು ತನಿಖಾಧಿಕಾರಿಗಳ ಹೆಸರಲ್ಲಿ ಶಿವಮೊಗ್ಗದ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಆಗಿದ್ದ ಗುರುರಾಜ್ ರವರ ಹೆಸರು ಕೂಡ ಇದೆ. ರಾಷ್ಟ್ರಮಟ್ಟದಲ್ಲಿ ಅತಿದೊಡ್ಡ ಗೌರವ ತಂದುಕೊಡಬಲ್ಲ ಈ ಪ್ರಶಸ್ತಿಯ ಪಟ್ಟಿಯಲ್ಲಿ ಗುರುರಾಜ್ರವರ ಹೆಸರು ಬರಲು ಕಾರಣವಾದ ಆ ಕೇಸ್ ಯಾವುದು ಗೊತ್ತಾ? ಅದನ್ನೆ ಹೇಳುತ್ತೇವೆ..ಮುಂದೆ ಓದುತ್ತಾ ಸಾಗಿ..
ಆತ ಶಿಕ್ಷಕ, ಆದರೆ ಅದೊಂದು ಕೆಲಸ ಬಿಟ್ಟು ಬೇರೆಯದ್ದೆ ಕೆಲಸ ಮಾಡ್ತಿದ್ದ,ಆರು ಅಪ್ರಾಪ್ತ ವಿದ್ಯಾರ್ಥಿಗಳನ್ನು ತನ್ನ ಚಟಕ್ಕೆ ಬಳಸಿಕೊಳ್ತಿದ್ದ. ಅಲ್ಲದೆ ಆ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಅಶ್ಲೀಲ ವೆಬ್ಗಳಿಗೆ ಅಪ್ಲೋಡ್ ಮಾಡುತ್ತಿದ್ದ. ಈತ ವಿಡಿಯೋವನ್ನು ಹರಿಬಿಡ್ತಿರೋದು ಯಾರಿಗೂ ಗೊತ್ತಾಗಲ್ಲ ಎಂದು ಕೊಂಡಿದ್ದ. ಆದರೆ ಅಮೆರಿಕಾದಲ್ಲಿ ಕೂತಿದ್ದವರು ಈತನ ವಿಡಿಯೋ ನೋಡಿದ್ದರು. ಅಲ್ಲದೆ ಅದನ್ನ ತಡಿಬೇಕು ಎಂದು ಮುಂದಾಗಿದ್ದರು. ಹಾಗೆ ಮುಂದಕ್ಕೆ ಅಡಿಯಿಟ್ಟು ಶಿಕ್ಷಕನ ಕ್ರೈಂ ಶೀಟ್ ಓಫನ್ ಮಾಡಿಸಿದ್ದು ಸೈಬರ್ ಟಿಪ್ ಲೈನ್
ಇದನ್ನು ಸಹ ಒದಿ : ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್ ಆರೋಪವೇನು
ಏನಿದ್ ಸೈಬರ್ ಟಿಪ್ ಲೈನ್ : ಸೈಬರ್ ಟಿಪ್ ಲೈನ್ ಎಂಬುದು ಅಮೇರಿಕಾದಲ್ಲಿರುವ ಒಂದು ಎನ್.ಜಿ.ಓ ಸಂಸ್ಥೆ. ಇಂಟರ್ನೆಟ್ನಲ್ಲಿ ಅಪ್ಲೋಡ್ ಆಗುವ ಅಪ್ರಾಪ್ತರ ಅಶ್ಲೀಲ ಚಿತ್ರಗಳು ಹಾಗೂ ವಿಡಿಯೋಗಳ ಮೇಲೆ ಈ ಸಂಸ್ಥೆ ಗಮನಹರಿಸುತ್ತಿರುತ್ತದೆ.
- ಪ್ರತೀ ವರ್ಷ ಈ ದೇಶದಲ್ಲಿ ಅಪ್ರಾಪ್ತ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಾಗುತ್ತಿದ್ದಾರೆ.
- ಹಾಗೆ ಕಾಣೆಯಾದ ಮಕ್ಕಳು ಎಲ್ಲಿ ಹೋಗುತ್ತಾರೆ.?
- ಬಹಳಷ್ಟು ಮಕ್ಕಳ ಅಶ್ಲೀಲ ವೀಡಿಯೋ & ಪೋಟೋ ಗಳು ಇಂಟರ್ನೆಟ್ ನಲ್ಲಿ ಏಕೆ ಹರಿದಾಡುತ್ತಿವೆ.?
- ಮಕ್ಕಳ ಅಶ್ಲೀಲ ವೀಡಿಯೋ ನೋಡುವ ಜನರ ಮನಸ್ಥಿತಿ ಯಾವ ರೀತಿಯದ್ದು?
- ಇಂತಹ ವಿಡಿಯೋ ಗಳನ್ನು ಯಾರೆಲ್ಲಾ ನೋಡುತ್ತಾರೆ ? ಎಂಬಿತ್ಯಾದಿ ಅಂಶಗಳನ್ನು ಇಟ್ಟುಕೊಂಡು ಸೈಬಲ್ ಟಿಪ್ ಲೈನ್ ಸಂಸ್ಥೆ ಇವತ್ತು ಈ ವಿಚಾರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದೆ.
ಏನು ಕೆಲಸ ಮಾಡುತ್ತೆ ಸೈಬರ್ ಟಿಪ್: ವಿಡಿಯೋ ನೋಡುವ ಜನರಿರುವ ಇರುವುದರಿಂದಲೇ ಸಹಜವಾಗಿ ಮಕ್ಕಳ ವೀಡಿಯೋ ಮಾಡುವ ಜನರು ಇರುತ್ತಾರೆ. ಈ ರೀತಿಯ ವಿಡಿಯೋ.ನೋಡುವ ಮತ್ತು ವೀಡಿಯೋ ಮಾಡುವ ಜನರ ವಿಕೃತ ಮನಸ್ಸಿನಿಂದಲೇ ಮಕ್ಕಳ ಅಪಹರಣ ಆಗುತ್ತದೆ. ಹೀಗಾಗಿ ಸೈಬರ್ ಟಿಪ್ ಸಂಸ್ಥೆ ಯುಟ್ಯೂಬ್, ಪೇಸ್ ಬುಕ್, ನಂತ ಎಲ್ಲಾ ರೀತಿಯ ಸಾಮಾಜಿಕ ಜಾಲತಾಣಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಸಾಮಾಜಿಕ ಜಾಲತಾಣಗಳು ಈ ಸಂಸ್ಥೆಯ ಅಭಿಯಾನಕ್ಕೆ ಕೈ ಜೋಡಿಸಿವೆ. ಯಾವೆಲ್ಲಾ ದೇಶಗಳು ಈ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿವೆಯೋ ಅಂತಹ ದೇಶಕ್ಕೆ ಸೈಬರ್ ಟಿಪ್ ಲೈನ್ ಮಾಹಿತಿ ಕಳುಹಿಸುತ್ತದೆ.ಭಾರತವೂ ಕೂಡ ಒಪ್ಪಂದ ಮಾಡಿಕೊಂಡಿದ್ದು,
ನಮ್ಮ ದೇಶದಲ್ಲಿ ಮಕ್ಕಳ ಅಶ್ಲೀಲ ವೀಡಿಯೋ ಪೋಟೋ ನೋಡುವುದು ಡೌನ್‌ಲೋಡ್ ಮಾಡುವುದು ಫಾರ್ವರ್ಡ್ ಮಾಡುವುದು ಅಪರಾಧವಾಗಿದೆ. ಹೀಗಾಗಿ ಇಂಟರ್ನೆಟ್ನಲ್ಲಿ ಹರಿದಾಡುವ ವಿಡಿಯೋ ಎಲ್ಲಿಂದ ಅಪ್ಲೋಡ್ ಆಗ್ತಿದೆ, ಯಾವ ಸ್ಥಳ ಹಾಗೂ ಅದರ ಮೂಲ ಮತ್ತು ಅದು ಎಲ್ಲಿವರೆಗೂ ಹರಿದಾಡಿದೆ ಎಂಬಿತ್ಯಾದಿ ಮಾಹಿತಿಯನ್ನು ನೀಡುತ್ತದೆ.
ಸಾರ್ವಜನಿಕರ ಗಮನಕ್ಕೆ | 14 ನೇ ತಾರೀಖು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಪವರ್ ಕಟ್
ಹಿಂದೊಮ್ಮೆ ಹೀಗೇ ಅಮೆರಿಕಾ ದೇಶದಿಂದ ಕೇಂದ್ರ ಸರ್ಕಾರಕ್ಕೆ ಮಾಹಿತಿಯೊಂದು ಬಂದಿತ್ತು. ಆ ಮಾಹಿತಿಯು ತುರ್ತಾಗಿ ರಾಜ್ಯ ಸರ್ಕಾರಕ್ಕೆ ರವಾನೆಯಾಗಿತ್ತು. ಅಲ್ಲಿಂದ ನೇರವಾಗಿ ಶಿವಮೊಗ್ಗ ಸೈಬರ್ ಕ್ರೈಂ ವಿಭಾಗಕ್ಕೆ ಸಂದೇಶ ಹಾಗೂ ಅದರ ಜೊತೆಗಿದ್ದ ಮಾಹಿತಿ ರವಾನೆಯಾಗಿತ್ತು. ಅಂದಿನ ಸಿಇಎನ್ ಠಾಣೆಯ ತನಿಖಾಧಿಕಾರಿಯಾದ ಕೆ.ಟಿ ಗುರುರಾಜ್, ಪ್ರಕರಣ ಕೈಗೆತ್ತಿಕೊಂಡು ತಾಂತ್ರಿಕ ಸಾಕ್ಷ್ಯಗಳನ್ನು ಟ್ರೇಸ್ ಮಾಡಲು ಆರಂಭಿಸಿದರು. ಹೀಗೆ ಮೂಲ ಹುಡುಕಿ ಹೊರಟಾಗ ಸೊರಬದ ಊರೊಂದರಲ್ಲಿ ಶಿಕ್ಷಕನಾಗಿದ್ದ ತಿಮ್ಮಪ್ಪ ಎಂಬಾತನ ಸುಳಿವು ಗೊತ್ತಾಗುತ್ತದೆ.
ಆತನ ಹಿನ್ನೆಲೆ ಹಾಗೂ ಆತನ ಕುಕೃತ್ಯಗಳನ್ನು ತನಿಖೆ ಮಾಡ್ತಿದ್ದಾರೆ. ಆತನಿಂದ ಆರು ಅಪ್ರಾಪ್ತರು ದೌರ್ಜನ್ಯಕ್ಕೆ ಒಳಗಾಗಿದ್ರು ಎಂಬ ಮಾಹಿತಿ ಲಭ್ಯವಾಗುತ್ತದೆ. ಆತ, ಮಕ್ಕಳನ್ನು ಸೆಕ್ಸ್ಗಾಗಿ ಬಳಸಿಕೊಂಡು, ಅದರ ವಿಡಿಯೋವನ್ನು ಸಹ ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡ್ತಿದ್ದ ಎಂಬುದು ಸಹ ಗೊತ್ತಾಗುತ್ತದೆ. ಸಾಕ್ಷ್ಯ ಸಮೇತ ಆತನನ್ನು ಬಂಧಿಸಿದ್ದ ಗುರುರಾಜ್ರವರು, ನಂತರ ಚಾರ್ಜ್ಶೀಟ್ ಹಾಕಿ, ಆತನಿಗೆ ಶಿಕ್ಷೆಯಾಗಿಸುವಲ್ಲಿ ಶ್ರಮವಹಿಸುತ್ತಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ನ್ಯಾಯಾಲಯ ತೀರ್ಪಿನಲ್ಲಿ ಏನಿದೆ: ಸೊರಬ ತಾಲ್ಲೂಕಿನ 42 ವರ್ಷದ ತಿಮ್ಮಪ್ಪನ ವಿರುದ್ದ 12-01-2020 ರಂದು, ಶಿವಮೊಗ್ಗ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದ ಸಂಬಂಧ ತೀರ್ಪು ನೀಡಿತ್ತು. Addl District and Sessions Judge, FTSC–I (POCSO) Shivamogga ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಶ್ರೀಮತಿ ಲತಾ ರವರು ದಿನಾಂಕ 30-09-2022 ರಂದು ಆರೋಪಿ ಶಿಕ್ಷೆ ವಿಧಿಸಿದ್ದರು.
20 ವರ್ಷ ಶಿಕ್ಷೆ : ಶಿಕ್ಷಕ ತಮ್ಮಪ್ಪನ ವಿರುದ್ಧ, ಪೋಕ್ಸೋ ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಟ್ಟು ರೂ. 1,44,000/- ದಂಡ, ದಂಡವನ್ನು ಕಟ್ಟಲು ವಿಫಲನಾದರೆ, 3 ವರ್ಷಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿದ್ದರು. ಅಷ್ಟೆ ಅಲ್ಲದೆ, ಕೋರ್ಟ್, ಒಂದು ಸಂಸ್ಥೆಯಿಂದ ಈ ವಿಚಾರ ಹೊರಕ್ಕೆ ಬರದಿದ್ದರೇ, ಇನ್ನಷ್ಟು ಮಕ್ಕಳ ಭವಿಷ್ಯ ಹಾಳಾಗುತ್ತಿತ್ತು. ಹಾಗೂ ಗುರುರಾಜ್ರವರ ತನಿಖೆಯನ್ನು ಕೋರ್ಟ್ ಪ್ರಶಂಸಿಸಿತ್ತು.
ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive
ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್ನ ಲಿಂಕ್ಗೆ ಕ್ಲಿಕ್ ಮಾಡಿ : Whatsapp
