ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

ಸಕ್ರೆಬೈಲ್​ ಆನೆ ಕ್ಯಾಂಪ್​ನ ಪ್ರಮುಖ ಆನೆಗಳ ಪೈಕಿ ಸಾಗರ (Sagar Elephant) ಹಾಗೂ ಭಾನುಮತಿ ಆನೆ (Bhanumathi Elephant) ದೇವನಹಳ್ಳಿ ಪ್ರವಾಸ ಕೈಗೊಂಡಿವೆ

ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು  |  ಏನಿದು ವಿಶೇಷ ಗೊತ್ತಾ |  Exclusive

ಭಾರತದ ಅಧ್ಯಕ್ಷತೆಯಲ್ಲಿ ಜಿ-20 ರಾಷ್ಟ್ರಗಳ ಒಟ್ಟು 200 ಸಭೆಗಳು ಭಾರತದಲ್ಲಿಯೇ ನಡೆಯಲಿವೆ. ಈ ನಿಟ್ಟಿನಲ್ಲಿ ನಾಳೆಯಿಂದ ಬೆಂಗಳೂರಿನಲ್ಲಿ ಮೂರು ದಿನ ಒಟ್ಟು 11 ಸರಣೆ ಸಭೆಗಳು ನಡೆಯಲಿವೆ. ಜಿ20 ಒಕ್ಕೂಟದ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ನಾಳಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಇದನ್ನು ಸಹ ಓದಿ : ಶಿರಾಳಕೊಪ್ಪ | ಆಸ್ತಿ ಕೊಡದ ಅಪ್ಪ ಮತ್ತೊಂದು ಮದುವೆಯಾದ, ಸಿಟ್ಗಿಗೆದ್ದ ಮಕ್ಕಳು ಸುಪಾರಿ ಕೊಟ್ಟು ತಂದೆಯನ್ನೆ ಕೊಂದರು

ಒಕ್ಕೂಟ ರಾಷ್ಟ್ರಗಳ ಸೆಂಟ್ರಲ್​ ಬ್ಯಾಂಕ್​ ಹಾಗೂ ಹಣಕಾಸು ಸಚಿವಾಲಯಗಳ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನೂ ಕರ್ನಾಟಕದಲ್ಲಿ ಒಟ್ಟು 14 ಸಭೆಗಳು ನಡೆಯಲಿದ್ದು ಬೆಂಗಳೂರಲ್ಲಿ 11 ಸಭೆ ನಿಕ್ಕಿಯಾಗಿದೆ. ಉಳಿದಂತೆ ಹಂಪಿಯಲ್ಲಿ 2 ಸಭೆ ಹಾಗೂ ಮೈಸೂರಿನಲ್ಲಿ ಒಂದು ಸಭೆ ನಡೆಯಲಿದೆ. 

ಇದನ್ನು ಸಹ ಓದಿ : ಶಿವಮೊಗ್ಗ ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಇವತ್ತು ಮಳೆ ಇನ್ನೂಜೋರು

ಸಕ್ರೆಬೈಲ್​ ಆನೆ ಬಿಡಾರದ ಆನೆಗಳ ಬೆಂಗಳೂರು ಪ್ರವಾಸ (Sakrabail Elephant Camp)

ಈ ನಡುವೆ ವಿಶೇಷ ಅಂದರೆ, ಸಕ್ರೆಬೈಲ್ ಆನೆ ಬಿಡಾರದ ಆನೆಗಳು ಸಹ ಜಿ-20 ಸಭೆಗಾಗಿ ಬೆಂಗಳೂರು ಪ್ರವಾಸವನ್ನು ಕೈಗೊಂಡಿವೆ. ಈಗಾಗಲೇ ಬಿಡಾರದಿಂದ ದೇವನಹಳ್ಳಿಗೆ ಹೋಗಿರುವ ಆನೆಗಳು, ಅಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ವೆಲ್​ಕಮ್​ ಮಾಡಲು ಸಿದ್ಧತೆ ಮಾಡಿಕೊಳ್ತಿವೆ. ಸಕ್ರೆಬೈಲ್​ ಆನೆ ಕ್ಯಾಂಪ್​ನ ಪ್ರಮುಖ ಆನೆಗಳ ಪೈಕಿ ಸಾಗರ (Sagar Elephant) ಹಾಗೂ ಭಾನುಮತಿ ಆನೆ  (Bhanumathi Elephant) ದೇವನಹಳ್ಳಿ ಪ್ರವಾಸ ಕೈಗೊಂಡಿವೆ. ಅಲ್ಲಿ ಬೀಡುಬಿಟ್ಟಿರುವ ಈ ಜೋಡಿ ಆನೆಗಳು ನಾಳೆ ಬೆಳಗ್ಗೆ ದೇವನಹಳ್ಳಿ  ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ (Devanahalli International Airport) ಬಂದಿಳಿಯುವ ವಿವಿಧ ದೇಶಗಳ ಪ್ರತಿನಿಧಿಗಳನ್ನು ಸ್ವಾಗತಿಸಲಿವೆ.

ಇದನ್ನು ನೋಡಿ : ಶಿವಮೊಗ್ಗದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್ ಹೇಗಿದೆ ಗೊತ್ತಾ? ವಿಡಿಯೋ ನೋಡಿ 

ಆನೆಗಳ ಮೂಲಕ ಹೂವಿನ ಹಾರ ಹಾಕಿ, ಅತಿಥಿಗಳನ್ನು ಬರಮಾಡಿಕೊಳ್ಳುವ ಸಲುವಾಗಿಯೇ ಸಕ್ರೆಬೈಲ್ ಆನೆ ಬಿಡಾರದಿಂದ ಆನೆಗಳನ್ನು ಕರೆಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯು ಸಹ ಆನೆಗಳೊಂದಿಗೆ ಬೆಂಗಳೂರಿಗೆ ತೆರಳಿದ್ದಾರೆ. 

ಮತ್ತಷ್ಟು ವಿಶೇಷತೆಯ ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp link