ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸ್ಯೆ ಜಾತ್ರೆಯ ಆರಂಭ/ ಇವತ್ತು ಪುಣ್ಯ ಸ್ನಾನ/ ನಾಳೆ ರಥೋತ್ಸವ/ ನಾಡಿದ್ದು ತೆಪ್ಪೋತ್ಸವ/ ವಿವರ ಇಲ್ಲಿದೆ ನೋಡಿ

ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ರಾಮೇಶ್ವರ ದೇವಾಲಯದ ಪಕ್ಕದಲ್ಲಿ ಮೂರು ದಿನಗಳ ಪರ್ಯಂತ ಅನ್ನದಾಸೋಹ ನಡೆಯಲಿದೆ. ಈ ಬಾರಿ 1 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ.

ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸ್ಯೆ ಜಾತ್ರೆಯ ಸಂಭ್ರಮ
ತೀರ್ಥಹಳ್ಳಿ ತೆಪ್ಪೋತ್ಸವ
1 / 7

1. ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸ್ಯೆ ಜಾತ್ರೆಯ ಸಂಭ್ರಮ

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಆರಂಭಗೊಂಡಿದೆ. ಚುರುಗುಟ್ಟುವ ಚಳಿಯ ನಡುವೆ ತೆಪ್ಪೋತ್ಸವದ ಸಂಭ್ರಮಕ್ಕೆ ತೀರ್ಥಹಳ್ಳಿ ಅಣಿಯಾಗಿದೆ. ಇವತ್ತಿನಿಂದ ಮೂರು ದಿನಗಳ ಕಾಲ ಏಳ್ಳಮಾವಾಸ್ಯೆ ಜಾತ್ರೆ ನಡೆಯಲಿದ್ದು, ತೀರ್ಥಹಳ್ಳಿಯಲ್ಲಿ ಜನ ಜಾತ್ರೆಯೇ ಸೇರಲಿದೆ. 

ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು ಎಸಿ ಆಗುವುದು ಬೇಡ/ ರಾಜ್ಯ ಸರ್ಕಾರಕ್ಕೆ ಒತ್ತಾಯ/ ಏನಿದು ಬೇಡಿಕೆ ವಿವರ ಇಲ್ಲಿದೆ ಓದಿ

ಯಾವಾಗ ಏನೇನು ಕಾರ್ಯಕ್ರಮ 

  • ಡಿಸೆಂಬರ್​ 23 : ತುಂಗಾ ನದಿಯ ರಅಮಕೊಂಡದಲ್ಲಿ ತೀರ್ಥಸ್ನಾನ, 
  • ಡಿಸೆಂಬರ್​ 24 : ದೇವರ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮ
  • ಡಿಸೆಂಬರ್​ 25 : ತೆಪ್ಪೋತ್ಸವ ಕಾರ್ಯಕ್ರಮ 

13 ಲಕ್ಷ ಬಜೆಟ್ ನಲ್ಲಿ ಎಳ್ಳಮಾವಾಸ್ಯೆ ಜಾತ್ರೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ತೆಪ್ಪೋತ್ಸವಕ್ಕಾಗಿ 5 ಲಕ್ಷ ಮೊತ್ತವನ್ನು  ಮೀಸಲು ಇಡಲಾಗಿದೆ.   ಎಳ್ಳಮಾವಾಸ್ಯೆ ಜಾತ್ರೆ (thirthahalli teppotsava) ಅಂಗವಾಗಿ ರಾಮೇಶ್ವರ ದೇವಾಲಯದ ಪಕ್ಕದಲ್ಲಿ ಮೂರು ದಿನಗಳ ಪರ್ಯಂತ ಅನ್ನದಾಸೋಹ ನಡೆಯಲಿದೆ. ಈ ಬಾರಿ 1 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ. ಇಷ್ಟೆ ಅಲ್ಲದೆ, ನದಿ ದಡದ ತೀರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

 ಇದನ್ನು ಸಹ ಓದಿ : ಹರತಾಳು ಹಾಲಪ್ಪರವರು ಶರಾವತಿ ಸಂತ್ರಸ್ತರಿಗಾಗಿ ಧರ್ಮಸ್ಥಳದಲ್ಲಿ ನ್ಯಾಯ ಕೇಳಲು ಹೋಗಿದ್ದಕ್ಕೆ ಕಾಂತಾರ ಮಹಿಮೆ ಕಾರಣ

ತುಂಗಾ ನದಿಯಲ್ಲಿ ಬೋಟಿಂಗ್ ವಿಶೇಷ!

ಇನ್ನೂ ಈ ಸಲ ಜಾತ್ರೆಗೆ ಬಂದವರಿಗೆ ತುಂಗಾನದಿಯಲ್ಲಿ ಬೋಟಿಂಗ್​ಗೂ ಅವಕಾಶ ಸಿಗಲಿದೆ.ಬೋಟಿಂಗ್​ ಸರ್ವೀಸ್ ಕಂಪನಿಯೊಂದು ನದಿಯಲ್ಲಿ ಬೋಟಿಂಗ್​ಗೆ ವ್ಯವಸ್ಥೆ ಮಾಡಿದ್ದು, ಅದಕ್ಕಾಗಿ ವ್ಯವಸ್ಥೆ ಮಾಡಿಕೊರ್ಳತಿದೆ. 

ತೀರ್ಥಹಳ್ಳಿ ಜಗಮಗ

ಎಳ್ಳಮಾವಾಸ್ಯೆ ಜಾತ್ರೆ ಸಂಭ್ರಮದಲ್ಲಿ ತೀರ್ಥಹಳ್ಳಿ ಪೇಟೆಯಲ್ಲಿ ದೀಪಾಲಂಕಾರ ಮಾಡಲಾಗಿದೆ. ತುಂಗಾ ಸೇತುವೆಯಿಂದ ಹಿಡಿದು ಪ್ರಮುಖ ಕಟ್ಟಡಗಳು ಹಾಗೂ ಮಾರ್ಗದಲ್ಲಿ ದೀಪಗಳನ್ನ ಅಳವಡಿಸಲಾಗಿದ್ದು, ಕತ್ತಲಾದರೇ ತೀರ್ಥಹಳ್ಳಿಯಲ್ಲಿ ವಿದ್ಯುತ್ ದೀಪಗಳು ಜಗಮಗಿಸುತ್ತಿವೆ.

ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆ, ನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT

ಇನ್ನೂ ತೀರ್ಥಹಳ್ಳಿಯ ರಥ ಬೀದಿಯಲ್ಲಿ ವಿವಿದ ಕಡೆಗಳಿಂದ ಬಂದಿರುವ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಓಪನ್ ಮಾಡಿದ್ದಾರೆ. ಆಟಿಕೆ ವಹಿವಾಟಿನಿಂದ ಹಿಡಿದು ಕಾಸ್ಮೆಟಿಕ್ಸ್​ ಸಾಮಾಗ್ರಿಗಳ ಮಾರಾಟದವರೆಗೂ ತೀರ್ಥಹಳ್ಳಿಯಲ್ಲಿ ಮೂರು ದಿನ ಭರ್ಜರಿ ವ್ಯಾಪಾರ ನಡೆಯಲಿದೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Next