ಶಿವಮೊಗ್ಗ ಫ್ರೀಡಂಪಾರ್ಕ್​ಗೆ ಹೆಸರು! ಶಾಸಕ & ಸಚಿವರ ಭಿನ್ನ ಅಭಿಪ್ರಾಯ! ಸಿದ್ದರಾಮಯ್ಯರಿಂದ ಅಂತಿಮ ತೀರ್ಮಾನ ಏನದು?

Shimoga Freedom Park to be renamed, MLA and Minister differ at Yuvanidhi event

ಶಿವಮೊಗ್ಗ ಫ್ರೀಡಂಪಾರ್ಕ್​ಗೆ ಹೆಸರು! ಶಾಸಕ &  ಸಚಿವರ ಭಿನ್ನ ಅಭಿಪ್ರಾಯ! ಸಿದ್ದರಾಮಯ್ಯರಿಂದ ಅಂತಿಮ  ತೀರ್ಮಾನ ಏನದು?
Shimoga Freedom Park to be renamed, MLA and Minister differ at Yuvanidhi event

SHIVAMOGGA |  Jan 12, 2024  | ಶಿವಮೊಗ್ಗದ ಫ್ರೀಡಂಪಾರ್ಕ್​ನಲ್ಲಿ ನಡೆಯುತ್ತಿರುವ ಯುವನಿಧಿ ಕಾರ್ಯಕ್ರಮದಲ್ಲಿ ಫ್ರೀಡಂಪಾರ್ಕ್​ ಗೆ ಹೆಸರಿಡುವ ವಿಚಾರ ಸಹ ಚರ್ಚೆಯಾಯ್ತು. ಅಷ್ಟೆ ಅಲ್ಲದೆ, ಈ ಸಂಬಂಧ ಶಿವಮೊಗ್ಗ ನಗರ ಶಾಸಕ ಹಾಗೂ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು

ಕಾರ್ಯಕ್ರಮದ ಆರಂಭದಲ್ಲಿಯೇ ಮಾತನಾಡಿದ ಉಸ್ತುವಾರಿ ಸಚಿವರು ಮಲೆನಾಡಿನ ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯರ ಮುಂದೆ ಇಡುತ್ತಾ, ಶಿವಮೊಗ್ಗದ ಫ್ರೀಡಂಪಾರ್ಕ್​ ಗೆ ಅಲ್ಲಮಪ್ರಭುರವರ ಹೆಸರು ಇಡಬೇಕು ಎಂದು ವಿನಂತಿಸಿದರು. ಈ ಸಂಬಂಧ ಮಲೆನಾಡಿಗರ ಪರವಾಗಿ ಕೇಳುತ್ತೇವೆ ಎಂದು ಮನವಿ ಸಲ್ಲಿಸಿದರು. 

ಈ ಬಳಿಕ ಮಾತನಾಡಿದ ಶಾಸಕ ಚನ್ನಬಸಪ್ಪರವರು ಅಲ್ಲಮಪ್ರಭುರವರನ್ನು ನಾವು ಎಲ್ಲಾ ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಿದ್ದೇವೆ. ಆದರೆ ಈಗಾಗಲೇ ಹೆಸರನ್ನು ಇಟ್ಟಿರುವ ಫ್ರೀಡಂಪಾರ್ಕ್​ಗೆ ಮತ್ತೊಮ್ಮೆ ಹೆಸರನ್ನ ಇಡಬೇಕೆ, ಅದರ ಅಗತ್ಯವಿದೆಯೇ ಎಂದು ಸಿಎಂ ಸಿದ್ದರಾಮಯ್ಯರವರ ಸರ್ಕಾರ ಪರಿಶೀಲಿಸಿ ತೀರ್ಮಾನಿಸಲಿ ಎಂದು ತಿಳಿಸಿದರು. 

ಈ ಅಭಿಪ್ರಾಯಗಳು ಕಾರ್ಯಕ್ರಮದಲ್ಲಿ ಚೂರು ಗಮನಸೆಳೆಯತಷ್ಟೆ ಅಲ್ಲದೆ ಕಾರ್ಯಕರ್ತರ ಹೂ …ಹಾ …ಹೋ ..ಹೇ ಎಂಬ ಹೂಂಕಾರಗಳಿಗೆ ಸಾಕ್ಷಿಯಾಯ್ತು. 

ಬಳಿಕ ತಮ್ಮ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ರವರು  ಹಳೇ ಜೈಲ್​ನ್ನ ಫ್ರೀಡಂಪಾರ್ಕ್​ ಆಗಿ ಶಿಫ್ಟ್ ಮಾಡಿದ್ದು ನಾನು ಮುಖ್ಯಮಂತ್ರಿಯಾಗಿದ್ದಾಗ. ಮಧು ಬಂಗಾರಪ್ಪನವರು ಹೇಳಿದ್ದಾರೆ. ಫ್ರೀಡಂಪಾರ್ಕ್​ಗೆ ಅಲ್ಲಮಪ್ರಭುರವರ ಹೆಸರು ಇಡಬೇಕು ಎಂದಿದ್ದಾರೆ.

ಚನ್ನಬಸಪ್ಪನವರೇ ಅಲ್ಲಮಪ್ರಭುರವರು 12 ಶತಮಾನದವರು, ನಿಮ್ಮ ಊರಿನವರು. ಇವತ್ತು ಏನಾದರೂ ಅನುಭವ ಮಂಟಪ ಇದೆಯಲ್ಲಾ, ಇವತ್ತಿನ ಪಾರ್ಲಿಮೆಂಟ್, ವಿಧಾನಸಭೆ ಅಲ್ಲಿಂದಲೇ ಆರಂಭವಾಗಿದ್ದು. ಅದರ ಅಧ್ಯಕ್ಷರಾಗಿದ್ದವರು ಅಲ್ಲಮಪ್ರಭುರವರು. ಹಾಗಾಗಿ ಫ್ರೀಡಂಪಾರ್ಕ್​ಗೆ ಅವರ ಹೆಸರು ಇಡುವುದು ಸೂಕ್ತ ಎಂದು ಭಾವಿಸುತ್ತೇನೆ ಎಂದರು. 

 

ಬಹಳ ಜನ ಟೀಕೆ ಮಾಡುತ್ತಾರೆ. ಐದು ಗ್ಯಾರಂಟಿಗಳು ಎಲ್ಲಿ ಜಾರಿಯಾದವು , ನೀವೆ ಸಾಕ್ಷಿ ನಾನು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ನೀವು ಪರಿಶೀಲಿಸಿ ಇವತ್ತು ಜಾರಿಯಾಗಿದ್ದು ಐದು ಗ್ಯಾರಂಟಿಗಳಲ್ಲಿ ಒಂದು ಎಂದು ಸಿದ್ದರಾಮಯ್ಯರವರು ಜೈ ಕರ್ನಾಟಕ ಎಂದು ಘೋಷಿಸಿ ತಮ್ಮ ಭಾಷಣ ಮುಗಿಸಿದರು