ಕೇಂದ್ರ ಗೃಹಸಚಿವ ಅಮಿತ್ ಶಾ ರನ್ನ ಭೇಟಿಯಾದ ಬಿ.ವೈ. ವಿಜಯೇಂದ್ರ
Union Home Minister Amit Shah met with Karnataka BJP President ByVijayendra
SHIVAMOGGA | MALENADUTODAY NEWS | Jun 26, 2024 ಮಲೆನಾಡು ಟುಡೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ರನ್ನ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೊಸದಿಲ್ಲಿಯಲ್ಲಿ ನಿನ್ನೆದಿನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿಯಾದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕೆ ಮತ್ತೆ ಸೇರಿದ ಅಮಿತ್ ಶಾರವರನ್ನ ಅಭಿನಂದಿಸಿದ ರಾಜ್ಯಾಧ್ಯಕ್ಷ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಚರ್ಚೆ ಮಾಡಿದರು. ಈ ವೇಳೆ ಕರ್ನಾಟಕದ ಫಲಿತಾಂಶ ಕುರಿತು ಸಮಾಲೋಚನೆ ನಡೆದಿದೆ ಎನ್ನಲಾಗಿದೆ. ಮಾತುಕತೆಯ ಪೂರ್ಣ ವಿವರ ಲಭ್ಯವಾಗಿಲ್ಲವಾದರೂ ವಿಜಯೇಂದ್ರರವರಿಗೆ ಅಮಿತ್ ಶಾ ಅಭಿನಂದನೆ ಸಲ್ಲಿಸಿದ್ದಾರೆ ಎನ್ನಲಾಗಿದೆ
ದೇಶದ ಸುಭದ್ರತೆಗಾಗಿ ದಿಟ್ಟ ಹೆಜ್ಜೆಗಳನ್ನಿಟ್ಟು ಇತಿಹಾಸ ನಿರ್ಮಿಸಿ ಮೋದಿ ಜೀ ಅವರ ಸಂಪುಟಕ್ಕೆ ಮತ್ತೆ ಸೇರ್ಪಡೆಗೊಂಡ ಮಾನ್ಯ ಗೃಹ ಸಚಿವ @AmitShah ಅವರನ್ನು ಇಂದು ನವದೆಹಲಿಯ ಅವರ ಕಛೇರಿಯಲ್ಲಿ ಭೇಟಿಯಾಗಿ ಆತ್ಮೀಯವಾಗಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಕಳೆದ ಲೋಕಸಭಾ ಚುನಾವಣೆಯ ಕರ್ನಾಟಕದ ಫಲಿತಾಂಶದ ಕುರಿತು ತೃಪ್ತಿ ವ್ಯಕ್ತಪಡಿಸಿದ… pic.twitter.com/d7nCuj0nCK — Vijayendra Yediyurappa (@BYVijayendra) June 25, 2024
Union Home Minister Amit Shah met with Karnataka BJP President By Vijayendra.