ಬಣ್ಣ ಬಳಿಯುತ್ತಿದ್ದಾಗ ಕರೆಂಟ್‌ ಶಾಕ್‌ | ಕಟ್ಟಡದಲ್ಲಿಯೇ ನೇತಾಡಿದ ಕಾರ್ಮಿಕರು | ದಾಖಲಾಗದ ದೂರು ? ಕಾರಣ ನಿಗೂಢ

Two persons were injured due to electric shock in Shivamogga city

ಬಣ್ಣ ಬಳಿಯುತ್ತಿದ್ದಾಗ ಕರೆಂಟ್‌ ಶಾಕ್‌ | ಕಟ್ಟಡದಲ್ಲಿಯೇ ನೇತಾಡಿದ ಕಾರ್ಮಿಕರು | ದಾಖಲಾಗದ ದೂರು ? ಕಾರಣ ನಿಗೂಢ
electric shock , Shivamogga city

SHIVAMOGGA | MALENADUTODAY NEWS | Jun 26, 2024  ಮಲೆನಾಡು ಟುಡೆ 

ಮಳೆಯಾಗುತ್ತಿರುವಂತೆಯೇ ವಿದ್ಯುತ್‌ ಅವಘಡಗಳಂತಹ ಘಟನೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಆರ್‌ಎಂಸಿ ಯಾರ್ಡ್‌ನ ಗೀತಾ ಸ್ಟೋರ್ ಬಳಿ ಕಟ್ಟಡವೊಂದಕ್ಕೆ  ಬಣ್ಣ ಬಳಿಯುತ್ತಿದ್ದ ಇಬ್ಬರು, ವಿದ್ಯುತ್ ಶಾಕ್‌ ನಿಂದ  ತೀವ್ರವಾಗಿ ಗಾಯಗೊಂಡಿದ್ದಾರೆ.ಗಣೇಶ್ ಹಾಗೂ ರಾಜು ನಾಯ್ಕ ಗಾಯಗೊಂಡವರು. 

ಇವರಿಬ್ಬರು ನಿನ್ನೆ ದಿನ ಕಟ್ಟಡದ ಹೊರಗೆ ಪೇಂಟ್ ಮಾಡುತ್ತಿದ್ದರು. ಇದಕ್ಕಾಗಿ ದೊಡ್ಡ ಎತ್ತರದ ಸ್ಡ್ಯಾಂಡ್‌ ಸಜ್ಜಾ ನಿರ್ಮಿಸಿಕೊಂಡಿದ್ದರು. ಬಣ್ಣ ಬಳಿಯುತ್ತಿದ್ದಾಗ. ಸ್ಟ್ಯಾಂಡ್‌ಗೆ ಸಮೀಪವೇ ಇದ್ದ ಟ್ರಾನ್ಸ್‌ಫರ್ಮರ್‌ ನ ವೈರ್‌ನಿಂದ ಕರೆಂಟ್‌ ಪಾಸಾಗಿದೆ. ತಕ್ಷಣವೆ ಇಬ್ಬರ ಪೈಕಿ ಓರ್ವ ಸ್ಟ್ಯಾಂಡ್‌ನಲ್ಲಿ ಸಿಕ್ಕಿಬಿದ್ದು ತಲೆಕೆಳಗಾಗಿದ್ದ, ಇನ್ನೊಬ್ಬ ಕೆಳಕ್ಕೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂದ್ದ. ಇನ್ನೂ ಕರೆಂಟ್‌ ಶಾಕ್‌ನ ಬೆನ್ನಲ್ಲೆ ಟ್ರಿಪ್‌ ಆದ್ದರಿಂದ ಸ್ಥಳೀಯರು ಇಬ್ಬರು ಕಾರ್ಮಿಕರನ್ನ ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇನ್ನೂ ಸುರಕ್ಷತೆಯನ್ನು ಕೈಗೊಳ್ಳದೆ ಕಾರ್ಮಿಕರನ್ನ ಮಳೆಯ ನಡುವೆ ಕೆಲಸಕ್ಕೆ ಹಚ್ಚಿದವರು ಯಾರು ಎಂಬುದು ಪತ್ತೆಯಾಗಿಲ್ಲ. ಮೇಲಾಗಿ ಈ ಸಂಬಂಧ ಇದುವರೆಗೂ ಪೊಲೀಸರು ಕೇಸ್‌ ದಾಖಲಿಸಿಲ್ಲ. ಸಂತ್ರಸ್ತರ ಕಡೆಯಿಂದ ದೂರು ಬಂದಿಲ್ಲ ಎಂದು ಹೇಳಲಾಗುತ್ತಿದೆಯಾದರೂ ಸಹ ಪ್ರಕರಣ ದಾಖಲಾಗದ ಹಾಗೆ ನೋಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಸ್ಥಳೀಯರದ್ದಾಗಿದೆ. ಮೇಲಾಗಿ ಕಟ್ಟಡವೂ ಸಹ ಪ್ರಭಾವಿ ವ್ಯಕ್ತಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ.