ಅಣಬೆ ಸಾಂಬಾರ್‌ ಜೊತೆ ಊಟದ ಮಾಡಿದ ಬಳಿಕ ಅಸ್ವಸ್ಥರಾದ ಐವರು ಮಕ್ಕಳು

Five children from Kittadahalli village in Shikaripura taluk, Shivamogga district, fell ill after eating mushroom sambar. They were admitted to Shikaripura Hospital and later shifted to McGann Hospital in Shivamogga for treatment. The children have now recovered.

ಅಣಬೆ ಸಾಂಬಾರ್‌ ಜೊತೆ ಊಟದ ಮಾಡಿದ ಬಳಿಕ ಅಸ್ವಸ್ಥರಾದ ಐವರು ಮಕ್ಕಳು
McGann Hospital ,mushroom sambar

SHIVAMOGGA | MALENADUTODAY NEWS | May 28, 2024  ಮಲೆನಾಡು ಟುಡೆ 

ಅಣಬೆ ಸಾಂಬಾರ್‌ ಬಳಸಿ ಊಟ ಮಾಡಿದ ಐವರು ಮಕ್ಕಳು ಅಸ್ವಸ್ಥರಾದ ಬಗ್ಗೆ ಶಿವಮೊಗ್ಗ ಜಿಲ್ಲ ಶಿಕಾರಿಪುರ ತಾಲ್ಲೂಕು ಕಿಟ್ಟದಹಳ್ಳಿಯಲ್ಲಿ ವರದಿಯಾಗಿದೆ. ತಕ್ಷಣವೇ ಮಕ್ಕಳನ್ನು ಶಿಕಾರಿಪುರ ಆಸ್ಪತ್ರೆಗೆ ಬಳಿಕ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ಮಕ್ಕಳು ಚೇತರಿಸಿಕೊಂಡಿದ್ದಾರೆ. 

ನಿನ್ನೆ ಸೋಮವಾರ ಈ ಘಟನೆ ನಡೆದಿದೆ. ಸ್ಥಳೀಯವಾಗಿ ಬೆಳೆದಿದ್ದ ಅಣಬೆಗಳನ್ನು ಕಿತ್ತುತಂದು ಇಲ್ಲಿನ ಕುಟುಂಬವೊಂದು ಸಾಂಬಾರ್‌ ಮಾಡಿದೆ. ಇದನ್ನು ಮಧ್ಯಾಹ್ನ ಊಟದೊಂದಿಗೆ ತಿಂದ ಐವರು ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಶಿಕಾರಿಪುರ ಆಸ್ಪತ್ರೆಗೆ ಕಳುಹಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ವೈದ್ಯರು ಇವತ್ತು ಡಿಸ್ಚಾರ್ಜ್‌ ಮಾಡುವುದಾಗಿ ತಿಳಿಸಿದ್ದಾರೆ. 

ಇನ್ನೂ ಅಣಬೆ ಸಾಂಬಾರ್‌ ಸೇವಿಸಿದ ಮಕ್ಕಳಿಗಷ್ಟೆ ವ್ಯತ್ಯಾಸವಾಗಿದ್ದು, ಮನೆಯ ಸದಸ್ಯರಿಗೆ ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಈ ಬಗ್ಗೆ ರಾಜ್ಯದ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ನಟರಾಜ್ ಪ್ರಸ್ತುತ ಎಲ್ಲಾ ಮಕ್ಕಳು ಆರೋಗ್ಯದಿಂದ ಇದ್ದಾರೆ ಎಂದು ತಿಳಿಸಿದ್ದಾರೆ.  