ಶಿವಮೊಗ್ಗಕ್ಕಿಂದು ಮಧು ಬಂಗಾರಪ್ಪ | ಡಿಸಿಸಿ ಬ್ಯಾಂಕ್‌ ಎಲೆಕ್ಷನ್‌ ಗೆಲ್ಲಲು ಮಾಡ್ತಾರಾ ರಣತಂತ್ರ

Minister Madhu Bangarappa will visit Shivamogga today. He will hold a meeting with district-level officials in the morning and then visit the residence of late M.B. Bhanuprakash, former MLC, to offer condolences to his family. Additionally, Minister Bangarappa is expected to hold talks with Congress leaders to address the competition in the DCC Bank director elections.

ಶಿವಮೊಗ್ಗಕ್ಕಿಂದು ಮಧು ಬಂಗಾರಪ್ಪ | ಡಿಸಿಸಿ ಬ್ಯಾಂಕ್‌ ಎಲೆಕ್ಷನ್‌ ಗೆಲ್ಲಲು ಮಾಡ್ತಾರಾ ರಣತಂತ್ರ
Minister Bangarappa, Minister Madhu Bangarappa, Shivamogga today,M.B. Bhanuprakash, former MLC, DCC Bank director elections

SHIVAMOGGA | MALENADUTODAY NEWS | Jun 21, 2024  ಮಲೆನಾಡು ಟುಡೆ

ಶಿವಮೊಗ್ಗಕ್ಕೆ ಇಂದು ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ಆಗಮಿಸಲಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ಕೃತಜ್ಞತಾ ಸಭೆಗೆ ಆಗಮಿಸಿದ್ದ ಅವರು ಆನಂತರ ಅಧಿಕೃತ ಭೇಟಿ ನೀಡಿರಲಿಲ್ಲ. ಇದೀಗ ಇವತ್ತು ಶಿವಮೊಗ್ಗಕ್ಕೆ ಆಗಮಿಸಲಿದ್ದು ಅವರ ಕಾರ್ಯಕ್ರಮದ ವಿವರ ಹೀಗಿದೆ. 

ಸಚಿವ ಮಧು ಬಂಗಾರಪ್ಪ ಜೂನ್ 21ರಂದು ಶಿವಮೊಗ್ಗ ನಗರಕ್ಕೆ ಬರಲಿದ್ದಾರೆ. ಬೆಳಿಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. 

ಆ ಬಳಿಕ  ಮಧ್ಯಾಹ್ನ 1 ಗಂಟೆಗೆ ಇಲ್ಲಿನ ಮತ್ತೂರಿನಲ್ಲಿರುವ ವಿಧಾನಪರಿಷತ್ ಮಾಜಿ ಸದಸ್ಯ, ದಿವಂಗತ ಎಂ.ಬಿ.ಭಾನುಪ್ರಕಾಶ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ. 

ಇನ್ನೂ ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಚುನಾವಣೆಯಲ್ಲಿ ಹಲವು ಕಾಂಗ್ರೆಸ್‌ ದಿಗ್ಗಜರೇ ಪರಸ್ಪರ ಪೈಪೋಟಿಗೆ ಇಳಿದಿರುವುದು ಜಿಲ್ಲಾ ಕಾಂಗ್ರೆಸ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಹಿನ್ನಡೆಯಾಗಬಾರದು ಎನ್ನುವ ಕಾರಣಕ್ಕೆ ಸಚಿವ ಮಧು ಬಂಗಾರಪ್ಪ ನಾಯಕರ ಜೊತೆಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಫಲವಾಗಿ ಕೆಲವರು ಇಂದು ನಾಮಪತ್ರ ಹಿಂಪಡೆಯುವ ನಿರೀಕ್ಷೆಯು ಇದೆ ಎನ್ನಲಾಗುತ್ತಿದೆ. 