TODAY DARSHAN ARREST | ರೇಣುಕಾಸ್ವಾಮಿ ಯಾರು? ಕಿಡ್ನ್ಯಾಪ್‌ ಆಗಿದ್ದೇಗೆ? ಶೆಡ್‌ನಲ್ಲಿ ಕೊಲೆ ನಡೆದಿದ್ದೇಗೆ? ದರ್ಶನ್‌ ವಿರುದ್ದದ ಇನ್ನೊಂದು ಆರೋಪವೇನು?

The incident raises questions about Darshan's intentions and the role of Pavitra Gowda in the events.

TODAY DARSHAN ARREST | ರೇಣುಕಾಸ್ವಾಮಿ ಯಾರು? ಕಿಡ್ನ್ಯಾಪ್‌ ಆಗಿದ್ದೇಗೆ?  ಶೆಡ್‌ನಲ್ಲಿ ಕೊಲೆ ನಡೆದಿದ್ದೇಗೆ? ದರ್ಶನ್‌ ವಿರುದ್ದದ ಇನ್ನೊಂದು ಆರೋಪವೇನು?
Actor Darshan Arrested , Challenging Star Darshan, Renukaswamy, Pavitra Gowda, Vinay

SHIVAMOGGA | MALENADUTODAY NEWS | Jun 11, 2024 ಮಲೆನಾಡು ಟುಡೆ 

ನೆಚ್ಚಿನ ನಟನ ಸಂಸಾರ ಚೆನ್ನಾಗಿರಲಿ ಎಂದು ಅಭಿಮಾನಿ ಬಯಸಿದ್ದೇ ತಪ್ಪಾ? ಅಭಿಮಾನಿಗೆ ಚೋಕ್ ಕೊಡಲಿ ಹೋಗಿ ಯಡವಟ್ಟು ಮಾಡಿಕೊಂಡರೇ ದರ್ಶನ್? ಜೂನ್ 9 ನೇ ತಾರೀಖು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿ ಸಾಕ್ಷ್ಯ ನಾಶ ಪಡಿಸಿದ ಘಟನಾವಳಿಗಳಿಗೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಸೆಕ್ಷನ್ ಗಳ ಅಡಿ ಕೇಸ್ ದಾಖಲಿಸಿದ್ದಾರೆ. ಕೊಲೆಯಾದ ರೇಣುಕಾಸ್ವಾಮಿ ಚಿತ್ರದುರ್ಗದಲ್ಲಿ ಅಪೋಲೋ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದ. 

 

ಮದುವೆಯಾಗಿ ವರ್ಷ ಕಳೆದಿರುವ ಹೊತ್ತಿನಲ್ಲಿ ಪತ್ನಿ ಮೂರು ತಿಂಗಳ ಗರ್ಭಿಣಿಯಾಗಿದ್ದಾರೆ. ರೇಣುಕಾಸ್ವಾಮಿ ಕೂಡ ದರ್ಶನ್ ಅಭಿಮಾನಿಯಾಗಿದ್ದಾನೆ. ದರ್ಶನ್ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದನ್ನು ಸಹಿಸದ ಅಭಿಮಾನಿ ದರ್ಶನ್ ಮತ್ತು ಪವಿತ್ರಗೌಡರಿದ್ದ ಪೋಟೋ ಮೆಸೆಜ್ ಗಳಿಗೆ ಅಸಭ್ಯವಾಗಿ ರಿಪ್ಲೆ ಮಾಡಿದ್ದ ಎನ್ನಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಡಿಎಂ ಮಾಡಿದ್ದ ಹಿನ್ನೆಲೆಯಲ್ಲಿ ಕೆರಳಿದ ದರ್ಶನ್ ಚಿತ್ರದುರ್ಗದಲ್ಲಿರುವ ತನ್ನ ಅಭಿಮಾನಿ ಬಳಗದ ಅಧ್ಯಕ್ಷನ ಮೂಲಕ ರೇಣುಕಾಸ್ವಾಮಿ ಲೊಕೇಷನ್ ಪತ್ತೆ ಮಾಡಿದ್ದರು ಎಂಬುದು ಮೂಲಗಳ ಮಾಹಿತಿ.

 

ಆಬಳಿಕ ಒಂಬತ್ತನೇ ತಾರೀಖು ಬೈಕ್ ನಲ್ಲಿ ಬರುತ್ತಿದ್ದ ರೇಣುಕಾಸ್ವಾಮಿ ಯನ್ನು ದರ್ಶನ್ ಸಹಚರರು ಪುಸಲಾಯಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಅಲ್ಲಿಂದ ದರ್ಶನ್‌ ಆಪ್ತನಿಗೆ ಸೇರಿದ ಶೆಡ್ ಗೆ ಕರೆತಂದು ಕೂಡಿಹಾಕಿದ್ದಾರೆ. ತದನಂತರ  ದರ್ಶನ್‌ನ ಬೌನ್ಸರ್ ಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ರಾಡ್‌ಗಳಿಂದ ಹಲ್ಲೆ ಮಾಡಿರುವ, ಕಬ್ಬಿಣ ಕಾಸಿ ಸುಟ್ಟಿರುವ ಹಾಗೂ ಮಾರಣಾಂತಿಕ ಆಯುದದಿಂದ ಹಲ್ಲೆ ಮಾಡಿ ವಿಕೃತವಾಗಿ ಟಾರ್ಚರ್‌ ನೀಡಿರುವ ಆರೋಪವನ್ನ ಪೊಲೀಸರು ಮಾಡಿದ್ದಾರೆ. ಇದೆಲ್ಲವೂ ದರ್ಶನ್‌ ಸಮ್ಮುಖದಲ್ಲಿಯೇ ನಡೆದಿದೆ ಎಂದು ಹೇಳಲಾಗಿದೆ. ಅಥವಾ ದರ್ಶನ್‌ ಸಹ ಈ ವೇಳೆ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. 

 

ಇನ್ನೊಂದು ಮೂಲಗಳ ಪ್ರಕಾರ,  ದರ್ಶನ್ ಗೆ ನಿಜಕ್ಕೂ ರೇಣುಕಾಸ್ವಾಮಿಯನ್ನು ಕೊಲೆ ಮಾಡುವ ಉದ್ದೇಶವಿತ್ತೇ ಎನ್ನುವುದು ಇಲ್ಲಿ ಪ್ರಶ್ನೆಯಾಗಿ ಉಳಿಯುತ್ತದೆ. ಯಾಕೆಂದರೆ ವಿವಾದಗಳಿಂದಲೇ ಬಂದಂತ ಸಂದರ್ಭದಲ್ಲಿ ಯಾವ ವಿರೋಧಿಗಳನ್ನು ಕೊಲೆ ಮಾಡುವ ಮಟ್ಟಕ್ಕೆ ದರ್ಶನ್ ಹೋಗಿರಲಿಲ್ಲ. ಆದರೆ ಪವಿತ್ರ ಗೌಡ ಬಗ್ಗೆ ರೇಣುಕಾಸ್ವಾಮಿ ಹಾಕಿದ ಕಮೆಂಟ್ ಗಳಿಗೆ ಪವಿತ್ರಗೌಡ ಕೆರಳಿ ದರ್ಶನ್ ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ದರ್ಶನ್ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ನಾಲ್ಕು ತದಕಿ, ಬುದ್ದಿ ಕಲಿಸಬೇಕು ಎಂಬ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಹೇಳಿಕೇಳಿ ರೇಣುಕಾಸ್ವಾಮಿ ತೆಳ್ಳಗಿರುವ ವ್ಯಕ್ತಿಯಾಗಿದ್ದಾನೆ. ಬೌನ್ಸರ್ ಗಳ ಹೊಡೆತಕ್ಕೆ ರೇಣುಕಾಸ್ವಾಮಿ ಉಸಿರು ಚೆಲ್ಲಿದ್ದಾನೆ. ಆದ ದರ್ಶನ್ ಗೂ ಕೂಡ ಆಘಾತವಾಗಿದೆ. ಎಂತಹ ಪ್ರಮಾದ ನನ್ನಿಂದಾಯ್ತು ಎಂದು ಪಶ್ಚಾತಾಪ ಕಾಡತೊಡಗಿದೆ. ಎಲ್ಲಾ ನಿನ್ನಿಂದಲೇ ಆಗಿದ್ದು ಎಂದು ದರ್ಶನ್  ಸ್ಥಳದಲ್ಲಿದ್ದ ಪವಿತ್ರಗೌಡಗೂ ದರ್ಶನ್ ಹಲ್ಲೆ ಮಾಡಿದ್ದಾರೆ. ಪವಿತ್ರಗೌಡ ನೆನ್ನೆ ತಾನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ತನ್ನಿಂದಾದ ತಪ್ಪನ್ನು ಮರೆ ಮಾಚಲು ದರ್ಶನ್ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದಾರೆ. ಪ್ರಕರಣ ಮರೆ ಮಾಚಲು ಬೇರೆಯವರು ಪೊಲೀಸ್ ಠಾಣೆಗೆ ಶರಣಾದರೂ, ಅನುಮಾನಗೊಂಡ ಪೊಲೀಸರು ನಿಜವಾದ ಆರೋಪಿಗಳನ್ನು ಬಂಧಿಸಿದ್ದಾರೆ.

 

The incident raises questions about Darshan's intentions and the role of Pavitra Gowda in the events.