ಹುಣಸೋಡು ಸ್ಫೋಟದ ಪ್ರಕರಣದ ತನಿಖೆಯ ಜವಬ್ದಾರಿಯನ್ನು ಸಿಇಎನ್ ಠಾಣಾಧಿಕಾರಿಗೆ ನೀಡಲು ಅವಕಾಶ ಇಲ್ಲವೇ ಜೆಪಿ ಎಕ್ಸ್​ಕ್ಲ್ಯೂಸಿವ್​

Did the IG make a mistake by entrusting the responsibility of investigating the Hunasodu blast case to the Station House Officer of CEN? What is the argument of the A2 accused who has filed a writ petition in the High Court? JP Exclusive

ಹುಣಸೋಡು ಸ್ಫೋಟದ  ಪ್ರಕರಣದ ತನಿಖೆಯ ಜವಬ್ದಾರಿಯನ್ನು ಸಿಇಎನ್ ಠಾಣಾಧಿಕಾರಿಗೆ ನೀಡಲು ಅವಕಾಶ ಇಲ್ಲವೇ ಜೆಪಿ ಎಕ್ಸ್​ಕ್ಲ್ಯೂಸಿವ್​
Shivamogga explosion investigation, hunasodu blast investigation,

Shivamogga explosion investigation 21-01-2021 ರ ಜನವರಿ ರಾತ್ರಿ 10.20 ಕ್ಕೆ ಶಿವಮೊಗ್ಗ ನಗರದ ಹೊರವಲಯದಲ್ಲಿ ಸಂಭವಿಸಿದ ಹುಣಸೋಡು ಸ್ಪೋಟ ಪ್ರಕರಣ ನೆನೆದರೆ..ಈಗಲೂ ಜನರು ಬೆಚ್ಚಿಬೀಳುತ್ತಾರೆ. ಎಸ್.ಎಸ್ ಕ್ರಷರ್ ಕ್ವಾರಿಯಲ್ಲಿ ಸ್ಪೋಟಕ ತುಂಬಿದ ಕ್ಯಾಂಟರ್ ಲಾರಿಯಿಂದ ಬೊಲೊರೊ ವಾಹನಕ್ಕೆ ಸ್ಪೋಟಕ ಸರಬರಾಜು ಮಾಡುವಾಗ ಉಂಟಾದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸ್ಪೋಟದ ತೀವೃತೆ ಆಗಸದೆತ್ತರಕ್ಕೇರಿ ಮಶ್ರೂಮ್​ ಮಾದರಿ ಸಂಭವಿಸಿದ ಸ್ಪೋಟದಲ್ಲಿ ಸುಮಾರು 150 ಕಿಲೋಮೀಟರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಪೋಟದ ಸದ್ದು ಅಪ್ಪಳಿಸಿತ್ತು. ಹುಣಸೋಡು ಸನಿಹದ ಮನೆಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ವು..ಸ್ಪೋಟದ ತೀವ್ರತೆಗೆ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ರು..ಹುಣಸೋಡು ಗ್ರಾಮದಲ್ಲಿ ಹಲವರಿಗೆ ಗಂಭೀರ ಗಾಯಗಳಾದವು. ಹುಣಸೋಡು ಸ್ಟೋಟ ಘಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಹ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ರು.

*ಹೊಲಕ್ಕೆ ಬಿದ್ದ ಬೆಂಕಿ! 10 ಲಕ್ಷ ರೂಪಾಯಿ ನಷ್ಟ!*

ಪುಲ್ವಾಮ ದಾಳಿಯ ಸ್ಪೋಟಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಸ್ಪೋಟಕ

ಕ್ವಾರಿ ಸ್ಪೋಟದ ಸ್ಥಳದಲ್ಲಿದ್ದುದು ಪುಲ್ಬಾಮ ಧಾಳಿಗೆ ಉಗ್ರರು ಬಳಸಿದ್ದ ಸ್ಫೋಟಕಕ್ಕಿಂತ ಹತ್ತು ಪಟ್ಟು ಸ್ಪೋಟಕ ಸಾಮಗ್ರಿ ಎಂಬ ಆತಂಕದ ಸಂಗತಿ ಕೇಳಿದಾಗ ಜನರು ಬೆಚ್ಚಿಬಿದ್ರು. ಪುಲ್ವಾಮ ದಾಳಿ ವೇಳೆ ಮುನ್ನೂರು ಕೆ.ಜಿ. ಸ್ಪೋಟಕವನ್ನು ಉಗ್ರರು ಬಳಸಿದ್ದರು. ಆದರೆ, ಹುಣಸೋಡುವಿನಲ್ಲಿ ಸ್ಪೋಟಗೊಂಡ ವಾಹನದಲ್ಲಿ ಸುಮಾರು ಮೂರು ಸಾವಿರ ಕೆ.ಜಿ. ಜಿಲೆಟಿನ್ ಮತ್ತು ಡಿಟೋನೇಟರ್ ಅಮೋನಿಯಂ ನೈಟ್ರೇಟ್ ಜೆಲ್ ಗಳಿತ್ತು. ಭಾರೀ ಪ್ರಮಾಣದ ಸ್ಪೋಟಕದ ವಾಹನ ಸ್ಪೋಟಿಸಿದ್ದರಿಂದಲೇ ಸ್ಪೋಟದ ಸದ್ದು ಘಟನಾ ಸ್ಥಳದಿಂದ 150 ಕಿ.ಮಿ. ದೂರದವರೆಗೆ ಕೇಳಿಬರಲು ಕಾರಣವಾಯಿತು.

*BREAKING NEWS : ಶಿಫಾರಸ್ಸುಗಳಿಗೆ ಸಿಎಂ ಶಾಕ್​! ತಹಶೀಲ್ದಾರ್​ ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆಗಳಿಗೆ ಬ್ರೇಕ್*

ಪ್ರಕರಣದ ಎರಡನೇ ಆರೋಪಿಯಿಂದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆ

ಹುಣಸೋಡು ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ಆಂಧ್ರದ ಮಂಜುನಾಥ್ ಸಾಯಿ ತನಿಖೆಯ ವಿಧಾನವನ್ನೇ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ನವಂಬರ್ 2022 ಅರ್ಜಿ ಸಲ್ಲಿಸಿ ಕೇಸ್ ವಜಾಗೊಳಿಸುವಂತೆ ಕೋರಿದ್ದಾನೆ.  ಪ್ರಕರಣದ ತನಿಖೆಯನ್ನು ಸಿಐಡಿ ಅಥವಾ ಸಿಓಡಿಗೆ ನೀಡಬಹದಿತ್ತು. ಪ್ರಕರಣದ ತನಿಖೆಯನ್ನಯ ಸ್ಥಳೀಯ ಮಟ್ಟದಲ್ಲಿಯೇ ನಡೆಸಲಾಗಿದೆ. ಮೇಲಾಗಿ ಸೈಬರ್​ ಕ್ರೈಂಗಳನ್ನ ವಿಶೇಷವಾಗಿ ತನಿಖೆ ನಡೆಸುವ ಸಿಇಎನ್​ ಠಾಣೆಯ ಠಾಣಾಧಿಕಾರಿಗೆ, ಹುಣಸೋಡು ಸ್ಫೋಟದ ತನಿಖೆಯ ಜವಾಬ್ದಾರಿಯನ್ನು ನಿಡಿದ್ದು ತರವೇ? ಘನ ಸರ್ಕಾರದ ಆದೇಶಕ್ಕಿಂತಲೂ, ಐಜಿಯವರು ನೀಡಿರುವ ಸೂಚನೆಯನ್ನು ಪಾಲಿಸಿದ್ದು ಸರಿಯೇ? ಎಂದು ಅರ್ಜಿದಾರ ಹೈಕೊರ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ಸದ್ಯ ಜಸ್ಟೀಸ್​ ನಟರಾಜನ್ ರವರ ಬೆಂಚ್ ನಲ್ಲಿರುವ ಕೇಸ್ ಇನ್ನು ಒಂದು ವಾರದಲ್ಲಿ ತಾರ್ಕಿಕ ಅಂತ್ಯ ಕಾಣಲಿದೆ.

*cs shadakshari : ಎಲೆಕ್ಷನ್​ಗೆ ನಿಲ್ತಾರಾ ರಾಜ್ಯಾಧ್ಯಕ್ಷ!? ಸಿಎಸ್​ ಷಡಾಕ್ಷರಿ ಹೇಳಿದ್ದೇನು? ಸರ್ಕಾರಿ ನೌಕರರಿಗೆ ಇನ್ಮುಂದೆ ಸಿಗಲಿದೆ ಈ ಸೌಲಭ್ಯ*

ಸಿಇಎನ್ ಠಾಣೆಗೆ ತನಿಖೆ ನಡೆಸಲು ಅಧಿಕಾರವಿಲ್ಲವೇ..ಹಾಗಾದ್ರೆ ಸಿಆರ್ ಪಿಸಿ 36 ನಲ್ಲಿರೋದೇನು?

ಅಷ್ಟಕ್ಕೂ ದೇಶದ ಗಮನ ಸೆಳೆದ ಹುಣಸೋಡು ಸ್ಪೋಟ ಪ್ರಕರಣದ ಕೇಸ್ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿತ್ತು. ಆದರೆ ತನಿಖೆಯಾಧಿಕಾರಿಯಾಗಿ ಸಿಇಎನ್ ಠಾಣೆಯ ಕೆ.ಟಿ ಗುರುರಾಜ್ ರವರಿಗೆ ತನಿಖೆ ಜವಾಬ್ದಾರಿಯನ್ನು ಮೇಲಾಧಿಕಾರಿಗಳು ವಹಿಸಿದ್ರು. ಇದರಲ್ಲಿ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಾಯಿ ಮಂಜುನಾಥ್  ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದಾರೆ. ಆದರೆ ಸಿಆರ್ ಪಿಸಿ ಸೆಕ್ಷನ್ 36 ರ ಅಡಿಯಲ್ಲಿ ಡಿಜಿಯವರು ರಾಜ್ಯದ ಯಾವ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸುವ ಅಧಿಕಾರ ಹೊಂದಿದ್ದಾರೆ. ಅದರಂತೆ ಹುಣಸೋಡು ಸ್ಪೋಟ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ರೂ,  ಸಿಇಎನ್ ಠಾಣೆಯ ಐಓ ಗುರುರಾಜ್ ಪ್ರಕರಣದ ತನಿಖೆ ನಡೆಸಿ ಚಾರ್ಚ್ ಶೀಟ್ ಸಲ್ಲಿಸಿದ್ದರು. 

ಆದರೆ  ಸಿಆರ್ ಪಿಸಿ  36 ಕಲಂ ಅಡಿ ಐಜಿಯವರಿಗೆ ತಮ್ಮ ವಲಯ ವ್ಯಾಪ್ತಿಯ ಯಾವುದೇ ಅಧಿಕಾರಿಗೆ ತನಿಖೆ ಕೈಗೊಳ್ಳಲು ಆದೇಶ ನೀಡಲು ಅವಕಾಶವಿದೆ. ಅದರಂತೆ ಹುಣಸೋಡು ಸ್ಪೋಟ ಪ್ರಕರಣದ ತನಿಖೆಯ ವಿಚಾರಣೆಯ ಜವಬ್ದಾರಿಯನ್ನು ಸಿಇಎನ್ ಇನ್ ಸ್ಪೆಕ್ಟರ್ ಗುರುರಾಜ್ ರವರಿಗೆ ವಹಿಸಿ ಅಂದಿನ ಐಜಿ ಆದೇಶ ಮಾಡಿದ್ದರು. ಇನ್ ಸ್ಪೆಕ್ಟರ್ ಗುರುರಾಜ್, ಗ್ರಾಮಾಂತರ ಠಾಣೆಯ ತನಿಖಾಧಿಕಾರಿಯಾಗಿಯೇ ತನಿಖೆ ನಡೆಸಿ, ಗ್ರಾಮಾಂತರ ಠಾಣೆಯ ಮೂಲಕವೇ ಕೋರ್ಟ್ ಗೆ ಚಾರ್ಟ್ ಶೀಟ್ ಸಲ್ಲಿಸಿದ್ದಾರೆ. ಆರೋಪಿತರು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಗೆ, ಸರ್ಕಾರದ ಪಿಪಿಯವರು ಪೊಲೀಸರ ಪರ ಸಮರ್ಥವಾಗಿಯೇ ವಾದ ಮಂಡಿಸಿದ್ದಾರೆ. ಇನ್ನೆರಡು ವಾರದೊಳಗೆ ಆರೋಪಿತರು ಸಲ್ಲಿಸಿರುವ ಅರ್ಜಿಯು ಹೈಕೋರ್ಟ್ ನಲ್ಲಿ ವಜಾಗೊಳ್ಳುವ ಭರವಸೆಯಲ್ಲಿ ಪೊಲೀಸರಿದ್ದಾರೆ. ಎರಡು ವರ್ಷಗಳಿಂದ ಜಾಮೀನಿಗಾಗಿ ಪರಿತಪಿಸುತ್ತಿರುವ ಆರೋಪಿತರು, ಹೇಗಾದ್ರೂ ಮಾಡಿ ಪ್ರಕರಣದಿಂದ ಹೊರಬರುವ ತರಾತುರಿಯಲ್ಲಿ ಇನ್ನಿಲ್ಲದ ರಹದಾರಿಗಳನ್ನು ಕಂಡುಕೊಂಡಿದ್ದಾರೆ ಎನ್ನಲಾಗಿದೆ.

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com