ಮೊನ್ನೆ ನಡೆದಿದ್ದ ಈ ಲಾರಿ ಆಕ್ಸಿಡೆಂಟ್ ಹುಣಸೋಡು ಸ್ಫೋಟ ನೆನಪಿಸ್ತಿದೆ! ಏಕೆ ಗೊತ್ತಾ? ಏನೋ ಅದೃಷ್ಟ ಚೆನ್ನಾಗಿತ್ತು?

shivamogga hunasodu blast case to cen |The lorry accident reminds me of the Hunsodu blast | public news live kannada,news 1 kannada live,karnataka public news,

ಮೊನ್ನೆ ನಡೆದಿದ್ದ ಈ ಲಾರಿ ಆಕ್ಸಿಡೆಂಟ್ ಹುಣಸೋಡು ಸ್ಫೋಟ ನೆನಪಿಸ್ತಿದೆ! ಏಕೆ ಗೊತ್ತಾ? ಏನೋ ಅದೃಷ್ಟ ಚೆನ್ನಾಗಿತ್ತು?
shivamogga hunasodu blast case ,public news live kannada,news 1 kannada live

ಶಿವಮೊಗ್ಗದಿಂದ ಆಯನೂರು-ರಿಪ್ಪನ್​ ಪೇಟೆ ಮಾರ್ಗದ ಮಧ್ಯೆ ಮೊನ್ನೆ ಒಂದು ಅಪಘಾತ ಸಂಭವಿಸಿತ್ತು. ಟ್ಯಾಂಕರ್ ಲಾರಿಯೊಂದು ನಿಯಂತ್ರಣ ತಪ್ಪಿ ಒಂದು ಬದಿಗೆ ಪಲ್ಟಿಯಾಗಿ ಬಿದ್ದಿತ್ತು. ಅಗ್ನಿಶಾಮಕ ಸಿಬ್ಬಂಧಿ ವಿಷಯ ತಿಳಿಯುತ್ತೇ ತುರ್ತಾಗಿ ಸ್ಥಳಕ್ಕೆ ಹೋಗಿಸ್ಥಳವನ್ನು ಸುತ್ತುವರಿದುಸುರಕ್ಷತಾ ಕ್ರಮವನ್ನು ಕೈಗೊಂಡಿದ್ದರು.

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ

ಅಲ್ಲದೆ ಅಗತ್ಯವಿದ್ದ ವ್ಯವಸ್ಥೆಗಳನ್ನು ಬಳಸಿ, ಅಲ್ಲಿ ಯಾವುದೇ ಅಪಾಯವಾಗದಂತೆ ಎಚ್ಚರವಹಿಸಿದ್ದರು. ಇಷ್ಟಾದರು ಲಾರಿ ಬಿದ್ದ ಸ್ಥಳದಲ್ಲಿ ಹೊಗೆ ಬರುತ್ತಿತ್ತು. ಅದು ಆತಂಕವನ್ನು ಸಹ ಮೂಡಿಸಿತ್ತು. ದಾರಿಯಲ್ಲಿ ಹೋಗುತ್ತಿದ್ದವರು, ಏನೋ ಆಸಿಡ್ ಲಾರಿ ಇರಬೇಕು ಎಂದು ಹೇಳುತ್ತಿದ್ದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಲಭ್ಯವಾಗಿದ್ದವು.

ದಿನದ ರಾಜಕಾರಣದ ಸುದ್ದಿ : ಮೋದಿ & ಬೊಮ್ಮಾಯಿ ವಿರುದ್ಧ ದೇವರಿಗೆ ಉಯಿಲು ಕೊಡಲಿ ಹರತಾಳು ಹಾಲಪ್ಪ

ಘಟನೆ ಹುಣಸೋಡು ಸ್ಫೋಟವನ್ನು ನೆನಪಿಸ್ತಿದೆ ಏಕೆ ಗೊತ್ತಾ?

ಶಿವಮೊಗ್ಗದ ಹುಣಸೋಡಿನಲ್ಲಿ ಎಕ್ಸ್​ಪ್ಲೋಸಿವ್ಸ್​ ಬ್ಲಾಸ್ಟ್ ಆದಾಗ ಇಡೀ ದೇಶದ ಜನರು ಸುದ್ದಿ ತಿಳಿದು ಆತಂಕ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಗಮನವನ್ನು ಸೆಳೆದಿದ್ದ ಆ ಘಟನೆಯು, ಸಿಟಿಯ ನಡುವೆಯೇ ನಡೆದಿದ್ದರೇ, ಸಂಭವಿಸಬಹುದಾದ ಅನಾಹುತದ ಅಂದಾಜು ಮಾಡುವುದು ಸಹ ಕಷ್ಟವಾಗಿತ್ತು. ಹಾಗಾಗಿ ಶಿವಮೊಗ್ಗದ ಜನರು ಹುಣಸೋಡು ಸ್ಫೋಟ ಎಂದರೆ, ಉಸಿರು ಬಿಗಿ ಮಾಡಿಕೊಳ್ತಾರೆ. ಇನ್ನೂ ಮೊನ್ನೆ ನಡೆದ ಆಕ್ಸಿಡೆಂಟ್ ಏಕೆ ಹುಣಸೋಡು ವಿಸ್ಫೋಟವನ್ನು ನೆನಪು ಮಾಡಿಕೊಡ್ತಿದೆ ಎಂಬ ವಿವರವನ್ನು ಹೇಳುತ್ತೇವೆ. ಅವತ್ತು ನಡೆದ ಘಟನೆ ವಿವರ ಇಲ್ಲಿದೆ ಓದಿ ಹೊಸನಗರ ರಸ್ತೆಯಲ್ಲಿ ಟ್ಯಾಂಕರ್​ ಲಾರಿ ಪಲ್ಟಿ/ ಆತಂಕ ಮೂಡಿಸಿದ ಹೊಗೆ/ ಅಗ್ನಿಶಾಮಕ ಸಿಬ್ಬಂದಿ ದೌಡು

ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್​ ನ್ಯೂಸ್ / ದಾವಣಗೆರೆ, ಆನವೇರಿ, ಮಲೆಬೆನ್ನೂರು, ಹರಿಹರ ಕೃಷಿಕರಿಗೆ ಅನುಕೂಲ

ಅಂತಹದ್ದೊಂದು ಘಟನೆಯನ್ನು ಮೊನ್ನೆಯ ಟ್ಯಾಂಕರ್​ ಲಾರಿ ನೆನಪಿಸ್ತಿದೆ. ಏಕೆಂದರೆ, ಅವತ್ತು ಹೆಬ್ರಿಯಿಂದ ಬಳ್ಳಾರಿಗೆ ಹೊರಟಿದ್ದ ಟ್ಯಾಂಕರ್​ ಲಾರಿಯಲ್ಲಿ ಇದ್ದಿದ್ದು ವಿಸ್ಫೋಟಕಗಳಿಗೆ ಬಳಸಲು ರಾ ಮೆಟಿರಿಯಲ್​ಗಳು. ಸೋಡಿಯಂ ನೈಟ್ರೈಟ್ ಹಾಗೂ ಕೆಲಾ ಮೆಟ್ರಿಕ್ಸ್ ಎಂಬ ಮೂಲವಸ್ತುಗಳನ್ನು ಆ ಲಾರಿ ಬಳ್ಳಾರಿಗೆ ತೆಗದುಕೊಂಡು ಹೋಗುತ್ತಿತ್ತು.

ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್​ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ

 ಕಲ್ಲುಕ್ವಾರಿಗಳಿಗೆ ವಿಸ್ಫೋಟಕಗಳನ್ನು ಒದಗಿಸುವ ಕಂಪನಿಯ ಲಾರಿ ಅದಾಗಿದ್ದು, ಆಕ್ಸಿಡೆಂಟ್ ಆಗಿದ್ದ ಜಾಗದಲ್ಲಿ ಅಪಾಯ ಸಂಭವಿಸದರೇ ಇರುವುದುಅದೃಷ್ಟದ ಸಂಗತಿ, ಈ ನಿಟ್ಟಿನಲ್ಲಿ ತಕ್ಷಣಕ್ಕೆ ಕಾರ್ಯನಿರತವಾಗಿದ್ದ ಅಗ್ನಿಶಾಮಕ ಸಿಬ್ಬಂದಿಯ ಕೆಲಸವನ್ನು ಮೆಚ್ಚಲೇಬೇಕು.

ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆ, ನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT

ವಿಸ್ಫೋಟಕಗಳನ್ನು ಸಾಗಿಸುವ ವೇಳೇಯಲ್ಲಿ ಅದರದ್ದೇ ಆದ ಹತ್ತು ಹಲವು ನಿಯಮಗಳಿವೆ. ಆ ನಿಯಮಗಳನ್ನು ಯಾರು ಸಹ ದಾಟಬಾರದು. ಆದರೆ, ನಿಯಮಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ವಿಸ್ಫೋಟಕಗಳನ್ನು ಸಾಗಿಸಿದ್ದ ಹಿನ್ನೆಲೆಯಲ್ಲಿ ಹುಣಸೋಡು ಸ್ಫೋಟ ಸಂಭವಿಸಿತ್ತು. ಅದಾದ ಬಳಿಕವೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದ ಉದಾಹರಣೆಗಳನ್ನು ಟುಡೆ ತಂಡವೇ ವರದಿ ಮಾಡಿತ್ತು. ಮೊನ್ನೆ ನಡೆದ ಆಕ್ಸಿಡೆಂಟ್​ ಘಟನೆಯಲ್ಲಿಯು ಸಹ ಲಾರಿ ಓವರ್​ ಸ್ಫೀಡ್​ನಿಂದಲೇ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿರುವುದು ಸ್ಪಷ್ಟವಾಗಿದೆ.

ಇದನ್ನು ಸಹ ಓದಿ : ಹರತಾಳು ಹಾಲಪ್ಪರವರು ಶರಾವತಿ ಸಂತ್ರಸ್ತರಿಗಾಗಿ ಧರ್ಮಸ್ಥಳದಲ್ಲಿ ನ್ಯಾಯ ಕೇಳಲು ಹೋಗಿದ್ದಕ್ಕೆ ಕಾಂತಾರ ಮಹಿಮೆ ಕಾರಣ

ಮೂಲವಸ್ತುಗಳಲ್ಲಿ ಸ್ಫೋಟ ಸಂಭವಿಸುವುದು ಕಡಿಮೆಯೇ. ಆದಾಗ್ಯು, ಆ ಸಾಮಾಗ್ರಿಗಳನ್ನು ಸಾಗಿಸುವಾಗ ಎಚ್ಚರವಹಿಸಲೇ ಬೇಕಿರುವುದು ಅಷ್ಟೆ ಸತ್ಯ. ಹೀಗಿದ್ದರೂ ಲಾರಿ ಓವರ್​ ಸ್ಪೀಡ್​ನಲ್ಲಿ ಬಂದಿದೆ. ಆಕ್ಸಿಡೆಂಟ್ ಆಗಿದೆ. ಇನ್ನೂ ಮೊನ್ನೆ ಆಕ್ಸಿಡೆಂಟ್ ಆಗಿದ್ದ ಲಾರಿಯು, ಹುಣಸೋಡು ಪ್ರಕಣದಲ್ಲಿ ತಳುಕು ಹಾಕಿಕೊಂಡಿದ್ದ ಕಂಪನಿಗೆ ಸೇರಿದ್ದ ಲಾರಿ ಆಗಿದೆ ಎಂಬ ಮಾಹಿತಿ ಇದೆ.    

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link