ಶಿವಮೊಗ್ಗ ಮುಖ್ಯರಸ್ತೆಯಲ್ಲಿಯೇ ಪಂಕ್ಚರ್ ಆದ 10 ಟನ್ ವಿಸ್ಫೋಟಕ ತುಂಬಿದ ಲಾರಿ! ಹುಣಸೋಡು ನೆನಪಿಸ್ತಿದೆ ಘಟನೆ! Malenadu today Exclusive
The incident reminds me of Hunsodu!
The incident reminds me of Hunsodu! ಶಿವಮೊಗ್ಗ ಮುಖ್ಯರಸ್ತೆಯಲ್ಲಿಯೇ ಪಂಕ್ಚರ್ ಆದ 10 ಟನ್ ವಿಸ್ಫೋಟಕ ತುಂಬಿದ ಲಾರಿ! ಹುಣಸೋಡು ನೆನಪಿಸ್ತಿದೆ ಘಟನೆ! ಅಪಾಯಕ್ಕೆ ದಾರಿ ತೋರಿಸ್ತಿದೆ ನಿರ್ಲಕ್ಷ್ಯ? | Malenadu today story / SHIVAMOGGA Hunsodu!
ಶಿವಮೊಗ್ಗದಲ್ಲಿ ಕಳೆದ ಜನವರಿ 21 ರಂದು ಹುಣಸೋಡು ಸ್ಪೋಟ ಸಂಭವಿಸಿತ್ತು . ಈ ಘಟನೆಯಲ್ಲಿ ಬರೋಬ್ಬರಿ ಆರು ಮಂದಿ ಸಾವನ್ನಪ್ಪಿದ್ದರು ಅಲ್ಲದೆ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆಘಾತಕಾರಿ ಶಬ್ಧ ಕೇಳಿ ಬಂದಿತ್ತು. ಮೇಲಾಗಿ ಈ ಘಟನೆಯ ವೇಳೆ ಸ್ಥಳದಲ್ಲಿದ್ದರು ಎನ್ನಲಾದ ಇನ್ನಿಬ್ಬರ ಸುಳಿವು ಇವತ್ತಿಗೂ ಸಿಕ್ಕಿಲ್ಲ. ಇವತ್ತಿಗೂ ನಿಗೂಢವಾದ ಕೆಲವೊಂದು ವಿಚಾರಗಳು ಜನರಲ್ಲಿ ಆತಂಕ ಮೂಡಿಸುತ್ತಲೇ ಇವೆ.. ಆದರೆ ಈ ಆತಂಕ ಅವರುಗಳಿಗಿಲ್ಲ. ಹಾಗಾಗಿ ಶಿವಮೊಗ್ಗ ನಗರವನ್ನ ಮತ್ತೆ ಅಪಾಯದ ಮಡಿಲಲ್ಲಿ ತಂದಿಡುತ್ತಿದ್ದಾರೆ..ಬರೋಬ್ಬರಿ ಹತ್ತು ಟನ್ ಸ್ಪೋಟಕ ಶಿವಮೊಗ್ಗ ಸಿಟಿಯಲ್ಲಿ ಆತಂಕವೇ ಇಲ್ಲದಂತೆ ಓಡಾಡುತ್ತಿದೆ...ಮತ್ತೊಂದು ಅವಘಡ ಸಂಭವಿಸಿದರೆ ಯಾರು ಹೊಣೆ ಅನ್ನೋದು ಈ ಸ್ಟೋರಿಯ ಪ್ರಶ್ನೆ
ಶಿವಮೊಗ್ಗದ ಹೊರಭಾಗದಲ್ಲಿ ಇರುವ ಶೈನ್ ಹೋಟೆಲ್ ಸಮೀಪ ಇವತ್ತು ಬೆಳಗ್ಗೆಯಿಂದಲೂ ಲಾರಿಯೊಂದು ನಿಂತಿತ್ತು..ಮೇಲ್ನೋಟಕ್ಕೆ ಲಾರಿ ಟಯರ್ ಪಂಚರ್ ಆಗಿತ್ತು ..ಅದನ್ನ ಪಂಕ್ಚರ್ ಶಾಪ್ ನ ಹುಡುಗುರು ಸರಿ ಮಾಡುತ್ತಿದ್ರು. ಆದರೆ ದಾರಿಯಲ್ಲಿ ನಿಂತಿದ್ದ ಲಾರಿಯಲ್ಲಿ ಏನಿದೆ ಅನ್ನೋದು ಯಾರು ವಿಚಾರಿಸಿರಲಿಲ್ಲ. ಅದನ್ನು ಹೇಳುವ ಗೋಜಿಗೂ ಸಿಬ್ಬಂದಿ ಹೋಗಿರಲಿಲ್ಲ. ಆದರೆ ಲಾರಿಯಲ್ಲಿ ಬರೋಬ್ಬರಿ ಹತ್ತು ಟನ್ ಸ್ಪೋಟಕಗಳು ತುಂಬಿಡಲಾಗಿತ್ತು. ಈ ವಿಚಾರ ತಿಳಿಯುತ್ತಲೇ ಪಂಕ್ಷರ್ ಹಾಕುತ್ತಿದ್ದ ಹುಡುಗರು ಕೂಡ ಹೆದರಿ ದೂರ ಸರಿದಿದ್ದಾರೆ. ಇನ್ನೂ ಜನರನ್ನ ಬೆಚ್ಚಿಬೀಳಿಸುವಂತ ವಿಸ್ಫೋಟಕ ಇಟ್ಟು ಕೊಂಡು ಕರಾವಳಿಯಿಂದ ಇಲ್ಲಿಯವರೆಗೂ ಸಾಗಿಸಿಕೊಂಡು ಬಂದವರಿಗೆ ಪಂಕ್ಷರ್ ಶಾಪ್ ಸಿಬ್ಬಂದಿಗೆ ಇದ್ದ ಭಯವಿರಲಿಲ್ಲ. ಹುಣಸೋಡು ಸ್ಪೋಟದ ಬಳಿಕ, ವಿಸ್ಫೋಟಕ ಸಾಗಾಣಿಕೆ ಸಂಬಂಧ ಮೊದಲೇ ಕಠಿಣವಾಗಿದ್ದ ರೂಲ್ಸ್ ನ್ನ ಇನ್ನಷ್ಟು ಬಲಿಷ್ಟಗೊಳಿಸಲಾಗಿತ್ತು. ಆದರೆ ಇದನ್ನ ಪಾಲಿಸಲಾಗಿದ್ಯಾ ಅಂತಾ ನೋಡಿದವರು ಕಡಿಮೆ. ರೂಲ್ಸ್ ಪ್ರಕಾರ ಸ್ಫೋಟಕ ತುಂಬಿದ ಲಾರಿಗಳನ್ನ ಸಿಟಿಯೊಳಗೆ ಎಲ್ಲಿಯು ನಿಲ್ಲಿಸುವಂತಿಲ್ಲ..
ಸಾಗಿಸುವಾಗಲು ತಕ್ಕ ಎಸ್ಕಾರ್ಟ್ ಮಾಡಿಕೊಂಡಿರಬೇಕು ..ಸೂಕ್ಷ್ಮ ಸ್ಥಿತಿಯಲ್ಲಿ ಹೈ ಮೇಂಟೇನೆನ್ಸ್ ನೊಂದಿಗೆ ಲಾರಿಯನ್ಬ ಜಾಗುರುಕತೆಯಿಂದ ಸಾಗಿಸಬೇಕು... ಆದರೆ ಇಲ್ಲಿ ಲಾರಿ ಸಿಬ್ಬಂದಿಗೆ ಯಾವುದೆ ರಕ್ಷಾ ಕವಚಗಳಿಲ್ಲ..ಅಕ್ಕಿ ಮೂಟೆ ತುಂಬಿಕೊಂಡ ಹಾಗೆ ಲಾರಿಯಲ್ಲಿ ಸ್ಫೋಟಕ ತುಂಬಲಾಗಿದೆ. ಇನ್ನೊಂದೆಡೆ ಯಾವುದೇ ಎಚ್ಚರಿಕೆಯನ್ನ ಇಲ್ಲಿ ವಹಿಸಲಾಗಿಲ್ಲ. ಮಲೆನಾಡು ಟುಡೇ ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಪೊಲೀಸರಿಗೆ ಈ ಬಗ್ಗೆ ಯಾವೊಂದು ಮಾಹಿತಿಯು ಇರಲಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿದೆ.
ಆರು ಜನರ ಜೀವ ನುಂಗಿದ ವಿಸ್ಫೊಟಕಗಳು ಮತ್ಯಾರ ಜೀವವನ್ನಾದರೂ ತೆಗೆಯಬಲ್ಲದು ಎನ್ನುವುದು ಅದನ್ನ ಸಾಗಿಸಬಲ್ಲಬರಿಗೆ ಗೊತ್ತಿಲ್ಲದೆ ಇಲ್ಲ. ಆದರೆ ಪ್ರತಿದಿನ ಶಿವಮೊಗ್ಗದ ನಗರದೊಳಗೆ 2 ರಿಂದ ಮೂರು ಲಾರಿಗಳು ಬ್ಲಾಸ್ಟಿಗ್ ಮೆಟಿರಿಯಲ್ ಗಳನ್ನ ಟನ್ ಗಟ್ಲೆ ತುಂಬಿಸಿಕೊಂಡು ಸಾಗುತ್ತವೆ..ಇದಕ್ಕೆ ಸಾಕ್ಷಿ ಇವತ್ತು ಪಂಕ್ಚರ್ ಆಗಿ ನಿಂತಿದ್ದ ಲಾರಿ.
ಕಾರ್ಕಳ ಮೂಲದ ಕೆಲ್ಟೆಕ್ ಸಂಸ್ಥೆಗೆ ಲಾರಿ ವಿಸ್ಪೋಟಕವನ್ನು ಸಾಗಿಸಲಾಗುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಕಾನೂನು ಬದ್ಧವಾಗಿಯೇ ಸ್ಫೋಟಕವನ್ನು ಸಾಗಿಸಲಾಗ್ತಿದೆಯಾದರೂ ಕೂಡ, ಅದನ್ನ ಸಾಗಿಸುವ ರೀತಿಯಲ್ಲಿ ಕಡ್ಡಾಯವಾಗಿ ವಹಿಸಲೇಬೇಕಾದ ಎಚ್ಚರಿಕೆಯನ್ನು ವಹಿಸಿಲ್ಲ ಎನ್ನುವುದು ನಿಜಸತ್ಯ! ಈ ಸಂಬಂಧ ಪೊಲೀಸರಿಗೂ ಸ್ಫೋಟಕ ಸಾಗಾಟದ ಬಗ್ಗೆ ಮಾಹಿತಿಯಿರಲಿಲ್ಲ ಎನ್ನುವುದು ಸಹ ವ್ಯವಸ್ಥೆಯ ವೈಪಲ್ಯ ಎನ್ನುವ ಸಂಶಯ ಮೂಡಿಸುತ್ತಿದೆ.
ಇನ್ನೂ ಹೆಬ್ರಿ, ತೀರ್ಥಹಳ್ಳಿ ಮೂಲಕ ಬೈಪಾಸ್ ರಸ್ತೆ ಮೂಲಕ ಹೊಳೆಹೊನ್ನೂರು, ಚಿತ್ರದುರ್ಗ, ದಾವಣಗೆರೆಯಲ್ಲಿನ ವ್ಯಕ್ತಿಗಳಿಗೆ ಈ ಸ್ಫೋಟಕಗಳನ್ನು ಸಾಗಿಸಲಾಗುತ್ತಿದೆ ಎನ್ನುವ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಶಿವಮೊಗ್ಗ ನಗರದ ಮುಖ್ಯರಸ್ತೆಯ ಬದಿಯಲ್ಲಿ ನಿಂತಿದ್ದು ಸ್ಫೋಟಕ ತುಂಬಿದ ಲಾರಿ ಎನ್ನುವ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಪೊಲೀಸ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಸ್ಥಳಕ್ಕೆ ಭೇಟಿ ಲಾರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಆದರೆ, ಯಾವುದೋ ಸುದ್ದಿಮೂಲಗಳಿಂದ ಬ್ಲಾಸ್ಟಿಂಗ್ ಮೆಟಿರಿಯಲ್ಸ್ ಸಾಗಾಣಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಹುಣಸೋಡುವಿನಲ್ಲಿ ಲಾರಿ ಸ್ಫೋಟಗೊಳ್ಳುವುದಕ್ಕೂ ಮೊದಲು ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಸಮೀಪ ಕೆಲಕಾಲ ನಿಂತಿತ್ತು. ಅಲ್ಲದೆ ನಗರದ ಬ್ಯುಸಿ ಟ್ರಾಫಿಕ್ನ ನಡುವೆಯೇ ಅದನ್ನು ಹುಣಸೋಡುವಿಗೆ ಸಾಗಿಸಲಾಗಿತ್ತು. ಅಲ್ಲಿ ತೆರಳಿದ ಕೆಲಹೊತ್ತಿನಲ್ಲಿ ವಿಸ್ಫೋಟಕಗಳು ಸ್ಫೋಟಗೊಂಡು, ದೊಡ್ಡ ಅನಾಹುತವೇ ಸಂಭವಿಸಿತ್ತು.
ಆ ಘಟನೆ ನಡೆದು ಕೆಲವೇ ದಿನಗಳಲ್ಲಿ ಮತ್ತೆ ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ಗೆ ಪರ್ಮಿಶನ್ ನೀಡಲಾಗಿತ್ತು. ಅದಕ್ಕೆ ಬೇಕಾದ ಮೆಟಿರಿಯಲ್ಸ್ ಸಾಗಾಣಿಕೆಗೂ ಅನುಮತಿ ನೀಡಲಾಗಿತ್ತು. ಇದಕ್ಕೆ ಪೂರಕವಾಗಿ ಈ 9 ತಿಂಗಳಿನಲ್ಲಿ ಶಿವಮೊಗ್ಗ ನಗರದಲ್ಲಿ ಹಲವು ಸಲ ಸ್ಫೋಟಕ ತುಂಬಿದ ಲಾರಿಗಳು ಒಡಾಡಿವೆ. ಆದರೆ ಎಚ್ಚರಿಕೆ ವಹಿಸುವ ಕೆಲಸ ಹಾಗೂ ಜನರ ಪ್ರಾಣ ರಕ್ಷಣೆಯ ಮಹತ್ವವನ್ನು ಯಾರೊಬ್ಬರು ಕಾಳಜಿ ಮಾಡುತ್ತಿಲ್ಲ ಎನ್ನುವುದಕ್ಕೆ ಇವತ್ತು ಜನ ಸಂಧಣಿ ನಡುವೆ ಅನಾಥವಾಗಿ ಎಚ್ಚರಿಕೆ ನೀಡುತ್ತಿದ್ದ ಲಾರಿಯೇ ಸಾಕ್ಷಿ. ಅದೃಷ್ಟಕ್ಕೆ ನಿಂತ ಲಾರಿಯಲ್ಲಿ ಸ್ಫೋಟಕಗಳು ಶಾಂತವಾಗಿ ಮಲಗಿವೆ. ಎಲ್ಲಿಯಾದರೂ ಗೃಹಚಾರ ಕೆಟ್ಟು ಏನಾದರೂ ಅನಾಹುತ ಸಂಭವಿಸಿದ್ದರೇ ಯಾರು ಹೊಣೆಹೊರುತ್ತಿದ್ದರು ಎನ್ನುವುದು ಸದ್ಯದ ಪ್ರಶ್ನೆ